More

    ಮಾಜಿ ಸಿಎಂ ಬಿಎಸ್​ವೈ ದೆಹಲಿ ದೌಡು: ಎರಡು ದಿನ ಬಿಡಾರ, ವರಿಷ್ಠರ ಭೇಟಿಗೆ ನಿರ್ಧಾರ

    ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿ ಸದಸ್ಯರಾಗಿ ನೇಮಕವಾದ ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೊದಲ ಬಾರಿಗೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

    ಶುಕ್ರವಾರ ಹಾಗೂ ಶನಿವಾರ ದೆಹಲಿಯಲ್ಲಿ ಬಿಡಾರ ಹೂಡಲಿದ್ದು, ಬೆಂಗಳೂರಿಗೆ ಮರಳುವುದನ್ನು ಮುಕ್ತವಾಗಿಟ್ಟುಕೊಂಡಿದ್ದಾರೆ. ಜನೋತ್ಸವಕ್ಕೆ ತಯಾರಿ, ಸಂಘಟನಾ ಪ್ರವಾಸ, ವಿಧಾನ ಮಂಡಲ ಅಧಿವೇಶನ, ಮತ್ತೆ ಮುನ್ನೆಲೆಗೆ ಬಂದಿರುವ ಶೇಕಡ 40 ಕಮಿಷನ್ ಆರೋಪಗಳ ಪರ-ವಿರೋಧ ಚರ್ಚೆ ಮಧ್ಯೆ ಬಿಎಸ್ವೈ ದೆಹಲಿ ದೌಡು ಮಹತ್ವ ಪಡೆದಿದೆ.

    ದೆಹಲಿಗೆ ಪ್ರಯಾಣಿಸುವ ಮುನ್ನ ಕಾವೇರಿ ನಿವಾಸದ ಬಳಿ ಶುಕ್ರವಾರ ಸುದ್ದಿಗಾರರಿಗೆ‌ ಬಿಎಸ್ ವೈ ಪ್ರತಿಕ್ರಿಯಿಸಿ, ದೆಹಲಿಗೆ ಹೊರಟಿದ್ದು ಎರಡು ದಿನ ಅಲ್ಲಿಯೇ ಇರುವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಇಂದು ಸಂಜೆ ಭೇಟಿಯಾಗುವೆ‌‌.

    ನಂತರ ಕೇಂದ್ರ ಸಚಿವ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಭೇಟಿ ಮಾಡುವೆ‌. ಪಕ್ಷದ ಸಂಘಟನೆ ವಿಚಾರದಲ್ಲಿ ಅವರು ಕೇಳಲಿರುವ ಸಲಹೆಗಳನ್ನು ನೀಡುವುದು ನನ್ನ ಕರ್ತವ್ಯವಾಗಿದೆ.

    ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಅವರ ಭೇಟಿಗೂ ಪ್ರಯತ್ನಿಸುವೆ ಎಂದು ಬಿ‌ಎಸ್.ಯಡಿಯೂರಪ್ಪ ತಿಳಿಸಿದರು.

    ಲಾಡ್ಜ್​ಗೆ​ ಕರೆಸಿಕೊಂಡು ಯುವಕನ ಬಳಿ ಸುಲಿಗೆ: ಬಂಧಿತ ಲೇಡಿಯ ಮೊಬೈಲ್​ನಲ್ಲಿದ್ದ ಸ್ಫೋಟಕ ರಹಸ್ಯ ಬಯಲು!

    ಸಹಾಯಕ ಕೃಷಿ ನಿರ್ದೇಶಕಿಯ ದರ್ಪಕ್ಕೆ ಅಧಿಕಾರಿಗಳು, ಸಿಬ್ಬಂದಿ ‌ಸುಸ್ತೋ ಸುಸ್ತು! ವಿಡಿಯೋ ವೈರಲ್​

    ಹುದ್ದೆ ಇಲ್ಲದಿದ್ರೂ ಸ್ಪೆಷಲ್ ಆಫೀಸರ್ಸ್!; 65ಕ್ಕೂ ಹೆಚ್ಚಿನ ಅಧಿಕಾರಿಗಳ ನಿಯೋಜನೆ | ಹಣ ಕೊಟ್ಟವರಿಗೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts