More

    ಅಶ್ಲೀಲ ವಿಡಿಯೋ ಸೋರಿಕೆ: ಖ್ಯಾತ ನಟಿ, ಬಿಗ್​ಬಾಸ್​ ಬ್ಯೂಟಿ ಅಕ್ಷರಾ ಕೊಟ್ಟ ಖಡಕ್​ ಪ್ರತಿಕ್ರಿಯೆ ಹೀಗಿತ್ತು…

    ನವದೆಹಲಿ: ಅದ್ಭುತ ಧ್ವನಿ ಮತ್ತು ಉತ್ತಮ ನಟನಾ ಕೌಶಲ್ಯದಿಂದ ಭೋಜ್​ಪುರಿ ಬ್ಯೂಟಿ ಅಕ್ಷರಾ ಸಿಂಗ್​ ಖ್ಯಾತಿ ಗಳಿಸಿದ್ದಾರೆ. ಸಿನಿಮಾದಿಂದಾಚೆಗೆ ಹಿಂದಿಯ ಬಿಗ್​ಬಾಸ್​ ಒಟಿಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಅಕ್ಷರಾ ಅವರ ಹಾಡುಗಳು ಯೂಟ್ಯೂಬ್​ನಲ್ಲಿ ಪ್ರಸಿದ್ಧಿ ಪಡೆದಿವೆ. ಇದೀಗ ಬೇರೆ ಕಾರಣಕ್ಕೆ ಅಕ್ಷರಾ ವಿವಾದಕ್ಕೆ ಗುರಿಯಾಗಿದ್ದಾರೆ.

    ಅಕ್ಷರಾ ಅವರದ್ದು ಎನ್ನಲಾದ ಎಂಎಂಎಸ್​ ವಿಡಿಯೋ ಸೋರಿಕೆಯಾಗಿದೆ. ಈ ವಿಚಾರಕ್ಕೆ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೆ ಗುರಿಯಾಗಿದ್ದಾರೆ. ಸದ್ಯ ಎಂಎಂಎಸ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ಮುಖ ಸ್ಪಷ್ಟವಾಗಿಲ್ಲ. ಆದರೆ, ವಿಡಿಯೋದಲ್ಲಿರುವುದು ಅಕ್ಷರಾ ಸಿಂಗ್​ ಎಂದು ಅನೇಕರು ವಾದಿಸುತ್ತಿದ್ದಾರೆ. ಆದಾಗ್ಯೂ ಅಕ್ಷರಾ ಅಭಿಮಾನಿಗಳು ನಟಿಯ ಪರವಾಗಿ ನಿಂತಿದ್ದು, ವಿಡಿಯೋದಲ್ಲಿರುವುದು ಅಕ್ಷರಾ ಅವರಲ್ಲ ಎಂದು ಪ್ರತಿವಾದಿಸುತ್ತಿದ್ದಾರೆ.

    ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ಅಕ್ಷರಾ, ಇಂತಹ ವಿಚಾರಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಈವರೆಗೂ ಎಂಎಂಎಸ್​ ವಿಡಿಯೋ ತುಣುಕನ್ನೇ ನೋಡಿಲ್ಲ. ಇದೊಂದು ಕಳಪೆ ವರ್ತನೆಯಾಗಿದ್ದು, ಇದರಿಂದ ನನಗೇನೂ ತೊಂದರೆ ಆಗುವುದಿಲ್ಲ ಎಂದಿದ್ದಾರೆ.

    ಇಂತಹ ಕೃತ್ಯಕ್ಕಾಗಿ ನಾನು ಅಳಲು ಹೋಗುವುದಿಲ್ಲ. ಇಂತಹ ಕೃತ್ಯವನ್ನು ಯಾರೇ ಮಾಡಿದರೂ ನಾನು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಾ ಮಾತು ಮುಗಿಸಿದರು. (ಏಜೆನ್ಸೀಸ್​)

    ಪ್ರೀತಿಸಿ ಮದ್ವೆಯಾದ ಪತ್ನಿಯನ್ನೇ ಕೊಂದನಾ ಪತಿ? ಆರೋಪ-ಪ್ರತ್ಯಾರೋಪಗಳ ಮಧ್ಯೆ ಅನಾಥವಾದ ಕಂದಮ್ಮ

    ಕಬ್ಜಗೆ ಶ್ರಿಯಾ ಶರಣು!; ನನ್ನನ್ನು ನೋಡಿ ಮಗಳು ಹೆಮ್ಮೆ ಪಡಬೇಕು

    ತಿರುಪತಿ ತಿಮ್ಮಪ್ಪನ ಸನ್ನಿಧಿಗೆ 1.02 ಕೋಟಿ ರೂಪಾಯಿ ದೇಣಿಗೆ ನೀಡಿದ ಮುಸ್ಲಿಂ ಕುಟುಂಬ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts