More

    ಯುಪಿ ಚುನಾವಣೆ: ಸಿಎಂ ಯೋಗಿ ವಿರುದ್ಧ ಆಜಾದ್ ಸಮಾಜ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸ್ಪರ್ಧೆ

    ನವದೆಹಲಿ: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೇ ರಂಗೇರುತ್ತಿದೆ. ಗೋರಖ್​ಪುರ ಕ್ಷೇತ್ರದಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ಅವರು ಸ್ಪರ್ಧಿಸುವುದಾಗಿ ಬಿಜೆಪಿ ಘೋಷಿಸಿದ ಬೆನ್ನಲ್ಲೇ ಯೋಗಿ ವಿರುದ್ಧ ಅದೇ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಆಜಾದ್ ಸಮಾಜ ಪಾರ್ಟಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್​​ ಸವಾಲು ಹಾಕಿದ್ದಾರೆ. ​

    ಜನವರಿ 18 ರಂದು ಆಜಾದ್ ಸಮಾಜ ಪಕ್ಷವು ಮೊದಲ ಹಂತದ ಚುನಾವಣೆಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ, ಚಂದ್ರಶೇಖರ್ ಸ್ಪರ್ಧಿಸಲಿರುವ ಕ್ಷೇತ್ರದ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ.

    ಇದೀಗ ಚಂದ್ರಶೇಖರ್​ ಮಾತನಾಡಿದ್ದು, ಉತ್ತರ ಪ್ರದೇಶದ ಚುನಾವಣೆಯಲ್ಲಿ ನಮ್ಮ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ. ನಾನು ಸಿಎಂ ಯೋಗಿ ವಿರುದ್ಧ ಗೋರಖ್​ಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದೇನೆ ಎಂದು ಹೇಳಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಮೊದಲ ಬಾರಿಗೆ ಶಾಸಕರಾಗಿ ಸ್ಪರ್ಧಿಸುತ್ತಿದ್ದಾರೆ. ಆದರೆ ಅವರ ಪ್ರಮುಖ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷ (ಎಸ್​ಪಿ)ದ ಅಭ್ಯರ್ಥಿಯಾಗಿರುತ್ತಾರೆ, ಆದರೆ, ಎಸ್​ಪಿ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ.

    ಸಾಕಷ್ಟು ಊಹಾಪೋಹಗಳ ನಂತರ, ಫೆಬ್ರವರಿ 10ರಿಂದ ಆರಂಭವಾಗಲಿರುವ ಯುಪಿ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ತವರು ಕ್ಷೇತ್ರವಾದ ಗೋರಖ್‌ಪುರದಿಂದ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ. ಸಿಎಂ ಯೋಗಿ ಈ ಬಾರಿ ಅಯೋಧ್ಯೆ ಅಥವಾ ಮಥುರಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು.

    ಮೊದಲ ಎರಡು ಹಂತದ ಮತದಾನಕ್ಕೆ ಬಿಜೆಪಿ 107 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು, 2017ರಲ್ಲಿ ಆಡಳಿತ ಪಕ್ಷ 83ರಲ್ಲಿ ಗೆಲುವು ಸಾಧಿಸಿತ್ತು. ಈ ಪೈಕಿ 63 ಸ್ಥಾನಗಳಲ್ಲಿ ಗೆದ್ದಿರುವ ಶಾಸಕರನ್ನು ಉಳಿಸಿಕೊಳ್ಳಲಾಗಿದ್ದು, ಉಳಿದ 20 ಹಾಲಿ ಶಾಸಕರನ್ನು ಪಟ್ಟಿಯಿಂದ ಕೈಬಿಡಲಾಗಿದೆ.

    ಅಂದಹಾಗೆ ಉತ್ತರ ಪ್ರದೇಶದ ವಿಧಾನಸಭಾ ಚನಾವಣೆಯು ಫೆ. 10ರಂದು ಆರಂಭವಾಗಲಿದ್ದು, ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್​ 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. (ಏಜೆನ್ಸೀಸ್​)

    ಚುನಾವಣಾ ಪ್ರಚಾರಕ್ಕೆ ಬಂದ ಬಿಜೆಪಿ ಶಾಸಕನನ್ನು ಅಟ್ಟಾಡಿಸಿದ ಗ್ರಾಮಸ್ಥರು: ಸ್ವಕ್ಷೇತ್ರದಲ್ಲೇ ಮುಖಭಂಗ

    ನಟ ಧನುಷ್​ ತಂದೆಯ ಹೇಳಿಕೆಯಿಂದ ಸ್ಟಾರ್​ ದಂಪತಿಯ ಡಿವೋರ್ಸ್​ ಪ್ರಕರಣಕ್ಕೆ ಸ್ಫೋಟಕ ತಿರುವು!

    ದೂರು ನೀಡಲು ಬಂದಾಕೆಯನ್ನೇ ಮಂಚಕ್ಕೆ ಕರೆದ ಪೊಲೀಸ್​ ಇನ್​ಸ್ಪೆಕ್ಟರ್​! ಸಂತ್ರಸ್ತೆ ಬಿಚ್ಚಿಟ್ಟ ನೋವು ಇಲ್ಲಿದೆ

    ಮದ್ವೆಯಾಗುವುದಾಗಿ ನಂಬಿಸಿ‌ ಯುವತಿ ಜತೆ ಪೋಟೋ ತೆಗೆಸಿಕೊಂಡು ಬ್ಲ್ಯಾಕ್‌ಮೇಲ್‌ ಮಾಡ್ತಿದ್ದ ವಂಚಕ ಅರೆಸ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts