More

    ಉದ್ಯೋಗಿಗಳಿಗೆ 30 ನಿಮಿಷದ ನಿದ್ರಾ ವಿರಾಮ ಘೋಷಿಸಿದ ಬೆಂಗಳೂರಿನ ಸ್ಟಾರ್ಟ್ ​ಅಪ್​ ಕಂಪನಿ!

    ಬೆಂಗಳೂರು: ಸಾಮಾನ್ಯವಾಗಿ ಕರ್ತವ್ಯದ ಅವಧಿಯಲ್ಲಿ ಯಾರಾದರೂ ನಿದ್ರಿಸಿದರೆ ಕೆಲಸಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಆದರೆ, ಬೆಂಗಳೂರಿನ ಕಂಪನಿಯೊಂದು ಇದಕ್ಕೆ ತದ್ವಿರುದ್ಧವಾಗಿದ್ದು, ತನ್ನ ಉದ್ಯೋಗಿಗಳಿಗೆ ಕೆಲಸದ ಅವಧಿಯಲ್ಲಿ ನಿದ್ರಾ ವಿರಾಮವನ್ನು ಘೋಷಿಸಿದೆ. ಕೆಲಸದ ದಕ್ಷತೆಯನ್ನು ಹೆಚ್ಚಿಸಲು ಈ ವಿನೂತನ ಯೋಜನೆಯನ್ನು ಕಂಪನಿ ಅಳವಡಿಸಿಕೊಂಡಿದೆ.

    ಹೌದು, ಬೆಂಗಳೂರು ಮೂಲದ ಸ್ಟಾರ್ಟ್​ ಅಪ್​ ಕಂಪನಿಯು ಕರ್ತವ್ಯದ ಅವಧಿಯಲ್ಲಿ ತನ್ನ ಉದ್ಯೋಗಿಗಳಿಗೆ 30 ನಿಮಿಷದ ನಿದ್ರಾ ವಿರಾಮವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಈ ವಿರಾಮದ ಯೋಜನೆ ಘೋಷಣೆ ಮಾಡಿರುವ ಕಂಪನಿಯ ಹೆಸರು ವೇಕ್​ಫಿಟ್​ ಸಲ್ಯೂಷನ್​ (Wakefit Solutions). ಟ್ವಿಟರ್​ನಲ್ಲಿ ಗುರುವಾರ ವಿವರಣೆಯುಳ್ಳು ಫೋಟೋವನ್ನು ಪೋಸ್ಟ್​ ಮಾಡುವ ಮೂಲಕ ಅಧಿಕೃತವಾಗಿ ನಿದ್ರಾ ವಿರಾಮ ಯೋಜನೆಯನ್ನು ಘೋಷಣೆ ಮಾಡಿದೆ.

    ಪೋಸ್ಟ್ ಪ್ರಕಾರ, ವೇಕ್‌ಫಿಟ್ ಸಹ-ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಅವರು ಇತ್ತೀಚೆಗೆ ಸಹೋದ್ಯೋಗಿಗಳಿಗೆ ಆಂತರಿಕ ಇಮೇಲ್ ಕಳುಹಿಸಿದ್ದಾರೆ. ಅದರಲ್ಲಿ ಉದ್ಯೋಗಿಗಳು ಮಧ್ಯಾಹ್ನ 2 ರಿಂದ 2.30ರ ನಡುವೆ ನಿದ್ರೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

    ಕಳೆದ ಆರು ವರ್ಷಗಳಿಂದ ವ್ಯವಹಾರ ಎಂಬ ನಿದ್ರೆಯಲ್ಲಿ ಮಗ್ನರಾಗಿದ್ದೇವೆ. ಆದರೆ, ವಿಶ್ರಾಂತಿಯ ನಿರ್ಣಾಯಕ ಅಂಶಕ್ಕೆ ನ್ಯಾಯ ಸಲ್ಲಿಸಲು ಈವರೆಗೂ ನಾವು ವಿಫಲರಾಗಿದ್ದೇವೆ. ನಾವು ಯಾವಾಗಲೂ ಚಿಕ್ಕ ನಿದ್ರೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇನ್ನು ಮುಂದೆ ಅದನ್ನು ಕಾರ್ಯರೂಪಕ್ಕೆ ತರುತ್ತಿದ್ದೇವೆ ಎಂದು ಚೈತನ್ಯ ಅವರು ಮೇಲ್‌ನಲ್ಲಿ ಬರೆದಿದ್ದಾರೆ.

    ಟ್ವಿಟರ್​​ನಲ್ಲಿ ವೈರಲ್​ ಆಗಿರುವ ಚೈತನ್ಯ ಅವರ ಪೋಸ್ಟ್​ಗೆ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದು, ಉತ್ತಮ ನಿರ್ಧಾರ ಎಂದು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಕೆಲಸದ ಅವಧಿಯ ಚಿಕ್ಕ ನಿದ್ರೆಯನ್ನು ಕಾರ್ನೆಲ್ ವಿಶ್ವವಿದ್ಯಾಲಯದ ಸಾಮಾಜಿಕ ಮನಶಾಸ್ತ್ರಜ್ಞ ಜೇಮ್ಸ್ ಮಾಸ್ ಅವರು ಪವರ್ ನ್ಯಾಪ್ ಅಂದರೆ ಶಕ್ತಿ ನಿದ್ರೆ ಎಂಬ ಪದವನ್ನು ಹುಟ್ಟುಹಾಕಿದರು ಈ ಶಕ್ತಿ ನಿದ್ರೆಯು ವ್ಯಕ್ತಿಯನ್ನು ವೇಗವಾಗಿ ರಿಫ್ರೆಶ್ ಮಾಡಲು ಅನುಕೂಲ ಮಾಡಿಕೊಡುತ್ತದೆ. (ಏಜೆನ್ಸೀಸ್​)

    ಪತಿ ಸತ್ತ ಬಳಿಕ ಇನ್​ಸ್ಟಾಗ್ರಾಂ ಬಳಸಿ ಟ್ರೋಲ್​ಗೊಳಗಾದ ಹಿರಿಯ ನಟಿ ನೀತೂಕಪೂರ್​!

    ಮುಂಬರುವ ಚುನಾವಣೆಯಲ್ಲಿ ಮೈಸೂರು ಭಾಗದಲ್ಲಿ ಇತಿಹಾಸ ಸೃಷ್ಟಿಯಾಗಲಿದೆ, ಸ್ಪರ್ಧಿಸಲು ಅಭಿಲಾಷೆಯೂ ಇದೆ: ಬಿ. ವೈ. ವಿಜಯೇಂದ್ರ

    ಡಿಕೆಶಿಗೆ ಅಂಜುವ ಮಗನಲ್ಲ, ಹಣ ಕೊಟ್ಟರೆ ಸಿಎಂ ಮಾಡ್ತೀನಿ ಎಂಬ ಹೇಳಿಕೆ ಕೊಟ್ಟೇ ಇಲ್ಲ ಅಂದ್ರು ಯತ್ನಾಳ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts