More

    ಒಮ್ಮೆ ಒಬ್ಬ ದುಷ್ಟ ರಾಜನಿದ್ದನು… ಟ್ವೀಟ್​ ಮಾಡಿದ ಬೆನ್ನಲ್ಲೇ ಡಿಲೀಟ್​ ಮಾಡಿದ್ದೇಕೆ ಅಮೃತಾ ಫಡ್ನವೀಸ್?​

    ಮುಂಬೈ: ಮಹಾರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ಭುಗಿಲೆದ್ದಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಮಹಾರಾಷ್ಟ್ರ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರ ಪತ್ನಿ ಅಮೃತ ಫಡ್ನವೀಸ್ ಅವರು​ ಹಾಲಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ವಿರುದ್ಧ ಟ್ವೀಟ್​ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಕೆಲವೇ ಗಂಟೆಗಳಲ್ಲಿ ತಮ್ಮ ಟ್ವೀಟ್​ ಡಿಲೀಟ್​ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

    ಒಮ್ಮೆ ದುಷ್ಟ ರಾಜನಿದ್ದನು ಎಂದು ಹಿಂದಿಯಲ್ಲಿ ಟ್ವೀಟ್​ ಮಾಡಿರುವ ಅಮೃತಾ, ಪರೋಕ್ಷವಾಗಿ ಉದ್ಧವ್​ ಠಾಕ್ರೆಯನ್ನು ದುಷ್ಟ ರಾಜ ಎಂದು ಹೋಲಿಕೆ ಮಾಡಿದ್ದಾರೆ. ಇದಾದ ಕೆಲವೇ ಸಮಯದಲ್ಲಿ ಆ ಟ್ವೀಟ್​ ಅನ್ನು ಅಮೃತಾ ಅವರು ಡಿಲೀಟ್​ ಮಾಡಿದ್ದಾರೆ. ಏಕೆ ಡಿಲೀಟ್​ ಮಾಡಿದರು ಎಂಬುದಕ್ಕೆ ಅವರೇ ಸ್ಪಷ್ಟನೇ ನೀಡಬೇಕಿದೆ. ಆದರೂ, ಅವರು ಮಾಡಿರುವ ಟ್ವೀಟ್​ನ ಸ್ಕ್ರೀನ್​​ ಶಾಟ್​ ಎಲ್ಲೆಡೆ ವೈರಲ್​ ಆಗಿದೆ.

    ಒಮ್ಮೆ ಒಬ್ಬ ದುಷ್ಟ ರಾಜನಿದ್ದನು... ಟ್ವೀಟ್​ ಮಾಡಿದ ಬೆನ್ನಲ್ಲೇ ಡಿಲೀಟ್​ ಮಾಡಿದ್ದೇಕೆ ಅಮೃತಾ ಫಡ್ನವೀಸ್?​

    ಅಂದಹಾಗೆ ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್ ಹಾಗೂ ಸಣ್ಣಪುಟ್ಟ ಪಕ್ಷಗಳನ್ನೊಳಗೊಂಡ ಮಹಾ ವಿಕಾಸ್ ಅಘಾಡಿ ಸರ್ಕಾರದ ಬುಡ ಅಲುಗಾಡಲು ಶುರುವಾಗಿದೆ. ಹಿರಿಯ ಸಚಿವ, ಶಿವಸೇನೆ ಪ್ರಭಾವಿ ನಾಯಕ ಏಕನಾಥ್ ಶಿಂಧೆ ಸಿಎಂ ಉದ್ಧವ್ ಠಾಕ್ರೆ ವಿರುದ್ಧವೇ ಬಂಡಾಯದ ಬಾವುಟ ಬೀಸಿದ್ದು, ಮೈತ್ರಿ ಸರ್ಕಾರದ ಬೇರನ್ನೇ ಕಿತ್ತೊಗೆಯಲು ತಂತ್ರ ಹೂಡಿದ್ದಾರೆ. 22 ಶಾಸಕರ ಬೆಂಬಲದೊಂದಿಗೆ ಗುಜರಾತ್​ನ ಸೂರತ್​ನಲ್ಲಿರುವ ರೆಸಾರ್ಟ್​ವೊಂದಕ್ಕೆ ತೆರಳಿ, ಬಿಜೆಪಿ ಜತೆ ಕೈಜೋಡಿಸಿ ಸರ್ಕಾರ ರಚನೆಗೆ ಯತ್ನಿಸಿದ್ದಾರೆ. ಇದೀಗ ತನ್ನ ಬೆಂಬಲಿಗರನ್ನು ಕರೆದುಕೊಂಡು ಏಕನಾಥ್​ ಶಿಂಧೆ ಅಸ್ಸಾಂಗೆ ಹಾರಿದ್ದಾರೆ.

    ಬಿಜೆಪಿ ನಾಯಕ, ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಜತೆ ನಿರಂತರ ಸಂಪರ್ಕದಲ್ಲಿದ್ದ ಏಕನಾಥ್ ಶಿಂಧೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಮೂವರು ಶಿವಸೇನೆ ಶಾಸಕರು ಬಿಜೆಪಿ ಪರ ಅಡ್ಡ ಮತದಾನ ಮಾಡಿದ ಬೆನ್ನಲ್ಲೇ ಬೆಂಬಲಿಗ ಶಾಸಕರನ್ನು ಕಟ್ಟಿಕೊಂಡು ಗುಜರಾತ್​ಗೆ ಹಾರಿದ್ದಾರೆ. ಇವರಿಗೆ ಮಹಾರಾಷ್ಟ್ರ ಮತ್ತು ಗುಜರಾತ್ ಬಿಜೆಪಿ ನಾಯಕರು ಬೆಂಗಾವಲಾಗಿ ಕೆಲಸ ಮಾಡುತ್ತಿದ್ದಾರೆ. ಏತನ್ಮಧ್ಯೆ, ದೇವೇಂದ್ರ ಫಡ್ನವಿಸ್ ದೆಹಲಿಯಲ್ಲಿದ್ದು, ಗೃಹ ಸಚಿವ ಅಮಿತ್ ಷಾ ಜತೆಗೆ ಸರ್ಕಾರ ರಚನೆ ಸಾಧ್ಯಾಸಾಧ್ಯತೆಗಳ ಬಗ್ಗೆ ವಿಸ್ತೃ ಚರ್ಚೆ ನಡೆಸಲಿದ್ದಾರೆ.

    ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಸಿಎಂ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಹಾಗೂ ಆಪ್ತ ಸಂಜಯ್ ರಾವತ್​ಗೆ ಇನ್ನಿಲ್ಲದ ಮಹತ್ವದ ನೀಡುತ್ತಿರುವುದು ಮತ್ತು ಇಲಾಖೆ ನಿರ್ವಹಣೆಯಲ್ಲಿ ಸಿಎಂ ಉದ್ಧವ್ ಠಾಕ್ರೆ ಪೂರ್ಣ ಅಧಿಕಾರ ನೀಡಿಲ್ಲ. ಇಲಾಖೆ ವ್ಯವಹಾರಗಳಲ್ಲಿ ಸಂಪುಟ ಮತ್ತಿಬ್ಬರು ಸಹೋದ್ಯೋಗಿಗಳಿಂದ ಪದೇಪದೇ ಹಸ್ತಕ್ಷೇಪ ಮಾಡುತ್ತಿರುವುದು ಹಾಗೂ ಮುಖ್ಯಮಂತ್ರಿಗೆ ಸಂಬಂಧಿಸಿದ ಫೈಲ್​ಗಳಿಗೆ ಪೂರ್ವಾನುಮತಿಯಿಲ್ಲದೆ ಸಹಿ ಹಾಕದಿರಲು ಇಲಾಖೆಯ ಉನ್ನತಾಧಿಕಾರಿಗಳಿಗೆ ಸೂಚನೆ ನೀಡಿರುವುದು ಏಕನಾಥ್ ಶಿಂಧೆ ದಂಗೆ ಏಳಲು ಕಾರಣವಾಗಿದೆ ಎಂದು ಹೇಳಲಾಗಿದೆ.

    ಏಕನಾಥ್ ಶಿಂಧೆ ಅವರನ್ನು ರೆಸಾರ್ಟ್​ನಲ್ಲಿ ಭೇಟಿಯಾದ ಶಿವಸೇನೆ ನಾಯಕರಾದ ಮಿಲಿಂದ್ ನಾವೇಕರ್ ಮತ್ತು ರವೀಂದ್ರ ಪಾಠಕ್ ಮನವೊಲಿಸುವ ಯತ್ನ ಮಾಡಿದ್ದಾರೆ. ಈ ವೇಳೆ ಉದ್ಧವ್ ಠಾಕ್ರೆ ಜತೆಗೆ ದೂರವಾಣಿಯಲ್ಲಿ ಮಾತನಾಡಿರುವ ಶಿಂಧೆ, ಸುಮಾರು 15ರಿಂದ 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಶಿವಸೇನೆಯು ಮಹಾಮೈತ್ರಿಯಿಂದ ಹೊರಬಂದು ಮತ್ತೆ ಎನ್​ಡಿಎ ಸೇರಬೇಕು ಎಂದು ಸ್ಪಷ್ಟ ನುಡಿಗಳಲ್ಲಿ ತಿಳಿಸಿದ್ದಾರೆ. ಹಿಂದುತ್ವವನ್ನು ಎತ್ತಿಹಿಡಿಯುವುದೇ ನನ್ನೊಂದಿಗಿರುವ ಶಾಸಕರ ಪ್ರಾಥಮಿಕ ಆದ್ಯತೆ. ಕಾಂಗ್ರೆಸ್ ಮತ್ತು ಎನ್​ಸಿಪಿ ನಾಯಕರಿಂದ ನಮ್ಮ ಶಾಸಕರು ತೀವ್ರ ಕಡೆಗಣನೆಗೆ ಒಳಗಾಗಿದ್ದಾರೆ ಎಂದು ಶಿಂಧೆ ಸ್ಪಷ್ಟವಾಗಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಠಾಕ್ರೆ, ಈ ಬಗ್ಗೆ ರ್ಚಚಿಸೋಣ. ಮೊದಲು ಮುಂಬೈಗೆ ಹಿಂತಿರುಗುವಂತೆ ಹೇಳಿದರು. ಆದರೆ, ಶಿಂಧೆ ನಿಲುವಿನಲ್ಲಿ ದೃಢವಾಗಿದ್ದಾರೆ. ಎನ್​ಡಿಎ ಮೈತ್ರಿಕೂಟ ಸೇರುವ ಬಗ್ಗೆ ತೀರ್ಮಾನ ಮಾಡಿ ಎಂದು ಷರತ್ತು ಹಾಕಿದ್ದಾರೆನ್ನಲಾಗಿದೆ.

    ಶಿವಸೇನೆ ನಾಯಕರು ಮೊದಲಿನಿಂದಲೂ ಕಟ್ಟರ್ ಹಿಂದುತ್ವ ಸಿದ್ಧಾಂತ ಪಾಲಿಸುತ್ತಿದ್ದು, ಮಹಾಮೈತ್ರಿ ಸರ್ಕಾರದೊಂದಿಗೆ ಮತ್ತಷ್ಟು ದಿನ ಮುಂದುವರಿದಲ್ಲಿ ಮುಂಬರುವ ಚುನಾವಣೆಯಲ್ಲಿ ಗೆಲ್ಲುವುದು ಅಸಾಧ್ಯ ಎಂಬ ಭಾವನೆ ಬಂದಿದೆ. ಹೀಗಾಗಿ, ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದಲೂ ಅನುಕೂಲ ಎಂದೇ ಎನ್​ಡಿಎ ಸೇರುವ ಉದ್ದೇಶ ಪ್ರಕಟಿಸಿದ್ದಾರೆ. (ಏಜೆನ್ಸೀಸ್​)

    ನಾಗಚೈತನ್ಯ ಲೈಫ್​ನಲ್ಲಿ ಹೊಸ ಹುಡುಗಿ?; ಶೋಭಿತಾ ಜತೆ ಕಾಣಿಸಿಕೊಂಡ ನಾಗ್

    ಹೇಳಿದಂತೆ ಮಾಡಿದ್ದೇವೆ; ದೇಸಿ ಶ್ವಾನಗಳನ್ನು ದತ್ತು ಪಡೆದ ಟೀಮ್ ಚಾರ್ಲಿ..

    ಪ್ರಧಾನಿ ಮೋದಿ ಬಲ ಬಳಕೆಗೆ ಕಾರ್ಯತಂತ್ರ: ಬಿಬಿಎಂಪಿ ಚುನಾವಣೆಗೆ ಬಿಜೆಪಿ ಸಜ್ಜು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts