More

    ರಾತ್ರಿ ಹೊತ್ತು ಡ್ರಾಪ್‌ ಕೊಡೋಕೆ ಅಂತಾ ಗಾಡಿ ನಿಲ್ಲಿಸುವವರು ಈ ಸುದ್ದಿ ಓದಿದ್ರೆ ಬೆಚ್ಚಿ ಬೀಳೋದು ಖಚಿತ

    ಬೆಂಗಳೂರು: ರಾತ್ರಿ ಹೊತ್ತು ಯಾರಿಗಾದರೂ ಡ್ರಾಪ್ ಕೊಡುವ ಮುನ್ನ ಎಚ್ಚರಿಕೆ ವಹಿಸದಿದ್ದರೆ ಏನಾಗಲಿದೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ. ಈ ಸುದ್ದಿಯನ್ನು ಓದಿದರೆ ಯಾರಿಗೂ ಸಹಾಯ ಮಾಡಬಾರದು ಅಂತಾ ಅನಿಸುವುದಂತೂ ಖಂಡಿತ.

    ಹೌದು, ಅಯ್ಯೋ ಪಾಪ‌ ಡ್ರಾಪ್‌ ಕೊಡೋಣ ಅಂತ ದ್ವಿಚಕ್ರ ವಾಹನ ನಿಲ್ಲಿಸಿದ ಯುವಕನಿಗೆ ಕಾದಿತ್ತು ಶಾಕ್. ಡ್ರಾಪ್ ಕೊಡುವುದಕ್ಕೆ ಗಾಡಿ ನಿಲ್ಲಿಸಿದವನ ಮೇಲೆಯೇ ಕಿರಾತಕನೊಬ್ಬ ಹಲ್ಲೆ ಮಾಡಿರುವ ಘಟನೆ ನಗರದ ಹೊರಮಾವು ಬಳಿಯ ವಿಜಯ ಬ್ಯಾಂಕ್ ಕಾಲನಿ ಬಳಿ‌ ಮೇ 18ರ ಮಧ್ಯರಾತ್ರಿ ಸುಮಾರು 1 ಗಂಟೆ ಸುಮಾರಿಗೆ ನಡೆದಿದೆ.

    ದುಷ್ಕರ್ಮಿಯೊಬ್ಬ ಕತ್ತಿಯಿಂದ‌ ಹಲ್ಲೆ ಮಾಡಿ ಮೊಬೈಲ್ ಹಾಗೂ ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಬೈಕ್‌ಗೆ ಪೆಟ್ರೋಲ್ ತುಂಬಿಸಲು ಸಹಾಯ ಬೇಕು ಎಂದು ಬೈಕ್​ಗೆ ಕಿರಾತಕ ಅಡ್ಡ ಹಾಕಿದ್ದ. ಬಳಿಕ ಬೈಕ್ ನಿಲ್ಲಿಸುತ್ತಿದ್ದಂತೆ ಕತ್ತಿ ತೆಗೆದು ಹಲ್ಲೆ ಮಾಡಿದ್ದಾನೆ. ಎರಡ್ಮೂರು ಬಾರಿ ಕತ್ತಿಯಿಂದ ಕಿರಾತಕ ಹಲ್ಲೆ ಮಾಡಿದ್ದಾನೆ. ಹಲ್ಲೆ‌ಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಹಲ್ಲೆಗೊಳಗಾದ ವ್ಯಕ್ತಿಯನ್ನು ತರುಣ್ ಅಗರ್ವಾಲ್​ ಎಂದು ಗುರುತಿಸಲಾಗಿದೆ. ತರುಣ್​, ಪೀಪಲ್​ ಫಾರ್ ಅನಿಮಲ್ಸ್ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತರುಣ್ ಬಳಿ‌ ಇದ್ದ ಎರಡು ಮೊಬೈಲ್ ಹಾಗೂ‌ ಹೊಂಡಾ ಆಕ್ಟಿವಾ ಗಾಡಿಯನ್ನು ಖದೀಮ ಕಸಿದುಕೊಂಡು ಹೋಗಿದ್ದಾನೆ. ಇದೇ ವ್ಯಕ್ತಿ ಮತ್ತೊಂದು ರಸ್ತೆಯಲ್ಲಿ ಬೈಕ್‌ ಕೂಡ ಕದ್ದಿದ್ದಾನೆ. ಆ ದೃಶ್ಯವು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೀಗ ಎಫ್‌ಐಆರ್ ದಾಖಲಿಸಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಇನ್ಮುಂದೆ ಸಂಸಾರ ಉಳಿಸಿಕೊಳ್ಳಲು ಆಗುವುದಿಲ್ಲ: ಗಂಡನ ಕರಾಳ ಮುಖ ಬಿಚ್ಚಿಟ್ಟ ನಟಿ ಚೈತ್ರಾ ಹಳ್ಳಿಕೇರಿ

    ಕೋನಸೀಮಾ ಜಿಲ್ಲೆ ಮರುನಾಮಕರಣ: ಆಂಧ್ರದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ, ಸಚಿವರು, ಶಾಸಕರ ಮನೆಗೆ ಬೆಂಕಿ

    ಅವಿರೋಧಕ್ಕಿಲ್ಲ ಪ್ರತಿರೋಧ!; ವಿಜಯೇಂದ್ರಗೆ ಕೈಕೊಟ್ಟ ಬಿಜೆಪಿ, ಜೆಡಿಎಸ್​ನಲ್ಲಿ ಶರವಣಗೆ ಅದೃಷ್ಟ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts