More

    MLA ಪುತ್ರನ ಡೆಡ್ಲಿ ಕಾರು ಅಪಘಾತಕ್ಕೆ ಕಾರಣವಾಯ್ತಾ ನೀರಿನ ಬಾಟಲ್​? ಇಲ್ಲಿದೆ ಶಾಕಿಂಗ್​ ಸಂಗತಿ..!

    ಬೆಂಗಳೂರು: ಸೋಮವಾರ ತಡರಾತ್ರಿ ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ನಡೆದ ತಮಿಳುನಾಡು ಎಂಎಲ್​ಎ ಪುತ್ರನ ಕಾರು ಅಪಘಾತ ಪ್ರಕರಣಕ್ಕೆ ಸಣ್ಣ ನೀರಿನ ಬಾಟಲ್​ ಕಾರಣವಾಯ್ತಾ ಎಂಬ ಪ್ರಶ್ನೆಯೊಂದು ಮೂಡಿದೆ.

    ಪೊಲೀಸ್​ ಮೂಲಗಳ ಪ್ರಕಾರ ಅಪಘಾತಕ್ಕೆ ನೀರಿನ ಬಾಟಲ್​ ಕಾರಣ ಎನ್ನಲಾಗುತ್ತಿದೆ. ನೀರು ಕುಡಿದ ಬಳಿಕ ಬಾಟಲ್​ ಅನ್ನು ಸರಿಯಾದ ಸ್ಥಳದಲ್ಲಿ ಇರುವುದೇ 7 ಮಂದಿಯನ್ನು ಬಲಿಪಡೆದುಕೊಂಡ ಭೀಕರ ಅಪಘಾತಕ್ಕೆ ಕಾರಣ ಎಂಬ ಮಾತುಗಳು ಪೊಲೀಸ್​ ವಲಯದಲ್ಲಿ ಚರ್ಚೆಯಾಗುತ್ತಿದೆ. ನೀರಿನ ಬಾಟಲ್​ ಬ್ರೇಕ್ ಬಳಿ ಬಿದ್ದಿತ್ತು ಎನ್ನಲಾಗಿದೆ.

    ಮೊದಲೇ ಕಾರು ಅತಿಯಾದ ವೇಗದಲ್ಲಿತ್ತು. ಬ್ರೇಕ್ ಕೆಳಭಾಗದಲ್ಲಿ ವಾಟರ್ ಬಾಟಲ್ ಇದ್ದಿದ್ದರಿಂದ ತಕ್ಷಣ ಬ್ರೇಕ್ ಅಪ್ಲೈ ಮಾಡೋಕಾಗಿಲ್ಲ. ಅದರಲ್ಲೂ ವಾಟರ್ ಬಾಟಲ್ ಫುಲ್ ಆಗಿದ್ರೆ ಬ್ರೇಕ್ ಅಪ್ಲೈ ಆಗೋದೇ ಇಲ್ಲ. ಬ್ರೇಕ್ ಬಳಿ ಬಾಟಲ್ ಇದ್ದುದ್ದರ ಬಗ್ಗೆ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಇದರಿಂದಲೇ ಅಪಘಾತ ಸಂಭವಿಸಿರಬಹುದು ಎನ್ನಲಾಗುತ್ತಿದೆ.

    ಈ ಬಗ್ಗೆ ಸಾರ್ವಜನಿಕರೂ ಕೂಡ ಅರಿತುಕೊಳ್ಳಬೇಕಾಗಿದೆ. ಡ್ರೈವಿಂಗ್​ಗೂ ಮುಂಚೆ ನಿಮ್ಮ ನಿಮ್ಮ ವಾಹನದಲ್ಲಿ ವಾಟರ್ ಬಾಟಲ್ ಎಲ್ಲಿದೆ ಎಂದು ಒಮ್ಮೆ ನೋಡಿಕೊಳ್ಳುವುದು ಉತ್ತಮ. ಸೋಮವಾರ ತಡರಾತ್ರಿ ನಡೆದ ಅಪಘಾತಕ್ಕೂ ನೀರಿನ ಬಾಟಲ್ ಕಾರಣ ಎನ್ನಲಾಗುತ್ತಿದೆ. ದಾಹ ತೀರಿಸುವ ವಾಟರ್ ಬಾಟಲ್​ ಅನ್ನು ಸರಿಯಾದ ಜಾಗದಲ್ಲಿಡಬೇಕು. ಇಲ್ಲದಿದ್ದಲ್ಲಿ ಅಪಘಾತ ಗ್ಯಾರಂಟಿ. ಅದಕ್ಕೆ ತಾಜಾ ದುರಂತ ಉದಾಹರಣೆ ಕೋರಮಂಗಲದಲ್ಲಿ ನಡೆದ ಅಪಘಾತವಾಗಿದೆ.

    ಘಟನೆ ಹಿನ್ನೆಲೆ
    ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ತಡರಾತ್ರಿ 1.30ರ ಸುಮಾರಿಗೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ 7 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಮೃತರಲ್ಲಿ ಕರುಣಾಸಾಗರ್ ಎಂಬಾತ ತಮಿಳುನಾಡು ಡಿಎಂಕೆ ಶಾಸಕನ ಪುತ್ರ. ದುರಂತವೆಂದರೆ, ಮದುವೆ ಆಗಬೇಕಿದ್ದ ಸಂಬಂಧಿ ಯುವತಿ ಬಿಂದು ಜತೆಯಲ್ಲೇ ಕರುಣಾಸಾಗರ್​ ಕೊನೆಯುಸಿರೆಳೆದಿದ್ದಾನೆ. ಅವರೊಂದಿಗೆ ಇಶಿತಾ (21), ಡಾ.ಧನುಶಾ (21) ಅಕ್ಷಯ್ ಗೋಯಲ್, ಉತ್ಸವ್ ಮತ್ತು ರೋಹಿತ್ (23) ಎಂಬುವರು ಕೂಡ ಸಾವಿಗೀಡಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

    MLA ಪುತ್ರನ ಕಾರು ಅಪಘಾತ: ಸಾವಿಗೂ ಮುನ್ನ ತರಾತುರಿಯಲ್ಲಿ ಪ್ರೇಯಸಿ ಖರೀದಿಸಿದ್ದೇನು?

    MLA ಪುತ್ರನ ಡೆಡ್ಲಿ ಕಾರು ಅಪಘಾತಕ್ಕೆ ಕಾರಣ ಬಯಲು: ಸುಳ್ಳು ಹೇಳಿ ತಡರಾತ್ರಿ ಹೋಗಿದ್ದೆಲ್ಲಿಗೆ?

    ಟೇಕ್​ ಕೇರ್​​ ಅಂದ್ರೂ ಡೋಂಟ್​ ಕೇರ್: ಅಪಘಾತಕ್ಕೂ ಮುನ್ನ ಇವರ ಮಾತು ಕೇಳಿದ್ರೆ ಬದುಕುಳಿತಿದ್ದ MLA ಪುತ್ರ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts