More

    ಇರಲಾರದೆ ಇರುವೆ ಬಿಟ್ಟುಕೊಂಡ ಕತೆಯಿದು! ತಳಕು ಬಳಕು​ ವಿಡಿಯೋಗಳಿಗೆ ಮರುಳಾದ್ರೆ ಆಗೋದು ಹೀಗೆ

    ವಿಜಯವಾಡ: ಆಂಧ್ರ ಪ್ರದೇಶದ ಈಸ್ಟ್​ ಗೋದಾವರಿ ಜಿಲ್ಲೆಯ ಗೊಕವರಂನಿಂದ ವಂಚನೆ ಪ್ರಕರಣವೊಂದು ವರದಿಯಾಗಿದೆ. ಟಿಕ್​ಟಾಕ್​ ವಿಡಿಯೋಗಳಿಂದಲೇ ಸ್ಥಳೀಯವಾಗಿ ಪ್ರಖ್ಯಾತವಾಗಿರುವ ದಂಪತಿ, ವ್ಯಕ್ತಿಯೊಬ್ಬನಿಗೆ ಆತನ ಮಗಳನ್ನು ವಿದೇಶಕ್ಕೆ ಕಳುಹಿಸಲು ಸಹಾಯ ಮಾಡುವ ನೆಪದಲ್ಲಿ 44 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ.

    ವಿವರಣೆಗೆ ಬರುವುದಾದರೆ, ಆರೋಪಿ ದಂಪತಿಯನ್ನು ಮಾಮಿದಲ ಶ್ರೀಧರ್​ ಮತ್ತು ಛೆರುಕುಮಿಲಿ ಗಾಯತ್ರಿ ಎಂದು ಗುರುತಿಸಲಾಗಿದೆ. ಗೌರಿಶಂಕರ್​ ಎಂಬುವವರಿಗೆ 44 ಲಕ್ಷ ರೂಪಾಯಿ ಹಣ ಪಡೆದು ದಂಪತಿ ವಂಚನೆ ಮಾಡಿದ್ದಾರೆ. ಮಗಳನ್ನು ವಿದೇಶಕ್ಕೆ ಕಳುಹಿಸಲು ಸಹಾಯ ಮಾಡುವ ಭರವಸೆಯನ್ನು ನೀಡಿ ಹಣವನ್ನು ಸ್ವೀಕರಿಸಿ ಇದೀಗ ಮೋಸ ಮಾಡಿದ್ದಾರೆ.

    ದಂಪತಿಯ ಅದ್ಧೂರಿ ಟಿಕ್​ಟಾಕ್​ ವಿಡಿಯೋಗಳಿಗೆ ಗೌರಿಶಂಕರ್​ ಮಾರು ಹೋಗಿದ್ದ. ಅಲ್ಲದೆ, ಗಣ್ಯ ವ್ಯಕ್ತಿಗಳ ದಂಪತಿ ಜತೆಯಲ್ಲಿರುವ ವಿಡಿಯೋವನ್ನು ಸಹ ವೀಕ್ಷಣೆ ಮಾಡಿದ್ದ. ಅವರ ವಿಡಿಯೋದಲ್ಲಿ ಕಾಣುತ್ತಿದ್ದ ಅದ್ಧೂರಿತನವನ್ನು ನೋಡಿ ಮರುಳಾಗಿದ್ದ ಗೌರಿಶಂಕರ್​ ಅವರನ್ನು ನಂಬಿದ್ದ. ಮಗಳನ್ನು ಖಂಡಿತ ವಿದೇಶಕ್ಕೆ ಕಳುಹಿಸುಕೊಡುತ್ತಾರೆ ವಿಶ್ವಾಸವನ್ನು ಹೊಂದಿದ್ದ.

    ಆದರೆ, ದಿನ ಕಳೆದರೂ ಮಗಳನ್ನು ವಿದೇಶಕ್ಕೆ ಕಳುಹಿಸಿಕೊಡುವ ಪ್ರಯತ್ನವನ್ನು ಮಾಡದಿದ್ದಾಗ ಅನುಮಾನ ಬಂದು ತನ್ನ ಹಣವನ್ನು ಹಿಂತಿರುಗಿಸುವಂತೆ ದಂಪತಿ ಬಳಿ ಕೇಳಿದ್ದ. ಇದಾದ ಬೆನ್ನಲ್ಲೇ ದಂಪತಿ ತಮ್ಮ ಮೊಬೈಲ್​ ಸ್ವಿಚ್​ ಆಫ್​ ಮಾಡಿಕೊಂಡಿದ್ದಾರೆ. ಇದರಿಂದ ಗೌರಿಶಂಕರ್​ ಅನುಮಾನ ಮತ್ತಷ್ಟು ಬಲವಾಗಿದೆ. ಬಳಿಕ ಇಬ್ಬರ ವಿರುದ್ಧ ಗೊಕವರಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದರು.

    ಇದರ ಬೆನ್ನಲ್ಲೇ ಆರೋಪಿ ದಂಪತಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿ 15 ದಿನಗಳ ಕಾಲ ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ವಿದೇಶದಲ್ಲಿ ಅಧ್ಯಯನ ಮಾಡಬೇಕೆಂಬ ಆಸೆ ಇಟ್ಟುಕೊಂಡಿರುವ ವಿದ್ಯಾರ್ಥಿಗಳೇ ದಂಪತಿ ಟಾರ್ಗೆಟ್​ ಆಗಿದ್ದರು ಎಂದು ತಿಳಿದುಬಂದಿದೆ. ಇದೀಗ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದಂಪತಿ ವಿರುದ್ಧ ಅನೇಕರು ದೂರು ನೀಡಲು ಮುಂದೆ ಬಂದಿದ್ದು, ರಾಜಮಂಡ್ರಿ ಮತ್ತು ಕಿರ್ಲಾಂಪುಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿವೆ. (ಏಜೆನ್ಸೀಸ್​)

    ಕೃಷಿ ಅಧ್ಯಯನಕ್ಕೆಂದು ಫಾರ್ಮ್ ಹೌಸ್​ಗೆ ಬಂದಿದ್ದ ಯುವತಿಗಾಗಿ ಕಾದು ಕುಳಿತಿದ್ದ ಜವರಾಯ..!

    ನೀನೇಕೆ ಬಿಳಿಕೂದಲು ಮರೆಮಾಚುವುದಿಲ್ಲ? ತಂದೆಯ ಪ್ರಶ್ನೆಗೆ ಸಮೀರಾ ರೆಡ್ಡಿ ಕೊಟ್ಟ ಉತ್ತರಕ್ಕೆ ಎಲ್ಲರೂ ಫಿದಾ!

    ಡಿಸೆಂಬರ್​ನಲ್ಲಿ ವಿಕ್ರಾಂತ್ ರೋಣ; ತೆಲುಗು, ತಮಿಳು, ಹಿಂದಿಯಲ್ಲೂ ಕಿಚ್ಚನ ಧ್ವನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts