More

    ಮಗ ಮತ್ತು ಮಗನ ಸ್ನೇಹಿತನೊಂದಿಗೆ ಸೇರಿ ಪ್ರಿಯಕರನನ್ನು ಕೊಲೆ ಮಾಡಿದ್ದ ಹಂತಕಿಯ ಬಂಧನ

    ಬೆಳಗಾವಿ: ಪುತ್ರ ಮತ್ತು ಪುತ್ರನ ಸ್ನೇಹಿತನೊಂದಿಗೆ ಸೇರಿ ಪ್ರಿಯಕರನನ್ನು ಕೊಲೆ ಮಾಡಿದ್ದ ಹಂತಕಿಯನ್ನು ಬೆಳಗಾವಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಫೆಬ್ರವರಿ 26ರ ಮಧ್ಯರಾತ್ರಿ ಗಜಾ‌ನನ ನಾಯ್ಕ್ ಎಂಬಾತನನ್ನು ಕತ್ತು ಕೊಯ್ದು ಹತ್ಯೆ ಮಾಡಲಾಗಿತ್ತು. ಈ ಘಟನೆ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ನಡೆದಿತ್ತು. ಕೊಲೆಯಾದ ಗಜಾನನ ಬಸೂರ್ತೆ ಗ್ರಾಮದ ನಿವಾಸಿ. ಆದರೆ, ಆತ ಬೆಳಗುಂದಿಯಲ್ಲಿ ವಾಸವಿದ್ದ. ಗಜಾನನ ಎರಡು ಮದುವೆಯಾಗಿದ್ದ. ಆದರೆ, ಇಬ್ಬರೂ ಪತ್ನಿಯರು ಆತನನ್ನು ಬಿಟ್ಟು ಹೋಗಿದ್ದರು.

    ಇಬ್ಬರು ಪತ್ನಿಯರು ಬಿಟ್ಟು ಹೋಗಿದ್ರು, ಮೂರನೆಯವಳಿಂದ ಗಜಾನನ ಕೊಲೆಯಾಗಿದ್ದಾನೆ. ಗಜಾನನ ಎರಡನೇ ಪತ್ನಿಯ ಮಗನೊಂದಿಗೆ ಬೆಳಗುಂದಿಯಲ್ಲಿ ವಾಸವಿದ್ದ. ಜೀವನೋಪಯಕ್ಕಾಗಿ ಬೇಕರಿ ನಡೆಸುತ್ತಿದ್ದ. ಈ ಸಂದರ್ಭದಲ್ಲಿ ಬೆಳಗುಂದಿ ನಿವಾಸಿ ವಿಧವೆ ವಿದ್ಯಾ ಪಾಟೀಲ್ ಜೊತೆ ಪಾಲುದಾರಿಕೆಯಲ್ಲಿ ಬೇಕರಿ ನಡೆಸುತ್ತಿದ್ದ. ತನ್ನ ಇಬ್ಬರು ಮಕ್ಕಳ ಜೊತೆ ವಿದ್ಯಾ ಪಾಟೀಲ್​ ಗಜಾನನ ಜೊತೆ ವಾಸವಿದ್ದಳು.

    ಯಾರಿಗೂ ಗೊತ್ತಾಗದ ರೀತಿ ವಿದ್ಯಾ ಪಾಟೀಲ್ ಹಾಗೂ ಗಜಾನನ ರಿಜಿಸ್ಟರ್ ಮ್ಯಾರೇಜ್ ಆಗಿದ್ದು. ವಿದ್ಯಾ ಪಾಟೀಲ್ ಹೆಸರಲ್ಲಿ ಸಾಲ ಸೋಲ‌ ಮಾಡಿ ಮನೆ ಕೂಡ ಕಟ್ಟಿಸಿ ಕೊಟ್ಟಿದ್ದ. ಕಳೆದ ಮೂರು ವರ್ಷಗಳ ಹಿಂದೆ ವ್ಯವಹಾರದಲ್ಲಿ ನಷ್ಟವಾಗಿ ಬೇಕರಿ ಬಂದ್ ಮಾಡಿದ್ದರು. ಆರ್ಥಿಕ ನಷ್ಟ ಹಿನ್ನೆಲೆ ಮನೆ ಮಾರಾಟ ಮಾಡಲು ವಿದ್ಯಾ ಪಾಟೀಲ್‌ಗೆ ಗಜಾನನ ಒತ್ತಾಯಿಸಿದ್ದ. ಇಲ್ಲವಾದ್ರೆ ತನ್ನ ಜೊತೆ ಮದುವೆಯಾದ ಬಗ್ಗೆ ಎಲ್ಲರಿಗೂ ತಿಳಿಸುವುದಾಗಿ ಬೆದರಿಕೆ ಹಾಕಿದ್ದ.

    ಬೆದರಿಕೆಯಿಂದ ಕೋಪಗೊಂಡಿದ್ದ ವಿದ್ಯಾ, ಗಜಾನನ ಹತ್ಯೆಗೆ ಸ್ಕೆಚ್ ಹಾಕಿದ್ದಳು. ಫೆ.26ರ ರಾತ್ರಿ ಮನೆಗೆ ಬರ್ತೇನೆ ಮಗನ ಊರಿಗೆ ಕಳಿಸು ಎಂದು ಕರೆ ಮಾಡಿದ್ದಳು. ಅದರಂತೆ ಮಗನ‌ನ್ನು ಬಸೂರ್ತೆ ಗ್ರಾಮಕ್ಕೆ ಗಜಾನನ ಬಿಟ್ಟು ಬಂದಿದ್ದ. ಬಳಿಕ ಹೇಳಿದಂತೆ ಅಂದು ರಾತ್ರಿ ಗಜಾನನ ನಾಯ್ಕ್ ಮನೆಗೆ ವಿದ್ಯಾ ಬಂದಿದ್ದಳು. ಈ ವೇಳೆ ಗಜಾನನ್‌ಗೆ ಕಂಠಪೂರ್ತಿ ಮದ್ಯ ಪಾನ ಮಾಡಿಸಿ ಮಗನಿಗೆ ಕರೆ ಮಾಡಿದ್ದಾಳೆ.

    ಮಗ ಮತ್ತು ಮಗನ ಸ್ನೇಹಿತನೊಂದಿಗೆ ಸೇರಿ ಪ್ರಿಯಕರನನ್ನು ಕೊಲೆ ಮಾಡಿದ್ದ ಹಂತಕಿಯ ಬಂಧನ

    ಸ್ನೇಹಿತ ಪರಶುರಾಮ ಗೋಂದಳಿ ಜತೆ ಗಜಾನನ ಮನೆಗೆ ಮಧ್ಯರಾತ್ರಿ ಎಂಟ್ರಿ ಕೊಟ್ಟಿದ್ದ ವಿದ್ಯಾ ಪಾಟೀಲ್ ಮಗ ಹೃತಿಕ್ ಪಾಟೀಲ್, ಹರಿತವಾದ ಆಯುಧದಿಂದ ಕತ್ತು ಸೀಳಿ ಗಜಾನನ ನಾಯ್ಕ್ ಹತ್ಯೆ ಮಾಡಿದ್ದಾರೆ. ಬಳಿಕ ಆತನ ಡೈರಿ, ಮೊಬೈಲ್ ಫೋನ್ ಜೊತೆ ಮೂವರು ಪರಾರಿಯಾಗಿದ್ದರು. ಮಾರನೇ ದಿನ ಗಜಾನ‌ನ ಮಗ ಅವಧೂತ್ ಮನೆಗೆ ಬಂದಾಗ ಪ್ರಕರಣ ಬಯಲಾಗಿತ್ತು. ವಿದ್ಯಾ ಪಾಟೀಲ್ ಮೇಲೆ ಸಂಶಯ ವ್ಯಕ್ತಪಡಿಸಿದ್ದ ಅವಧೂತ್​, ದೂರು ದಾಖಲಿಸಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಬೆಳಗಾವಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    LIVE| ಬಜೆಟ್​ ಮಂಡನೆಗೆ ಕ್ಷಣಗಣನೆ… ತಜ್ಞರ ಚರ್ಚೆ-ವಿಶ್ಲೇಷಣೆ ಜತೆಗೆ ಕ್ಷಣ ಕ್ಷಣದ ಮಾಹಿತಿಯ ನೇರಪ್ರಸಾರ

    ಸಿಎಂ ಆಗಿ ಮೊದಲ ಬಜೆಟ್​ ಮಂಡನೆ: ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಬೊಮ್ಮಾಯಿ

    ಎನ್​ಸಿಬಿ ಅಧಿಕಾರಿಗಳ ಈ ಒಂದು ಸಣ್ಣ ಎಡವಟ್ಟನಿಂದಾಗಿ ಶಾರುಖ್​ ಪುತ್ರನಿಗೆ ಶಾಶ್ವತ ಪರಿಹಾರ ಸಿಕ್ಕಿತಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts