More

  ಜೀವನದಲ್ಲಿ ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ: ಅತ್ಯಂತ ನೋವಿನ ಕ್ಷಣ ಬಿಚ್ಚಿಟ್ಟ ಪ್ರಕಾಶ್​ ರಾಜ್​

  ನವದೆಹಲಿ: ಪ್ರಖ್ಯಾತ ಬಹುಭಾಷಾ ನಟ, ರಾಜಕಾರಣಿ, ನಿರ್ದೇಶಕ, ನಿರ್ಮಾಪಕ ಹಾಗೂ ನಿರೂಪಕ ಪ್ರಕಾಶ್​ ರಾಜ್​ ಅವರು ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನವೊಂದರಲ್ಲಿ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಜೀವನ ಒಂದು ಹಂತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಕಾಶ್​ ರಾಜ್​ ಮುಂದಾಗಿದ್ದರಂತೆ.

  ಪ್ರಕಾಶ್​ ರಾಜ್​ ಅವರು 1994ರಲ್ಲಿ ನಟಿ ಲಲಿತಾ ಕುಮಾರಿ ಎಂಬುವರನ್ನು ಮದುವೆಯಾದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಹೆಸರು ಮೇಘನಾ ಮತ್ತು ಪೂಜಾ. ಸಿಧು ಹೆಸರಿನ ಓರ್ವ ಮಗನಿದ್ದನು. ಆದರೆ, 2004ರಲ್ಲಿ ಮಗ ಅಕಾಲಿಕ ಸಾವಿಗೀಡಾದನು. ಇನ್ನು ಲಲಿತಾ ಕುಮಾರಿ-ಪ್ರಕಾಶ್​ ರಾಜ್​ ದಾಂಪತ್ಯ ಜೀವನದಲ್ಲಿ ವಿರಸ ಮೂಡಿ ದಂಪತಿ 2009ರಲ್ಲಿ ಡಿವೋರ್ಸ್​ ಪಡೆದುಕೊಂಡರು.

  ಇದಾದ ಬಳಿಕ ಪ್ರಕಾಶ್​ ರಾಜ್​ ಅವರು 2010 ಆಗಸ್ಟ್​ 24ರಂದು ಕೊರಿಯೋಗ್ರಾಫರ್​ ಪೊನಿ ವರ್ಮಾ ಜತೆ ಸಪ್ತಪದಿ ತುಳಿದರು. 2005ರಲ್ಲಿ ದಂಪತಿಗೆ ವೇದಾಂತ್​ ಹೆಸರಿನ ಗಂಡು ಮಗು ಜನಿಸಿತು. ಕೆಲವು ಭಿನ್ನಾಭಿಪ್ರಾಯಗಳಿಂದ ಅವರು ತಮ್ಮ ಮೊದಲ ಪತ್ನಿ ಲಲಿತಾ ಕುಮಾರಿಯಿಂದ ಬೇರ್ಪಟ್ಟು ನಂತರದಲ್ಲಿ ಪೋನಿ ವರ್ಮಾ ಅವರನ್ನು ಮದುವೆಯಾಗಲು ನಿರ್ಧರಿಸಿದ್ದಾಗಿ ಪ್ರಕಾಶ್ ರಾಜ್ ಬಹಿರಂಗಪಡಿಸಿದರು.

  ಮಗ ಸಿಧು 5ನೇ ವಯಸ್ಸಿನಲ್ಲಿ ಫಾರ್ಮ್‌ಹೌಸ್‌ನಲ್ಲಿರುವಾಗ ಆಕಸ್ಮಿಕವಾಗಿ ಕಟ್ಟಡದಿಂದ ಜಾರಿಬಿದ್ದು ಮೃತಪಟ್ಟನು ಎಂದು ಹೇಳಿದರು. ಈ ವೇಳೆ ತೀವ್ರವಾಗಿ ಮನನೊಂದಿದ್ದ ಪ್ರಕಾಶ್​ ರಾಜ್​ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರಂತೆ. ಆದರೆ, ನಂತರದಲ್ಲಿ ಅಗತ್ಯವಿರುವವರಿಗೆ ಸಹಾಯ ಮಾಡುವ ಅವರ ಆಲೋಚನೆಯು ಅವರ ಆತ್ಮಹತ್ಯೆ ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ಕಾರಣವಾಯಿತಂತೆ.

  ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಪ್ರಕಾಶ್ ರಾಜ್ ಅವರು ನಟ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್ ಮತ್ತು ರವೀನಾ ಟಂಡನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೆಜಿಎಫ್: ಅಧ್ಯಾಯ 2ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಏಪ್ರಿಲ್​ 14ರಂದು ತೆರೆಗೆ ಅಪ್ಪಳಿಸಲಿದೆ. (ಏಜೆನ್ಸೀಸ್​)

  ಕಚ್ಚಾ ಬಾದಾಮ್​ ಹಾಡಿಗೆ ಸೊಂಟ ಬಳುಕಿಸಿದ ಶಾಸಕಿ ರೋಜಾ: ವಿಡಿಯೋ ವೈರಲ್​!

  ನನ್ನ ಸಾವು ನನ್ನ ಮುಗ್ಧತೆಯನ್ನು ನಿರೂಪಿಸುತ್ತದೆ: ಆತ್ಮಹತ್ಯೆ ಮಾಡ್ಕೊಂಡ ವೈದ್ಯೆಯ ನೋವಿನ ಮಾತು

  ಏರುತ್ತಲೇ ಇದೆ ಇಂಧನ ದರ, ಜನ ಸಾಮಾನ್ಯರ ಬದುಕು ಭಾರ: ಇಂದಿನ ಪೆಟ್ರೋಲ್​-ಡೀಸೆಲ್​ ದರ ಹೀಗಿದೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts