ಮುಂಬೈ: ಮೊಬೈಲ್ ಫೋನ್ಸ್, ಕಂಪ್ಯೂಟರ್ಸ್ ಮತ್ತು ಇತರೆ ಎಲೆಕ್ಟ್ರಾನಿಕ್ಸ್ ಪದಾರ್ಥಗಳನ್ನು ಸಾಗಿಸುತ್ತಿದ್ದ ಟ್ರಕ್ ಒಂದು ಉರುಳಿಬಿದ್ದೊಡನೆ ಅಲ್ಲಿದ್ದ ಪದಾರ್ಥಗಳನ್ನು ಸ್ಥಳೀಯರು ಆಯ್ದುಕೊಂಡ ಘಟನೆ ಮಹಾರಾಷ್ಟ್ರದ ಉಸ್ಮಾನಾಬಾದ್ನಲ್ಲಿರುವ ಸೊಲಾಪುರ್-ಔರಂಗಾಬಾದ್ ಹೆದ್ದಾರಿಯಲ್ಲಿ ನಡೆದಿದೆ.
ಸುಮಾರು 70 ಲಕ್ಷ ರೂ. ಮೌಲ್ಯದ ಪದಾರ್ಥಗಳನ್ನು ಟಕ್ನಲ್ಲಿ ಸದ್ಯ ವಶಕ್ಕೆ ಪಡೆದುಕೊಳ್ಳಲಾಗಿದೆ. ಸ್ಥಳೀಯ ಜನರು ಪದಾರ್ಥಗಳನ್ನು ತೆಗೆದುಕೊಂಡು ಹೋಗಿದ್ದಾರೆಂಬ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಕಾರ್ಯಚರಣೆಗೆ ಪದಾರ್ಥಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕದ್ದ ಪದಾರ್ಥವನ್ನು ಮರಳಿ ಪಡೆಯಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಮೋತಿಚಂದ್ ರಾಥೋಡ್ ತಿಳಿಸಿದರು. ಕೆಲವರು ಪೊಲೀಸರ ಮನವಿ ಮೇರೆಗೆ ವಾಪಸ್ಸು ತಂದುಕೊಟ್ಟಿದ್ದಾಗಿ ಹೇಳಿದ್ದಾರೆ. ಇಲ್ಲಿಯವರೆಗೆ ಕದ್ದ ಪದಾರ್ಥಗಳಲ್ಲಿ ಶೇ. 40 ರಷ್ಟುನ್ನು ಮರಳಿ ಪಡೆಯಲಾಗಿದೆ. (ಏಜೆನ್ಸೀಸ್)
ನೀರು ಕುಡಿದ ಆಟಗಾರ- ಕೋಕಾಕೋಲಾ ಕಂಪೆನಿಗೆ 30 ಸಾವಿರ ಕೋಟಿ ರೂ ನಷ್ಟ! ಇದೇನು ವಿಚಿತ್ರ ಅಂತೀರಾ?
ಆಸ್ಪತ್ರೆಯೊಳಗೆ ರೋಗಿ ನಾಪತ್ತೆಯಾದ ಪ್ರಕರಣ ಬೆನ್ನತ್ತಿ ಹೋದ ಪೊಲೀಸರಿಗೆ ಕಾದಿತ್ತು ಶಾಕ್!