More

    30 ಸಾವಿರ ರೂ. ಸಾಲ ತಂದಿಟ್ಟ ಸಾವು: ಲೋನ್​​ ಆ್ಯಪ್​ ಏಜೆಂಟ್​ಗಳು​ ಕೊಟ್ಟ ಕಾಟಕ್ಕೆ ಉಸಿರು ಚೆಲ್ಲಿದ ದಂಪತಿ

    ವಿಶಾಖಪಟ್ಟಣ: ಇತ್ತೀಚಿನ ದಿನಗಳಲ್ಲಿ ಸಾಲದ ಆ್ಯಪ್​ಗಳು​ ಮತ್ತು ಆನ್​ಲೈನ್​ ಜೂಜಾಟಗಳು ಬಡ ಮತ್ತು ಮಧ್ಯಮ ಕುಟುಂಬಗಳ ಕತ್ತು ಹಿಸುಕುತ್ತಿವೆ. ಆನ್​ಲೈನ್​ನಲ್ಲಿ ನಡೆಯುವ ಈ ವಂಚನೆಯ ಚಕ್ರವ್ಯೂಹಕ್ಕೆ ಸಿಲುಕಿ ಸಾಕಷ್ಟು ಮಂದಿ ಬಲಿಯಾಗುತ್ತಿದ್ದಾರೆ. ಸರ್ಕಾರ ಗಂಭೀರವಾಗಿ ಪರಿಗಣಿಸಿ ಇದಕ್ಕೆಲ್ಲ ಕೂಡಲೇ ಕಡಿವಾಣ ಹಾಕದಿದ್ದರೆ, ಅಮಾಯಕ ಜೀವಗಳು ಬಲಿಯಾಗುತ್ತವೆ.

    ತಾಜಾ ಬೆಳವಣಿಗೆ ಒಂದರಲ್ಲಿ ಸಾಲದ ಆ್ಯಪ್​ ಆಪರೇಟರ್​ಗಳ ಕಿರುಕುಳವನ್ನು ಸಹಿಸಲಾರದೇ ಆಂಧ್ರ ಪ್ರದೇಶದ ರಾಜಮುಂಡ್ರಿ ಜಿಲ್ಲೆಯ ದಂಪತಿ ಸಾವಿನ ಹಾದಿ ಹಿಡಿದಿರುವ ಘಟನೆ ಬುಧವಾರ (ಸೆ.7) ನಡೆದಿದೆ.

    ಮೃತ ದಂಪತಿಯನ್ನು ದುರ್ಗಾ ರಾವ್​ ಮತ್ತು ಆತನ ಪತ್ನಿ ರಮ್ಯಾ ಲಕ್ಷ್ಮೀ ಎಂದು ಗುರುತಿಸಲಾಗಿದೆ. ದಂಪತಿ ಲೋನ್​ ಆ್ಯಪ್​ ಮೂಲಕ 30 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಹಣ ಪಾವತಿಸದಿದ್ದರೆ ರಮ್ಯಾ ಅವರು ನಗ್ನವಾಗಿ ಕಾಣುವಂತೆ ಎಡಿಟ್​ ಮಾಡಿದ ವೀಡಿಯೊಗಳು ಮತ್ತು ಫೋಟೋಗಳನ್ನು ಜಾಲತಾಣದಲ್ಲಿ ಶೇರ್​ ಮಾಡುವುದಾಗಿ ಬೆದರಿಸುವ ಮೂಲಕ ರಿಕವರಿ ಏಜೆಂಟ್‌ಗಳು ನಿರಂತರ ಕಿರುಕುಳ ನೀಡುತ್ತಿದ್ದರು. ಸುಮಾರು 2,000 ರೂ.ಗಳ ಕೆಲವು ಕಂತುಗಳನ್ನು ಪಾವತಿಸಿದರು ಸಹ ಕಿರುಕುಳ ಹಾಗೇ ಮುಂದುವರಿದಿತ್ತು. ಅಲ್ಲದೆ, ಎಡಿಟ್​ ಮಾಡಿದ ಫೋಟೋ ಮತ್ತು ವಿಡಿಯೋಗಳನ್ನು ಸಂಬಂಧಿಕರು ಮತ್ತು ಪರಿಚಯಸ್ಥರೊಂದಿಗೆ ಹಂಚಿಕೊಂಡಿದ್ದರು. ದಂಪತಿ ನಾಲ್ಕು ಮತ್ತು ಎರಡು ವರ್ಷದ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

    ದೇಶಾದ್ಯಂತ ತನ್ನ ಕಬಂಧಬಾಹು ವಿಸ್ತರಿಸಿರುವ ಲೋನ್​ ಆ್ಯಪ್​ಗಳ ಸಾಮಾನ್ಯ ಕಾರ್ಯಾಚರಣೆ ಇದೇ ಆಗಿದೆ. COVID-19 ಸಾಂಕ್ರಾಮಿಕ ಸಮಯದಲ್ಲಿ ಇವು ಹೆಚ್ಚು ಪ್ರಚಾರ ಪಡೆದುಕೊಂಡಿದೆ. ಈ ಲೋನ್ ಅಪ್ಲಿಕೇಶನ್‌ಗಳು, ಅವುಗಳಲ್ಲಿ ಹೆಚ್ಚಿನವು ಚೈನೀಸ್-ಮಾಲೀಕತ್ವದವು. ಸುಮಾರು 2,000 ರಿಂದ 20,000 ರೂ.ವರೆಗಿನ ಸಾಲಗಳನ್ನು ಬೃಹತ್ ಬಡ್ಡಿ ದರಗಳಲ್ಲಿ ನೀಡುತ್ತವೆ. ಹೆಚ್ಚು ಪರಿಶೀಲನೆಯ ಅಗತ್ಯವಿಲ್ಲದೆ, ಸಾಲ ಸುಲಭವಾಗಿ ಸಿಗುವುದರಿಂದ ಜನರು ಮರಳಾಗುತ್ತಿದ್ದಾರೆ.

    ವರದಿಗಳ ಪ್ರಕಾರ, ಲಬ್ಬರ್ತಿ ಗ್ರಾಮದಿಂದ (ಈಗ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತದೆ) ದುರ್ಗಾ ರಾವ್ ಅವರು ಹತ್ತು ವರ್ಷಗಳ ಹಿಂದೆ ರಾಜಮಂಡ್ರಿಗೆ ತೆರಳಿದರು ಮತ್ತು ಆರು ವರ್ಷಗಳ ಹಿಂದೆ ರಮ್ಯಾ ಅವರನ್ನು ವಿವಾಹವಾಗಿದ್ದರು. ಜೀವನೋಪಾಯಕ್ಕಾಗಿ ದುರ್ಗಾರಾವ್ ಪೇಂಟಿಂಗ್ ಕೆಲಸ ಮಾಡುತ್ತಿದ್ದು, ರಮ್ಯಾ ಟೈಲರಿಂಗ್ ಕೆಲಸ ಮಾಡುತ್ತಿದ್ದಳು. ಸುಮಾರು 30,000 ರೂ.ಗಳನ್ನು ಲೋನ್​ ಆ್ಯಪ್​ನಿಂದ ಸಾಲ ಪಡೆದಿದ್ದರು ಮತ್ತು ಭಾಗಶಃ ಮೊತ್ತವನ್ನು ಮರುಪಾವತಿ ಮಾಡಿದ್ದರು. ಆದರೂ ಕಿರುಕುಳ ನೀಡಿ ಸಾಯುವಂತೆ ಮಾಡಿದ್ದಾರೆ.

    ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಸಾಲದ ಅಪ್ಲಿಕೇಶನ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. (ಏಜೆನ್ಸೀಸ್​)

    ಕೆರೆಗೆ ಹಾರಿ ಸಾವಿನ ಹಾದಿ ಹಿಡಿದ ನಿರ್ದೇಶಕ ಪುರಿ ಜಗನ್ನಾಥ್​ ಸಹಾಯಕ ನಿರ್ದೇಶಕ ಸಾಯಿ ಕುಮಾರ್​

    ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ನದಿಯನ್ನು ದಾಟಿ ಪರೀಕ್ಷೆ ಬರೆದ ಯುವತಿ: ವಿಡಿಯೋ ವೈರಲ್​

    ಹಬ್ಬಕ್ಕೆಂದು ಊರಿಗೆ ಬಂದಿದ್ದ ಅಮ್ಮ-ಮಗಳು ದುರಂತ ಸಾವು: ಕುಟುಂಬಸ್ಥರಲ್ಲಿ ಮುಗಿಲು ಮುಟ್ಟಿದ ಆಕ್ರಂದನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts