More

    ನರ್ಸ್​ನಿಂದ ರೇಪ್​ ಆದ 24 ಗಂಟೆಯೊಳಗೆ ಕರೊನಾ ಸೋಂಕಿತೆ ಸಾವು! ಸ್ಟಾಫ್​ ನರ್ಸ್ ​ಅನ್ನು ಬಿಟ್ಟಿಲ್ಲ ಕಾಮುಕ

    ಭೋಪಾಲ್​: ಕರೊನಾ ಸೋಕಿನಿಂದ ಬಳಲುತ್ತಿದ್ದ ಮಹಿಳಾ ರೋಗಿಯ ಮೇಲೆ ನರ್ಸ್​ ಓರ್ವ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶ ರಾಜಧಾನಿ ಭೋಪಾಲ್​​ನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಅಟ್ಟಹಾಸ ನಡೆದ 24 ಗಂಟೆಯೊಳಗೆ ಸಂತ್ರಸ್ತೆ ಮೃತಪಟ್ಟಿರುವುದಾಗಿ ಪೊಲೀಸರು ಗುರುವಾರ ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿದ ಒಂದು ತಿಂಗಳ ಬಳಿಕ ಈ ಘಟನೆಯನ್ನು ಸಾರ್ವಜನಿಕರಿಗೆ ತಿಳಿಸಲಾಗಿದೆ.

    43 ವರ್ಷದ ಮಹಿಳೆ ಕರೊನಾ ಸೋಂಕಿನಿಂದಾಗಿ ಏಪ್ರಿಲ್​ 6ರಂದು ಭೋಪಾಲ್​ನ ಮೆಮೊರಿಯಲ್​ ಹಾಸ್ಪಿಟಲ್​ ಅಂಟ್​ ರೀಸರ್ಚ್​ ಸೆಂಟರ್​ಗೆ ದಾಖಲಾಗಿದ್ದಳು. ಬಳಿಕ ತನ್ನ ಮೇಲೆ ನಡೆದ ಕೃತ್ಯದ ಬಗ್ಗೆ ದೂರು ಸಹ ನೀಡಿದ್ದಳು. ವೈದ್ಯರಿಗೆ ನೀಡಿದ ಹೇಳಿಕೆ ನೀಡುವಾಗ ಆರೋಪಿಯನ್ನು ಸಹ ಪತ್ತೆಹಚ್ಚಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    ಅತ್ಯಾಚಾರ ನಡೆದ ಕೆಲವೇ ಗಂಟೆಗಳಲ್ಲಿ ಆಕೆಯ ಆರೋಗ್ಯ ಸ್ಥಿತಿ ಹದಗೆಡಲು ಆರಂಭಿಸಿತು. ತಕ್ಷಣ ಆಕೆಯನ್ನು ವೆಂಟಿಲೇಟರ್​ಗೆ ಸ್ಥಳಾಂತರ ಮಾಡಲಾಯಿತು. ಅದೇ ದಿನ ಸಂಜೆ ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಳು.

    ಈ ಸಂಬಂಧ ನಿಶಾತ್ಪುರ ಪೊಲೀಸ್​ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಯನ್ನು 40 ವರ್ಷದ ಸಂತೋಷ್​ ಅಹಿವಾರ್​ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯನ್ನು ಭೋಪಾಲ್​ನ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದ್ದು, ನ್ಯಾಯಾಲಯದ ವಿಚಾರಣೆಗೆ ಎದುರು ನೋಡುತ್ತಿದ್ದಾರೆ.

    ಘಟನೆ ಬಗ್ಗೆ ಮಾತನಾಡಿರುವ ಹಿರಿಯ ಅಧಿಕಾರಿ ಇರ್ಶಾದ್​ ವಾಲಿ, ಘಟನೆಯಲ್ಲಿ ನನ್ನ ಗುರುತನ್ನು ಮತ್ತು ಘಟನೆಯ ಬಗ್ಗೆ ಯಾರಿಗೂ ಮಾಹಿತಿ ನೀಡಬೇಡಿ ಎಂದು ಸಂತ್ರಸ್ತೆ ಮನವಿ ಪತ್ರ ನೀಡಿದ್ದಳು. ಹೀಗಾಗಿ ನಾವು ಯಾರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ.

    ಇನ್ನು ಆರೋಪಿ 24 ವರ್ಷದ ಸ್ಟಾಫ್​ ನರ್ಸ್​ ಅನ್ನು ಸಹ ರೇಪ್​ ಮಾಡಿರುವುದು ತಿಳಿದುಬಂದಿದೆ. ಅಲ್ಲದೆ, ಕುಡಿದು ಕೆಲಸ ಮಾಡುತ್ತಿದ್ದ ಆತನನ್ನು ಹಿಂದೊಮ್ಮೆ ಕೆಲಸದಿಂದ ತೆಗೆದುಹಾಕಲಾಗಿತ್ತು. (ಏಜೆನ್ಸೀಸ್​)

    ಸಿಡಿಲ ಬಡಿತಕ್ಕೆ 18 ಆನೆಗಳ ದಾರುಣ ಸಾವು: ಜೀವ ಸಂಕುಲಕ್ಕೆ ಭಾರೀ ನಷ್ಟ

    ಕರಾವಳಿಯಲ್ಲಿ ಎರಡು ದಿನ ಹೈ ಅಲರ್ಟ್; ಗುಜರಾತ್, ಪಾಕ್ ಕರಾವಳಿಯತ್ತ ಚಂಡಮಾರುತ

    ಯಾರೀ ಹುಡುಗಿ ಎನ್ನುತ್ತ ಮೊದಲ ನೋಟದಲ್ಲೇ ಗೀತಾಗೆ ಬೋಲ್ಡಾಗಿದ್ದರು ಹರ್ಭಜನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts