More

    ಮೇಲ್ಮನೆಯಲ್ಲಿ ಗದ್ದಲ, ಕಲಾಪ ಮುಂದಕ್ಕೆ

    ಬೆಂಗಳೂರು: ಸಚಿವರೊಬ್ಬರಿಂದ ರಾಷ್ಟ್ರ ಧ್ವಜಕ್ಕೆ ಅವಮಾನ, ಸಂವಿಧಾನ ಬಾಹಿರ ಹೇಳಿಕೆ ನೀಡಿದ್ದರ ಬಗ್ಗೆ ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಪಟ್ಟು, ಆಡಳಿತ ಪಕ್ಷದ ವಿರೋಧ, ನಿಯಮಾನುಸಾರ ಕಲಾಪ ನಡೆಯಲಿ ಎಂಬ ಸಭಾಪತಿ ಸೂಚನೆ ನಡುವೆಯೂ ವಾದ-ವಿರೋಧ, ಮಾತಿನ ಗದ್ದಲದಿಂದಾಗಿ ವಿಧಾನ ಪರಿಷತ್ ಕಲಾಪ ಬುಧವಾರ 10 ನಿಮಿಷ ಮುಂದೂಡಿಕೆಯಾಯಿತು.

    ಸದನ ಸೇರುತ್ತಿದ್ದಂತೆಯೇ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ನಿಯಮ 53ರಡಿ ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿದರೆ, ಪ್ರಶ್ನೋತ್ತರದ ಬಳಿಕ ಅವಕಾಶ ನೀಡುವೆ ಎಂದು ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದರು.

    ಬಿ.ಕೆ.ಹರಿಪ್ರಸಾದ್ ತಮ್ಮ ನಿಲುವು ಸಡಿಲಿಸದೆ ಪ್ರಸ್ತಾಪಕ್ಕೆ ಮಾತ್ರ ಮಾಡುವೆ. ನಂತರ ತಮ್ಮ ತೀರ್ಮಾನ ತಿಳಿಸಿ ಎಂದರೆ ಕಾಂಗ್ರೆಸ್ ಉಳಿದ ಸದಸ್ಯರು ಸಾಥ್ ನೀಡಿದರು. ರಾಷ್ಟ್ರ ದ್ರೋಹಿ ಕೃತ್ಯವೆಂದು ಸಲೀಂ ಅಹಮದ್​ ಕಿಡಿಕಾರಿದರು

    ಸಂವಿಧಾನ ಬಾಹಿರ ಹೇಳಿಕೆ ನೀಡಿದ ಸಚಿವರು ಚರ್ಚೆಗೆ‌ ಉತ್ತರಿಸುವುದು ಎಷ್ಟು ಸರಿ? ಎಂದು ಕಾಂಗ್ರೆಸ್ ಕೇಳಿತು. ಬಿಜೆಪಿ ಸದಸ್ಯರ ತೀವ್ರ‌ ವಿರೋಧದ ಕಾರಣ ಗದ್ದಲ ಉಂಟಾಗಿ ಸದನ ಮುಂದೂಡಿಕೆಯಾಯಿತು.

    ಮ್ಯಾಕ್ಸಿಗೆ ಕೂಡಿಬಂತು ಕಂಕಣ ಭಾಗ್ಯ: ಭಾರತೀಯ ಮೂಲದ ಗರ್ಲ್​ಫ್ರೆಂಡ್​ ಜತೆ ಮದುವೆ ದಿನಾಂಕ ಫಿಕ್ಸ್​!

    ಕರಿಕಲ್ಲಿನ ಮೇಲೆ ಬಿಳಿರೇಖೆಯಲ್ಲಿ ಮೂಡಿತ್ತು ‘ಹಿಜಾಬ್‌’ ಭವಿಷ್ಯ: ನಿಜವಾಯ್ತಾ ಕಾಲಜ್ಞಾನಿಯ ಮಾತು?

    VIDEO: ಶಾಂತಿಯುತವಾಗಿದ್ದ ಬಳ್ಳಾರಿ ಕಾಲೇಜಿನಲ್ಲಿ ಕಿಡಿ ಹೊತ್ತಿಸಿದ ಬುರ್ಕಾಧಾರಿ- ಹಲವೆಡೆ ಟ್ರೆಂಡ್‌ ಆದ ‘ಅಲ್ಲಾಹು ಅಕ್ಬರ್‌’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts