More

    ಮಹಿಳೆಯನ್ನು ಕೊಂದ ಟಗರಿಗೆ 3 ವರ್ಷ ಜೈಲು ಶಿಕ್ಷೆ! ಮಾಲೀಕನಿಗೂ ಶಾಕ್​ ಕೊಟ್ಟ ನ್ಯಾಯಾಲಯ

    ಖತ್ರೋಮ್: ಮಹಿಳೆಯನ್ನು ಕೊಂದ ಆರೋಪದ ಮೇಲೆ ಟಗರಿಗೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿರುವ ಪ್ರಕರಣ ದಕ್ಷಿಣ ಸುಡಾನ್​ ರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ.

    ಸುಡಾನ್​ನ ಐ ರೇಡಿಯೋ ವರದಿ ಪ್ರಕಾರ 45 ವರ್ಷದ ಮಹಿಳೆಯ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ ಆರೋಪದ ಮೇಲೆ ಈ ತಿಂಗಳ ಆರಂಭದಲ್ಲೇ ಪೊಲೀಸರು ಕುರಿಯನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದರು. ನಿರಂತರವಾಗಿ ತಲೆಯಿಂದ ಗುಮ್ಮಿ ಮಹಿಳೆಯ ಪಕ್ಕೆಲುಬುಗಳನ್ನು ಟಗರು ಮುರಿದಿತ್ತು. ಇದರಿಂದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಳು.

    ಇಲ್ಲಿ ಮಾಲೀಕ ನಿರಪರಾಧಿ. ಆದರೆ, ಆತನ ಟಗರು ಅಪರಾಧ ಎಸಗಿರುವುದರಿಂದ ಆತನು ಕೂಡ ಬಂಧನಕ್ಕೆ ಅರ್ಹನಾಗಿರುತ್ತಾನೆ ಎಂದು ಹೇಳಿ ಈ ಪ್ರಕರಣವನ್ನು ಕಸ್ಟಮರಿ ಕೋರ್ಟ್​ಗೆ ವರ್ಗಾಹಿಸಿದ್ದು, ಅಲ್ಲಿ ಈ ಪ್ರಕರಣವನ್ನು ಸೌಹಾರ್ದಯುತವಾಗಿ ನಿರ್ವಹಿಸಲಾಗಿದೆ ಎಂದು ಪೊಲೀಸ್ ವಕ್ತಾರ ಎಲಿಜಾ ಮಾಬೋರ್ ಮಕುವಾಚ್ತ ತಿಳಿಸಿದ್ದಾರೆ.

    ಮಾಲೀಕ ಡುಯೋನಿ ಮಾನ್ಯಂಗ್ ಧಾಲ್ ಇದೀಗ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ. ಅದರಂತೆ ಮಾಲೀಕ ತನ್ನ ಐದು ಹಸುಗಳನ್ನು ಮೃತಳ ಕುಟುಂಬಕ್ಕೆ ಬಿಟ್ಟುಕೊಡಬೇಕಾಗಿದೆ. ಟಗರಿಗೆಗೆ ಮೂರು ವರ್ಷ ಕಾರಾಗೃಹ ಶಿಕ್ಷೆಯನ್ನು ವಿಧಿಸಲಾಗಿದ್ದು, ಪ್ರಕರಣಕ್ಕೆ ಅಂತ್ಯ ಹಾಡಲಾಗಿದೆ. (ಏಜೆನ್ಸೀಸ್​)

    ಅನೇಕ ಕುಟುಂಬಗಳ ಉಳಿತಾಯ ಹಣಕ್ಕೆ ಕನ್ನ: IPL ಬೆಟ್ಟಿಂಗ್​ ಆಡಿ 1 ಕೋಟಿ ರೂ. ಕಳ್ಕೊಂಡ ಪೋಸ್ಟ್​ ಮಾಸ್ಟರ್​!

    ರಾತ್ರಿ ಹೊತ್ತು ಡ್ರಾಪ್‌ ಕೊಡೋಕೆ ಅಂತಾ ಗಾಡಿ ನಿಲ್ಲಿಸುವವರು ಈ ಸುದ್ದಿ ಓದಿದ್ರೆ ಬೆಚ್ಚಿ ಬೀಳೋದು ಖಚಿತ

    ಕೋನಸೀಮಾ ಜಿಲ್ಲೆ ಮರುನಾಮಕರಣ: ಆಂಧ್ರದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ, ಸಚಿವರು, ಶಾಸಕರ ಮನೆಗೆ ಬೆಂಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts