More

    ಬಿಗ್​ಬಾಸ್​ ವಿನ್ನರ್​ ಲ್ಯಾಗ್​ ಮಂಜುಗಿಂತಲೂ ಅರವಿಂದ್​ಗೆ ಸಿಕ್ಕಿದೆ ಭಾರೀ ಮೊತ್ತದ ಹಣ? ಹೀಗೊಂದು ಲೆಕ್ಕಾಚಾರ..!

    ಬೆಂಗಳೂರು: ಬಿಗ್​ಬಾಸ್​ ಸೀಸನ್​ 8ಕ್ಕೆ ವರ್ಣರಂಜಿತ ತೆರೆಬಿದ್ದಿದೆ. ಲ್ಯಾಂಗ್​ ಮಂಜು ಖ್ಯಾತಿಯ ಮಂಜು ಪಾವಗಡ ವಿಜೇತರಾಗಿ ಹೊರಹೊಮ್ಮಿದ್ದು, ಟ್ರೋಫಿಯ ಜತೆಗೆ 53 ಲಕ್ಷ ರೂಪಾಯಿಗಳ ಒಡೆಯನಾಗಿದ್ದಾರೆ. ಅರವಿಂದ್​ ಕೆ.ಪಿ. ರನ್ನರ್​ ಅಪ್​ ಆಗುವ ಮೂಲಕ 11 ಲಕ್ಷ ರೂ. ಬಹುಮಾನ ಪಡೆದುಕೊಂಡಿದ್ದಾರೆ.

    ಅರವಿಂದ್​ ಕೆ.ಪಿ. ವಿನ್ನರ್​ ಆಗದೇ ಇರುವುದು ಅಭಿಮಾನಿಗಳಿಗೆ ಶಾಕ್​ ಆಗಿದೆ. ಆದರೂ ಅಭಿಮಾನಿಗಳ ಪ್ರಕಾರ ಅರವಿಂದ್​ ಅವರೇ ವಿನ್ನರ್​. ಕಾರ್ಯಕ್ರಮ ಆಯೋಜಕರು ಅರವಿಂದ್​ರನ್ನು ವಿನ್ನರ್​ ಎಂದು ಘೋಷಿಸದೇ ಇರಬಹುದು. ಆದರೆ, ಲಕ್ಷಾಂತರ ಮಂದಿಯ ಹೃದಯದಲ್ಲಿ ಅರವಿಂದ್​ ಅವರೇ ವಿನ್ನರ್​ ಎಂದು ಜಾಲತಾಣದಲ್ಲಿ ಅಭಿಮಾನಿಗಳು ಮೀಮ್ಸ್​ಗಳನ್ನು ಹರಿಬಿಡುತ್ತಿದ್ದಾರೆ.

    ಅರವಿಂದ್​ ಟ್ರೋಫಿಯನ್ನು ಗೆಲ್ಲದೇ ಇರಬಹುದು ಆದರೆ, ವಿನ್ನರ್​ ಮಂಜು ಪಾವಗಡಗಿಂತಲೂ ಅರವಿಂದ್​ ಹೆಚ್ಚು ಹಣ ಸಂಪಾದನೆ ಮಾಡಿದ್ದಾರೆ. ಮಂಜು ಪಾವಗಡ ಟ್ರೋಫಿಯ ಜತೆಗೆ 53 ಲಕ್ಷ ರೂ. ನಗದು ಬಹುಮಾನವನ್ನು ಪಡೆದುಕೊಂಡರು. ಹಾಗದರೆ, ಅರವಿಂದ್​ ಎಷ್ಟು ಹಣ ಪಡೆದಿರಬಹುದು?

    ಸಾಮಾಜಿಕ ಜಾಲತಾಣದದಲ್ಲಿ ಹರಿದಾಡುತ್ತಿರುವ ಪ್ರಕಾರ ಅರವಿಂದ್ ಪ್ರತಿ​ ವಾರಕ್ಕೆ 4 ಲಕ್ಷ ಸಂಭಾವನೆ ಪಡೆಯುತ್ತಿದ್ದರು ಎಂದು ಹೇಳಲಾಗಿದೆ. ಸುಮಾರು 14 ವಾರಗಳ ಕಾಲ ಅರವಿಂದ್​ ಮನೆಯಲ್ಲಿ ಉಳಿದುಕೊಂಡಿದ್ದರು. ಹೀಗಾಗಿ ಫೈನಲ್​ನಲ್ಲಿ ಪಡೆದ 11 ಲಕ್ಷ ರನ್ನರ್​ ಅಪ್​ ಬಹುಮಾನದ ಜತೆಗೆ ಸಂಭಾವನೆ ರೂಪದಲ್ಲಿ 56 ಲಕ್ಷ ರೂ. ಸೇರಿದಂತೆ ಒಟ್ಟು 60 ಲಕ್ಷಕ್ಕೂ ಹೆಚ್ಚು ಹಣ ಸಂಪಾದನೆ ಮಾಡಿದ್ದಾರೆಂದು ತಿಳಿದುಬಂದಿದೆ.

    ಇನ್ನು ನ್ಯೂಸ್​ ಬಗ್ಗೆ ಶೋ ಆಯೋಜಕರಾಗಲಿ ಅಥವಾ ಅರವಿಂದ್​ ಆಗಲಿ ಖಚಿತ ಪಡಸಿಲ್ಲ. ಆದರೂ, ಕೆಲವು ಮೂಲಗಳ ಪ್ರಕಾರ ಅರವಿಂದ್​ಗೆ ಈ ಪ್ರಮಾಣದ ಹಣ ದೊರಕಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಅರವಿಂದ್​ಗೆ ಬಂಪರ್​ ಆಫರ್​ ಒಂದನ್ನು ಕಲರ್ಸ್​ ಕನ್ನಡ ನೀಡಿದೆ ಎನ್ನಲಾಗುತ್ತದೆ. ಪ್ರಖ್ಯಾತ ರಾಜ-ರಾಣಿ ಶೋಗೆ ಅರವಿಂದ್​ ಮತ್ತು ದಿವ್ಯಾ ಉರುಡುಗ ಜೋಡಿಯಾಗಿ ಬರುವಂತೆ ಆಹ್ವಾನ ನೀಡಿದ್ದಾರೆನ್ನಲಾಗಿದೆ. ಇದಕ್ಕಾಗಿ ಭಾರೀ ಮೊತ್ತದ ಸಂಭಾವನೆ ಸಹ ನೀಡಲಿದ್ದಾರೆ ಎಂದು ಮಾಹಿತಿ ಇದೆ. (ಏಜೆನ್ಸೀಸ್​)

    ಬಿಗ್​ಬಾಸ್​ ಹೋದರೇನಂತೆ ಅರವಿಯಾ ಜೋಡಿಗೆ ಒಲಿದು ಬಂತು ಮತ್ತೊಂದು ಬಂಪರ್​ ಆಫರ್​..!

    ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವನೆ ಮಾಡವುದಿಲ್ಲ ಏಕೆ? ಇಲ್ಲಿದೆ ವೈಜ್ಞಾನಿಕ ಕಾರಣಗಳು..!

    ಸ್ಟಾರ್ ಆಗಿ ಬದುಕಬಾರದು; ಅಣ್ಣಾವ್ರ ಮಾತು ನೆನಪಿಸಿದ ಎಸ್. ನಾರಾಯಣ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts