More

    ಕೇಜ್ರಿವಾಲ್​ ಪ್ರಧಾನಿ ಆಗಲಿದ್ದಾರೆ: ಪಂಜಾಬ್​ನಲ್ಲಿ ಎಎಪಿ ಭರ್ಜರಿ ಮುನ್ನಡೆ ಬೆನ್ನಲ್ಲೇ ಕೇಳಿಬಂತು ಭವಿಷ್ಯ

    ನವದೆಹಲಿ: ಯಾರೂ ಊಹಿಸದ ರೀತಿಯಲ್ಲಿ ಪಂಜಾಬ್​ನಲ್ಲಿ ಆಮ್​ ಆದ್ಮಿ ಪಕ್ಷ (ಎಎಪಿ) ಪ್ರಚಂಡ ಬಹುಮತ ದಾಖಲಿಸಿದ್ದು, ದೆಹಲಿಯ ನಂತರ ಎರಡನೇ ರಾಜ್ಯದಲ್ಲಿ ಅಧಿಕಾರ ಗದ್ದುಗೆ ಹಿಡಿಯಲಿರುವ ಎಎಪಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಸಣ್ಣ ಪಕ್ಷವೊಂದರ ಪಾಲಿಗೆ ಇದು ಬಹು ದೊಡ್ಡ ಬೆಳವಣಿಗೆ ಅಂತಾನೇ ಹೇಳಬಹುದಾಗಿದೆ. ಈ ಗೆಲುವಿನಿಂದ ಎಎಪಿ​ಗೆ ಮತ್ತಷ್ಟು ಹುಮ್ಮಸ್ಸು ಬಂದಿದೆ.

    ಕೇಜ್ರಿವಾಲ್​ ಪ್ರಧಾನಿ ಆಗಲಿದ್ದಾರೆ: ಪಂಜಾಬ್​ನಲ್ಲಿ ಎಎಪಿ ಭರ್ಜರಿ ಮುನ್ನಡೆ ಬೆನ್ನಲ್ಲೇ ಕೇಳಿಬಂತು ಭವಿಷ್ಯಗೆಲುವಿನ ಬಗ್ಗೆ ಮಾತನಾಡಿರುವ ಎಎಪಿ ಮುಖಂಡ ರಾಘವ್​ ಚಡ್ಡಾ, ಎಎಪಿ ದೇಶದ ಅತಿದೊಡ್ಡ ವಿರೋಧ ಪಕ್ಷವಾದ ಕಾಂಗ್ರೆಸ್ ಅನ್ನು ಬದಲಿಸಲಿದೆ ಎಂದಿದ್ದಾರೆ. ಎಎಪಿ ರಾಷ್ಟ್ರ ಮಟ್ಟಕ್ಕೆ ಹೋಗುತ್ತಿದ್ದು, ಇದು ಸ್ವಾಭಾವಿಕವಾಗಿ ಕಾಂಗ್ರೆಸ್​ ಅನ್ನು ಬದಲಿಸಲಿದೆ ಎಂದು ತಿಳಿಸಿದರು.

    ಎಎಪಿ ಪಾಲಿಗೆ ಇಂದು ನಿಜಕ್ಕೂ ಅತ್ಯದ್ಭುತ ದಿನವಾಗಿದೆ. ನಾವು ಹೆಚ್ಚು ದಿನ ಪ್ರಾದೇಶಿಕ ಪಕ್ಷವಾಗಿ ಉಳಿಯುವುದಿಲ್ಲ. ಒಂದಲ್ಲ ಒಂದು ದಿನ ಈ ದೇಶವನ್ನೇ ಅರವಿಂದ್​ ಕೇಜ್ರಿವಾಲ್​ ಅವರು ಮುನ್ನಡೆಸಲಿದ್ದಾರೆ ಎನ್ನುವ ಮೂಲಕ ಮುಂದೊಮ್ಮೆ ಕೇಜ್ರಿವಾಲ್​ ಪ್ರಧಾನಿ ಆಗಲಿದ್ದಾರೆ ಎಂದು ರಾಘವ್​ ಚಡ್ಡಾ ತಿಳಿಸಿದರು.

    ಪಂಜಾಬ್‌ನ ಜನರು ಕೇಜ್ರಿವಾಲ್ ಮಾದರಿಯ ಆಡಳಿತವನ್ನು ನೋಡಿದ್ದಾರೆ ಮತ್ತು ಅದನ್ನು ಬಯಸುತ್ತಾರೆ. ಕಳೆದ ಐದು ದಶಕಗಳಿಂದ ಪಂಜಾಬ್‌ನ ಜನರಿಗೆ ಅರ್ಹವಾದ ಸೌಕರ್ಯಗಳನ್ನು ನೀಡದೇ ಹಾಗೇ0 ಉಳಿಸಿದವರನ್ನು ಜನ ಈಗ ಹೊರಹಾಕಿದ್ದಾರೆ. ಪಂಜಾಬ್‌ನ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಮತ್ತು ಅದರ ವೈಭವವನ್ನು ಮರುಸ್ಥಾಪಿಸಲು ಎಎಪಿ ತನ್ನ ನೀಲನಕ್ಷೆಯಲ್ಲಿ ಕೆಲಸ ಮಾಡುತ್ತದೆ ಎಂದು ಶ್ರೀ ಚಡ್ಡಾ ಹೇಳಿದರು.

    ಪಂಜಾಬ್​ ಒಟ್ಟು 117 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದು, ಅಧಿಕಾರದ ಗದ್ದುಗೆ ಏರಲು 59 ಮ್ಯಾಜಿಕ್​ ನಂಬರ್​ ಅವಶ್ಯಕತೆ ಇದೆ. ಆಮ್​ ಆದ್ಮಿ ಪಕ್ಷ 89 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಈ ಬಾರಿ ಪಂಜಾಬ್​ ಅಧಿಕಾರದ ಗದ್ದುಗೆ ಏರಲಿದೆ. ಭರ್ಜರಿ ಮುನ್ನಡೆ ಸಾಧಿಸಿರುವುದರಿಂದ ಎಎಪಿ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಮನೆಯಲ್ಲಿ ಜಿಲೇಬಿ ತಯಾರಿ ಜತೆಗೆ ಸಂಭ್ರಮಾಚರಣೆಗೆ ಜೋರಾಗಿ ಸಿದ್ಧತೆ ನಡೆಯುತ್ತಿದೆ. (ಏಜೆನ್ಸೀಸ್​)

    ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ..

    ಯಾರಿಗೆ ಪಂಚರಾಜ್ಯ?; ತಜ್ಞರ ವಿಶ್ಲೇಷಣೆ ಒಳಗೊಂಡ ಫಲಿತಾಂಶದ ಕ್ಷಣ ಕ್ಷಣ ಮಾಹಿತಿಯ ನೇರಪ್ರಸಾರ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts