More

    ಬಿಜೆಪಿ ನಾಯಕನ ಪುತ್ರನಿಂದ ಯುವತಿ ಕೊಲೆ: ಮರಣೋತ್ತರ ವರದಿಯಲ್ಲಿ ಸ್ಫೋಟಕ ರಹಸ್ಯ ಬಯಲು

    ಉತ್ತರಾಖಂಡ: ಬಿಜೆಪಿಯ ಮಾಜಿ ಸಚಿವನ ಪುತ್ರನ ರೆಸಾರ್ಟ್​ನಿಂದ ಕಾಣೆಯಾಗಿದ್ದ ಯುವತಿ ಕೊಲೆಗೀಡಾಗಿದ್ದು, ಆಕೆಯ ಶವ ನಿನ್ನೆಯಷ್ಟೇ ಪತ್ತೆಯಾಗಿತ್ತು. ಆಕೆ ಗ್ರಾಹಕರಿಗೆ ‘ಸ್ಪೆಷಲ್ ಸರ್ವಿಸ್​’ ಕೊಡಲು ಒಪ್ಪದ್ದಕ್ಕೆ ಕೊಲೆ ಮಾಡಲಾಗಿದೆ ಎಂಬ ಸಂಗತಿಯೂ ಬಯಲಾದ ಬೆನ್ನಲ್ಲೇ ಆಕೆಯ ಮರಣೋತ್ತರ ವರದಿಯು ಹೊರಬಿದ್ದಿದೆ. ಅದರಲ್ಲಿ ಸಾವಿನ ಸ್ಫೋಟಕ ರಹಸ್ಯ ಬಹಿರಂಗವಾಗಿದೆ.

    ಅಂಕಿತಾ ಭಂಡಾರಿ ಕೊಲೆಯಾದ ಯುವತಿ. ನೀರಲ್ಲಿ ಮುಳುಗಿದಾಗ ಆಗುವ ಉಸಿರುಗಟ್ಟುವಿಕೆಯಿಂದ ಅಂಕಿತಾ ಮೃತಪಟ್ಟಿದ್ದಾಳೆಂದು ಶನಿವಾರ ಹೊರಬಂದ ಮರಣೋತ್ತರ ವರದಿಯಲ್ಲಿ ಉಲ್ಲೇಖವಾಗಿದೆ. ಅಲ್ಲದೆ, ಸಾವಿಗೂ ಮುನ್ನವೇ ಆಕೆಯ ದೇಹದಲ್ಲಿ ಗಾಯಳಾಗಿದ್ದವು. ಅವು ಆಯುಧದಿಂದ ಬಲವಾಗಿ ಹೊಡೆದಾಗ ಉಂಟಾಗುವ ಗಾಯದ ಗುರುತುಗಳು ಎಂಬ ಅಂಶ ಮರಣೋತ್ತರ ವರದಿಯಲ್ಲಿದೆ.

    ಅಂಕತಾಳ ಮರಣೋತ್ತರ ಪರೀಕ್ಷೆಯನ್ನು ರಿಷಿಕೇಶದಲ್ಲಿರುವ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಶನಿವಾರ ಮಾಡಲಾಯಿತು. ಬಳಿಕ ಅಂದೇ ಆಕೆಯ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದ್ದು, ಅಂತ್ಯಕ್ರಿಯೆ ನೆರವೇರಿದೆ.

    ಉತ್ತರಾಖಂಡದಲ್ಲಿನ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ವಿನೋದ್ ಆರ್ಯ ಎಂಬವರ ಪುತ್ರ ಪುಳ್ಕಿತ್ ಆರ್ಯ ಮಾಲೀಕತ್ವದ ರೆಸಾರ್ಟ್​ ಹರಿದ್ವಾರದ ರಿಷಿಕೇಶ್​ನಲ್ಲಿದ್ದು, ಅಲ್ಲಿ 19ರ ವಯಸ್ಸಿನ ಅಂಕಿತಾ ಭಂಡಾರಿ ರಿಸೆಪ್ಷನಿಸ್ಟ್ ಆಗಿ ಕೆಲಸದಲ್ಲಿದ್ದಳು. ಆಕೆ ವಾರದ ಹಿಂದೆ ನಾಪತ್ತೆಯಾಗಿದ್ದಳು. ಬಳಿಕ ಆಕೆಯ ಕೊಲೆ ಆಗಿದೆ, ಆ ಕೊಲೆಗೂ ಪುಳ್ಕಿತ್ ಆರ್ಯಗೂ ಸಂಬಂಧ ಇದೆ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಪೊಲೀಸರು ರೆಸಾರ್ಟ್​ ಮಾಲೀಕ ಪುಳ್ಕಿತ್ ಆರ್ಯ, ಮ್ಯಾನೇಜರ್​ ಸೌರಭ್ ಭಾಸ್ಕರ್, ಅಸಿಸ್ಟೆಂಟ್ ಮ್ಯಾನೇಜರ್​ ಅಂಕಿತ್ ಗುಪ್ತಾ ಅವರನ್ನು ನಿನ್ನೆ ಬಂಧಿಸಿದ್ದರು.

    ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಬಳಿಕ ಅವರು ಆಕೆಯನ್ನು ಕೊಲೆ ಮಾಡಿ ನಾಲೆಗೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ನಿನ್ನೆ ಛೀಲಾ ನಾಲೆಯಲ್ಲಿ ಅಂಕಿತಾ ಭಂಡಾರಿ ಶವ ಸಿಕ್ಕಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

    ರೆಸಾರ್ಟ್​ಗೆ ಬರುವ ಗ್ರಾಹಕರಿಗೆ ಸ್ಪೆಷಲ್ ಸರ್ವಿಸ್ ಕೊಡಬೇಕು ಎಂಬುದಾಗಿ ಅಂಕಿತಾ ಭಂಡಾರಿಗೆ ಮಾಲೀಕ ಪುಳ್ಕಿತ್ ಒತ್ತಡ ಹಾಕುತ್ತಿದ್ದ. ಅಂಕಿತಾ ತನ್ನ ಸ್ನೇಹಿತೆಯರ ಜತೆ ನಡೆಸಿದ್ದ ಚಾಟ್​​ನಿಂದಾಗಿ ಈ ಮಾಹಿತಿ ತಿಳಿದುಬಂದಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ತಿಳಿಸಿದ್ದಾರೆ. ಮತ್ತೊಂಡೆ ಆ ಸ್ಪೆಷಲ್ ಸರ್ವಿಸ್ ಏನು ಎಂಬುದು ಖಚಿತವಾಗಿಲ್ಲ. ಇದಕ್ಕೂ ಮೊದಲು ಅಂಕಿತಾ ಸ್ನೇಹಿತನೊಬ್ಬ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದ ಮಾಹಿತಿ ಪ್ರಕಾರ, ರೆಸಾರ್ಟ್​ ಗ್ರಾಹಕರ ಜತೆ ಲೈಂಗಿಕವಾಗಿ ಸಹಕರಿಸುವಂತೆ ಆಕೆ ಮೇಲೆ ಮಾಲೀಕರ ಒತ್ತಡವಿತ್ತು ಎಂಬುದು ತಿಳಿದುಬಂದಿದ್ದಾಗಿ ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರಿದಿದೆ.

    ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್​ ಸಿಂಗ್ ಧಾಮಿ ಅವರು ಈ ಪ್ರಕರಣದ ತನಿಖೆ ಸಂಬಂಧ ವಿಶೇಷ ತನಿಖಾ ದಳವನ್ನು ರಚಿಸಿ, ತನಿಖೆಗೆ ಆದೇಶಿಸಿದ್ದಾರೆ. ಮೂವರು ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ಯುವತಿಯ ಕೊಲೆ: ಮಗನ ಹೀನ ಕೃತ್ಯಕ್ಕೆ ಬಿಜೆಪಿ ನಾಯಕನ ತಲೆದಂಡ- ಅಪ್ಪನ ಜತೆ ಅಣ್ಣನೂ ಪಕ್ಷದಿಂದ ಔಟ್​

    ರಾಜಕಾರಣಿ ಪುತ್ರನ ರೆಸಾರ್ಟಲ್ಲಿ​​ ಗ್ರಾಹಕರಿಗೆ ‘ಸ್ಪೆಷಲ್ ಸರ್ವಿಸ್’ ಕೊಡಲು ಒಪ್ಪದ ರಿಷೆಪ್ಷನಿಸ್ಟ್​ ಯುವತಿಯ ಕೊಲೆ!

    ನನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ… 25 ಕೋಟಿ ರೂ. ಲಾಟರಿ ಗೆದ್ದಿದ್ದರೂ ಕಂಗಾಲಾಗಿ ಹೋಗಿರುವ ಆಟೋ ಚಾಲಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts