More

    ‘ಅಗ್ನಿಪಥ್​’ ವಿರೋಧಿಸಿ ಪ್ರತಿಭಟನೆ: ಬಿಹಾರ ಒಂದರಲ್ಲೇ ರೈಲ್ವೆ ಇಲಾಖೆಗೆ 700 ಕೋಟಿ ರೂ.ಗೂ ಅಧಿಕ ನಷ್ಟ

    ನವದೆಹಲಿ: ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಯನ್ನು ವಿರೋಧಿಸಿ ಕಳೆದ ನಾಲ್ಕು ದಿನಗಳಲ್ಲಿ ನಡೆದ ಪ್ರತಿಭಟನೆಯಲ್ಲಿ ಉದ್ರಿಕ್ತ ಪ್ರತಿಭಟನಾಕಾರರು ಬಿಹಾರದಲ್ಲಿ 11 ರೈಲು ಇಂಜಿನ್​ ಸೇರಿದಂತೆ 60 ರೈಲುಗಳ ಬೋಗಿಗಳನ್ನು ಸುಟ್ಟು ಹಾಕಿದ್ದಾರೆ. ಇದಿಷ್ಟು ದಿನಗಳಲ್ಲೇ ಸುಮಾರು 700 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪ್ರತಿಭಟನಾಕಾರರು ಬೆಂಕಿಗೆ ಆಹುತಿ ಮಾಡಿದ್ದಾರೆ. ಇದನ್ನು ಹೊರತುಪಡಿಸಿದರೆ, ರೈಲು ನಿಲ್ದಾಣಗಳಲ್ಲಿದ್ದ ಮಾರಾಟ ಮಳಿಗೆ ಹಾಗೂ ಭಾರತೀಯ ರೈಲ್ವೆಗೆ ಸೇರಿದ ಆಸ್ತಿಗಳನ್ನು ಪ್ರತಿಭಟನಾಕಾರರು ಧ್ವಂಸ ಮಾಡಿದ್ದಾರೆ.

    ಒಟ್ಟಾರೆ ಬಿಹಾರ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತೀವ್ರ ಪ್ರತಿಭಟನೆ ನಡೆದಿದೆ. ಅಧಿಕಾರಿಗಳ ಪ್ರಕಾರ ಒಂದು ಜನರಲ್​ ಕೋಚ್ ತಯಾರಿಸಲು 80 ಲಕ್ಷ ವೆಚ್ಚವಾಗುತ್ತದೆ. ಪ್ರತಿ ಯೂನಿಟ್​ ಸ್ಲೀಪರ್​ ಕೋಚ್​ ಮತ್ತು ಎಸಿ ಕೋಚ್​ ತಯಾರಿಸಲು ಕ್ರಮವಾಗಿ 1.25 ಮತ್ತು 3.5 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಅದೇ ರೀತಿ ರೈಲು ಇಂಜಿನ್​ ತಯಾರಿಸಲು ಸರ್ಕಾರ 20 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವ್ಯಯಿಸುತ್ತದೆ. 12 ಕೋಚ್​ ಪ್ಯಾಸೆಂಜರ್​ ಟ್ರೈನ್​ಗೆ 40 ಕೋಟಿ ರೂ. ವೆಚ್ಚವಾದರೆ, 24 ಕೋಚ್​ ಟ್ರೈನ್​ಗೆ 70 ಕೋಟಿ ರೂ.ಗೂ ಅಧಿಕ ಹಣ ಖರ್ಚಾಗುತ್ತದೆ.

    ಪೂರ್ವ-ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವೀರೇಂದ್ರ ಕುಮಾರ್ ಮಾತನಾಡಿ, ಹಿಂಸಾತ್ಮಕ ಪ್ರತಿಭಟನೆಯಿಂದಾಗಿರುವ ಆಸ್ತಿ ಹಾನಿಯ ಅಂದಾಜನ್ನು ಇನ್ನೂ ಮಾಡಲಾಗುತ್ತಿದೆ ಆದರೆ, ಒಂದು ಲೆಕ್ಕದ ಪ್ರಕಾರ ಸುಮಾರು 700 ಕೋಟಿ ರೂಪಾಯಿಗಳಷ್ಟು ಆಸ್ತಿ ಹಾನಿಯಾಗಿದೆ ಎಂದು ಹೇಳಬಹುದು. ಐದು ರೈಲು, 60 ಕೋಚ್​ ಮತ್ತು 11 ಇಂಜಿನ್​ಗಳನ್ನು ಸುಡಲಾಗಿದೆ. ಪ್ರತಿಭಟನೆಯಿಂದ ಉಂಟಾದ ಆಸ್ತಿ ಹಾನಿಯ ಸಂಪೂರ್ಣ ವರದಿಯನ್ನು ರೈಲ್ವೆ ಸಿದ್ಧಪಡಿಸುತ್ತಿದೆ ಎಂದು ತಿಳಿಸಿದರು.

    ಈ ಮೇಲಿದ್ದನ್ನು ಹೊರತುಪಡಿಸಿದರೆ, ಸುಮಾರು 60 ಕೋಟಿಗೂ ಅಧಿಕ ಪ್ರಯಾಣಿಕರು ತಮ್ಮ ಟಿಕೆಟ್ ಅನ್ನು ರದ್ದು ಮಾಡಿದ್ದಾರೆ. ಹಳಿಗಳ ಮೇಲಿನ ಅಡಚಣೆ ಮತ್ತು ರೈಲುಗಳ ರದ್ದತಿಯು ಕೂಡ ರೈಲ್ವೆಗೆ ದೊಡ್ಡ ಆರ್ಥಿಕ ಹೊಡೆತವನ್ನು ಉಂಟುಮಾಡಿದೆ. ಇದರಿಂದ ಎಷ್ಟು ನಷ್ಟವಾಗಿದೆ ಎಂಬ ಅಧಿಕೃತ ಅಂಕಿ-ಅಂಶ ನೀಡುವ ಸ್ಥಿತಿಯಲ್ಲಿ ಸದ್ಯ ರೈಲ್ವೆ ಇಲಾಖೆಯು ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಬಿಹಾರದಲ್ಲಿ ಈಗಲೂ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನಾಕಾರರು ರೈಲುಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಶನಿವಾರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 25 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು ಬಿಹಾರದಲ್ಲಿ 250 ಕ್ಕೂ ಹೆಚ್ಚು ಕುಖ್ಯಾತರನ್ನು ಬಂಧಿಸಲಾಗಿದೆ.

    ಮೂರು ದಿನಗಳಲ್ಲಿ ಒಟ್ಟು 138 ಎಫ್‌ಐಆರ್‌ಗಳು ದಾಖಲಾಗಿದ್ದು, 718 ಮಂದಿಯನ್ನು ಬಂಧಿಸಲಾಗಿದೆ. ಸಿಸಿಟಿವಿ ಮತ್ತು ವಿಡಿಯೋ ದೃಶ್ಯಾವಳಿಗಳ ಮೂಲಕ ಹಿಂಸಾಚಾರದಲ್ಲಿ ತೊಡಗಿರುವವರನ್ನು ಗುರುತಿಸಿ ಬಂಧಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. (ಏಜೆನ್ಸೀಸ್​)

    80 ಲಕ್ಷ ರೂ. ಬಂಪರ್​ ಲಾಟರಿ ಹೊಡೆದ ಕೂಡಲೇ ಹೆದರಿ ಠಾಣೆಗೆ ಓಡಿದ ಕಾರ್ಮಿಕ: ಮುಂದಾಗಿದ್ದು ರೋಚಕ!

    ಪರೀಕ್ಷೇಲಿ ಫೇಲಾದವರು ಜೀವನದಲ್ಲಿ ರ‌್ಯಾಂಕ್ ಬನ್ನಿ; ಕಡಿಮೆ ಅಂಕಕ್ಕೆ ಒತ್ತಡ-ಜಿಗುಪ್ಸೆ ಬೇಡ..

    ನನ್ನ ಅಮ್ಮ ಅಸಾಧಾರಣ, ಅಷ್ಟೇ ಸರಳ; ತಾಯಿ ಕುರಿತ ಮೋದಿ ಲೇಖನದ ಸಾರಾಂಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts