ಕರಾವಳಿಯಲ್ಲಿ ಎರಡು ದಿನ ಹೈ ಅಲರ್ಟ್; ಗುಜರಾತ್, ಪಾಕ್ ಕರಾವಳಿಯತ್ತ ಚಂಡಮಾರುತ

ಮಂಗಳೂರು/ ಉಡುಪಿ: ಹವಾಮಾನ ಇಲಾಖೆ ಮುನ್ಸೂಚನೆಯಂತೆ ಆಗ್ನೇಯ ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪ ಪ್ರದೇಶದಲ್ಲಿ ಗುರುವಾರ ಮುಂಜಾನೆ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿದೆ. ಶುಕ್ರವಾರದ ವೇಳೆ ಇದು ಮತ್ತಷ್ಟು ಬಲಗೊಳ್ಳಲಿದ್ದು, ಶನಿವಾರ ತೀವ್ರ ಚಂಡಮಾರುತವಾಗಿ ಪರಿವರ್ತನೆಯಾಗಿ ಬಳಿಕ ಉತ್ತರಕ್ಕೆ ಸಾಗಿ ಗುಜರಾತ್ ಮತ್ತು ಪಾಕಿಸ್ತಾನ ಕರಾವಳಿಯತ್ತ ಚಲಿಸಲಿದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ. ಚಂಡಮಾರುತ ಕರ್ನಾಟಕ ಕರಾವಳಿ ಮೇಲೆ ಪ್ರಭಾವ ಬೀರದಿದ್ದರೂ, ಭಾರಿ ಗಾಳಿ-ಮಳೆ ಸುರಿಯುವ ಸಾಧ್ಯತೆ ದಟ್ಟವಾಗಿದೆ. ಪ್ರಸ್ತುತ ಮೋಡಗಳು ಕೇಂದ್ರೀಕರಣಗೊಳ್ಳುತ್ತಿದ್ದು, ಸಮುದ್ರದಲ್ಲೂ ಗಾಳಿಯ ಅಬ್ಬರ ಹೆಚ್ಚಾಗಿದೆ. … Continue reading ಕರಾವಳಿಯಲ್ಲಿ ಎರಡು ದಿನ ಹೈ ಅಲರ್ಟ್; ಗುಜರಾತ್, ಪಾಕ್ ಕರಾವಳಿಯತ್ತ ಚಂಡಮಾರುತ