More

    ಪುಷ್ಪ ಚಿತ್ರದ ಬಗ್ಗೆ ಕೇಳಿ ಭಯವಾಗ್ತಿದೆ: ಮುಂದಾಗುವ ಅನಾಹುತಗಳ ಬಗ್ಗೆ ಅರಣ್ಯಾಧಿಕಾರಿಗಳ ಕಳವಳ

    ವಿಜಯವಾಡ: ನಟ ಅಲ್ಲು ಅರ್ಜುನ್​ ನಟನೆಯ ಪ್ಯಾನ್​ ಇಂಡಿಯಾ ಸಿನಿಮಾ ಪುಷ್ಪ: ದಿ ರೈಸ್​ ಬಿಡುಗಡೆ ಆದಾಗಿನಿಂದ ಒಂದಲ್ಲ ಒಂದು ವಿವಾದಕ್ಕೀಡಾಗುತ್ತಲೇ ಇದೆ. ಸಮಂತಾ ಸೊಂಟ ಬಳುಕಿಸಿದ್ದ “ಊ ಅಂಟಾವಾ ಮಾವ” ಹಾಡಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಕರ್ನಾಟಕದಲ್ಲಿ ಡಬ್ಬಿಂಗ್​ ಭಾಷೆಗಿಂತ ಮೂಲ ಭಾಷೆಯಲ್ಲಿ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಿದ್ದು ಕೂಡ ವಿರೋಧಕ್ಕೆ ಕಾರಣವಾಗಿತ್ತು. ಅಲ್ಲದೆ, ನಟಿ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ಡಬ್ಬಿಂಗ್​ ಮಾಡದೇ ಕನ್ನಡಿಗರ ವಿರೋಧ ಕಟ್ಟಿಕೊಂಡಿದ್ದರು.

    ಸಾಕಷ್ಟು ವಿರೋಧ ನಡುವೆಯೂ ಬಿಡುಗಡೆಯಾದ ಪುಷ್ಪ ಚಿತ್ರ ಗಲ್ಲಾಪಟ್ಟಿಗೆಯಲ್ಲಿ ಕಮಾಲ್​ ಮಾಡಿದೆ. ಇದೀಗ ಮತ್ತೊಂದು ವಿವಾದಕ್ಕೆ ಚಿತ್ರತಂಡ ಗುರಿಯಾಗಿದೆ. ಆಂಧ್ರ ಪ್ರದೇಶದ ಅರಣ್ಯಾಧಿಕಾರಿಗಳು ಚಿತ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪುಷ್ಪ ಚಿತ್ರದಲ್ಲಿ ರಕ್ತಚಂದನ ಕಳ್ಳಸಾಗಾಣಿಕೆಯನ್ನು ವೀರೋಚಿತ ಮಾರ್ಗದಲ್ಲಿ ಬಿಂಬಿಸಲಾಗಿದೆ. ಇದು ಯುವ ಜನಾಂಗದ ದಾರಿಯನ್ನು ತಪ್ಪಿಸುತ್ತದೆ ಎಂದು ಆರೋಪಿಸಿದ್ದಾರೆ.

    ಅದು ಗಂಧದ ಮರವಾಗಿರಲಿ, ರಕ್ತಚಂದನವೇ ಆಗಿರಲಿ ಅಥವಾ ಅರಣ್ಯಕ್ಕೆ ಸಂಬಂಧಿಸಿದ ಇತರೆ ಯಾವುದೇ ವಸ್ತುವಾಗಿರಲಿ ಅದನ್ನು ಕದ್ದು ಸಾಗಾಣಿಕೆ ಮಾಡುವುದು ಕಾನೂನಿಗೆ ವಿರುದ್ಧವಾಗಿದ್ದು, ಅದನ್ನು ಅಕ್ರಮ ಚಟುವಟಿಕೆ ಎಂದು ಪರಿಗಣಿಸಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ಅಂತಹ ಅಕ್ರಮ ಚಟುವಟಿಕೆಯನ್ನು ವೀರೋಚಿತ ಮಾರ್ಗದಲ್ಲಿ ತೋರಿಸುವುದು ಸರಿಯಲ್ಲ. ಇದು ಯುವ ಜನಾಂಗದ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅರಣ್ಯ ಸಂಪತ್ತನ್ನು ಕಳ್ಳತನ ಮಾಡುವುದೇ ಶ್ರೇಷ್ಠ ಸಾಧನೆ ಎಂದು ತಿಳಿದುಕೊಳ್ಳುತ್ತಾರೆ ಎಂದು ಅರಣ್ಯಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಭಯಂಕರ ಗಂಧದ ಮರ ಸ್ಮಗ್ಲರ್​ ವೀರಪ್ಪನ್​ ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಗಂಧದ ಮರಗಳನ್ನು ನಾಶ ಮಾಡಿದ್ದು, ಎಲ್ಲರಿಗೂ ತಿಳಿದಿದೆ. ಆತನ ಮರಣದವರೆಗೂ ಆತ ಸಾಕಷ್ಟು ಮರಗಳನ್ನು ಕಡಿದು ತುಂಬಾ ಹಣ ಸಂಪಾದಿಸಿದ್ದ. ನಂತರದಲ್ಲಿ ತಮಿಳುನಾಡಿನ ಕಟ್ಪಾಡಿ, ತಿರುವಣ್ಣಾಮಲೈ ಮತ್ತು ವೆಲ್ಲೂರು ಭಾಗಗಳ ಗ್ರಾಮಸ್ಥರು ಆಂಧ್ರದ ಶೇಷಾಚಲಂ ಅರಣ್ಯದಿಂದ ರಕ್ತಚಂದನ ಮರಗಳನ್ನು ಕಳ್ಳಸಾಗಣೆ ಮಾಡಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಸ್ಮಗ್ಲರ್​ಗಳು ನಡೆಸಿದ ದಾಳಿಯಲ್ಲಿ ಅನೇಕ ಅರಣ್ಯ ರಕ್ಷಕರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ದುರ್ಗಮ ಪರಿಸ್ಥಿತಿಯಲ್ಲಿ ಅಕ್ರಮ ಸ್ಮಗ್ಲಿಂಗ್​ ಅನ್ನು ವಿರೋಚಿತ ಮಾರ್ಗದಲ್ಲಿ ತೋರಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ.

    ತಿರುಪತಿ ಮೂಲದ ಕೇಂದ್ರ ರಕ್ತಚಂದನ ವಿಭಾಗೀಯ ಅರಣ್ಯಾಧಿಕಾರಿ ಕೆ. ಅಶೋಕ್​ ಕುಮಾರ್​ ಮಾತನಾಡಿ, ಪುಷ್ಪ ಚಿತ್ರದಲ್ಲಿ ರಕ್ತಚಂದನ ಕಳ್ಳಸಾಗಣೆಯನ್ನು ವೀರೋಚಿತ ರೀತಿಯಲ್ಲಿ ಚಿತ್ರಿಸಿರುವುದು ಕೆಲವು ಸ್ಥಳೀಯ ಯುವಕರ ಮಾತಿನಲ್ಲಿ ಕೇಳಿದೆ. ಈ ಚಿತ್ರ ಯುವಕರಿಗೆ ಯಾವ ಸಂದೇಶ ರವಾನಿಸುತ್ತಿದ್ದೆ ಎಂಬುದರ ಬಗ್ಗೆ ನನಗೆ ಭಯವಿದೆ ಎಂದು ಹೇಳಿದ್ದಾರೆ.

    ರಕ್ತಚಂದನ ಕಳ್ಳಸಾಗಾಣೆಯಲ್ಲಿ ಸಿಕ್ಕಿಬಿದ್ದರೆ ಕಾನೂನಿನ ಅಡಿಯಲ್ಲಿ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಮತ್ತು ಎಲ್ಲ ಅಕ್ರಮ ಆಸ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತದೆ. (ಏಜೆನ್ಸೀಸ್​)

    ನಿನ್ನೆ ರಾತ್ರಿ ಎಂಜಿ ರೋಡಿನಲ್ಲಿ ಬಾಯ್​ಫ್ರೆಂಡ್​ ಜತೆಗೂಡಿ ನಟಿ ದಿವ್ಯಾ ಸುರೇಶ್​ ಹೈಡ್ರಾಮ: ಪೊಲೀಸರಿಗೆ ಅವಾಜ್​

    ಸ್ಟಾರ್ಟ್‌ಅಪ್‌ ಮೂಲಕ ಮಹಿಳಾ ಜಗತ್ತಿಗೆ ಅಮೋಘ ಕೊಡುಗೆ ನೀಡಿದ ಯುವ ಉದ್ಯಮಿ ಪಂಖೂರಿ ಇನ್ನಿಲ್ಲ

    ಸೇಲ್ಸ್​ಮನ್​ ಆಗಿದ್ದ ಪಿಯೂಷ್​ ಜೈನ್​ 300 ಕೋಟಿ ಒಡೆಯನಾಗಿದ್ಹೇಗೆ? ಇಲ್ಲಿದೆ ಯಾರಿಗೆ ಗೊತ್ತಿರದ ಸಂಗತಿ

    ಧೋನಿಯಂತೆ ಕೊಹ್ಲಿ ಮೃಧುವಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ: ವಿರಾಟ್​ ಕೊಂಡಾಡಿದ ಭಜ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts