More

    ಭೀಕರ ಭೂಕುಸಿತ ಬೆನ್ನಲ್ಲೇ ವರುಣನ ಆರ್ಭಟಕ್ಕೆ ನಲುಗಿದ ಹಿಮಾಚಲ ಪ್ರದೇಶ: 9 ಸಾವು, 7 ಮಂದಿ ನಾಪತ್ತೆ

    ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭೂಕಂಪನ ಜತೆಗೆ ಜತೆಗೆ ವರುಣನ ಆರ್ಭಟವೂ ಮುಂದುವರಿದಿದ್ದು, ಮಂಗಳವಾರ ಮತ್ತು ಬುಧವಾರ ಸುರಿದ ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದ ವಿವಿಧೆಡೆ ಉಂಟಾಗಿರುವ ಪ್ರವಾಹಕ್ಕೆ 9 ಮಂದಿ ಮೃತಪಟ್ಟಿದ್ದು, ಏಳು ಮಂದಿ ನಾಪತ್ತೆ ಆಗಿದ್ದಾರೆ.

    ಲಾಹುಲಾ ಮತ್ತು ಸ್ಪಿಟಿ ಜಿಲ್ಲೆಯಲ್ಲಿ ಏಳು ಮಂದಿ ಮೃತಪಟ್ಟಿದ್ದರೆ, ಛಾಂಬಾದಲ್ಲಿ ಇಬ್ಬರು ಅಸುನೀಗಿದ್ದಾರೆ. ಕುಲು ಜಿಲ್ಲೆಯಲ್ಲಿ ದೆಹಲಿ ಮೂಲದ ಓರ್ವ ಪ್ರವಾಸಿಗ ಸೇರಿದಂತೆ ನಾಲ್ವರು ನಾಪತ್ತೆಯಾಗಿದ್ದಾರೆ. ಉಳಿದ ಮೂವರು ಲಾಹುಲಾ ಮತ್ತು ಸ್ಪಿತಿ ಜಿಲ್ಲೆಯಿಂದ ಕಾಣೆಯಾಗಿದ್ದಾರೆ.

    ನಾಪತ್ತೆಯಾದವರು ಕೆಲಸಗಾರರು ಎಂದು ತಿಳಿದುಬಂದಿದೆ. ಭೂಕುಸಿತದ ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದೆಂದು ಊಹಿಸಲಾಗಿದೆ. ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್​ಡಿಆರ್​ಎಫ್​) ಸ್ಥಳದಲ್ಲಿ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

    ಘಟನೆಯ ಬಗ್ಗೆ ಎನ್​ಡಿಆರ್​ಎಫ್​ ಮಹಾನಿರ್ದೇಶಕ ಎಸ್​.ಎನ್​. ಪ್ರಧಾನ್​ ಮಾಹಿತಿ ನೀಡಿದ್ದು, ಲಾಹುಲಾ ಮತ್ತು ಸ್ಪಿಟಿಯಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಹೆಚ್ಚುತ್ತಿರುವ ಪ್ರಾಕೃತಿಕ ವಿಕೋಪಗಳಿಗೆ ಹವಾಮಾನ ಬದಲಾವಣೆಯೇ ಪ್ರಮುಖ ಕಾರಣ ಎಂದಿದ್ದಾರೆ. ಭಾಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಪೂರ್ವಭಾವಿಯಾಗಿ ಲಾಹುಲಾ ಮತ್ತು ಸ್ಪಿಟಿಯ ದಾರ್ಚಾ ಗ್ರಾಮದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಪ್ರವಾಹದಿಂದಾಗಿ ಅಲ್ಲಲ್ಲಿ ಭೂಕುಸಿತಗಳು ಸಂಭವಿಸುತ್ತಿದ್ದು, ಅನೇಕ ಸೇತುವೆಗಳು, ಹೆದ್ದಾರಿ ಮತ್ತು ಸಂಪರ್ಕಿತ ರಸ್ತೆಗಳು ಹಾನಿಗೊಳಗಾಗಿವೆ. ಅನೇಕ ಭಾಗಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಮನಾಲಿ-ಲೇಹ್​ ಹೆದ್ದಾರಿ ಮತ್ತು ಗ್ರಂಫು ಮತ್ತು ಕಜಾ ಹೆದ್ದಾರಿಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

    ಚಂಡೀಗಢ, ಪಂಜಾಬ್​, ಹರಿಯಾಣದಲ್ಲಿ ಭಾರಿ ಮಳೆ ಸಾಧ್ಯತೆ
    ಇದೇ ಸಂದರ್ಭದಲ್ಲಿ ಭಾರತೀಯ ಹವಾಮಾನ ಇಲಾಖೆ ಚಂಡೀಗಢ, ಪಂಜಾಬ್​ ಮತ್ತು ಹರಿಯಾಣಕ್ಕೆ ಯೆಲ್ಲೋ ಮತ್ತು ಆರೆಂಜ್​ ಅಲರ್ಟ್​ ಘೋಷಿಸಿದೆ. ಧಾರಾಕಾರ ಮಳೆಯಿಂದಾಗಿ ಯಮುನಾ ಸೇರಿದಂತೆ ಹರಿಯಾಣದ ವಿವಿಧ ಉಪನದಿಗಳು ಮತ್ತು ಪ್ರಮುಖ ನದಿಗಳಲ್ಲಿ ಪ್ರವಾಹ ಉಂಟಾಗಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

    ಪ್ರವಾಸಿ ತಾಣಗಳ ರಾಜ್ಯವಾಗಿರುವ ಹಿಮಾಚಲ ಪ್ರದೇಶದಲ್ಲಿ ಕಳೆದ ಭಾನುವಾರದಂದು ಘನ ಘೋರ ದುರಂತ ಸಂಭವಿಸಿದೆ. ಗುಡ್ಡದ ಮೇಲ್ಭಾಗದಲ್ಲಿದ್ದ ಕಲ್ಲು ಬಂಡೆಗಳು ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದು, ಅದರಿಂದಾಗಿ ಸೇತುವೆಯೂ ಮುರಿದುಬಿದ್ದಿದೆ. ಘಟನೆಯಲ್ಲಿ 9 ಪ್ರವಾಸಿಗರು ಬಲಿಯಾಗಿದ್ದಾರೆ. ಸಾಂಗ್ಲಾ ಕಣಿವೆಯಲ್ಲಿ ಈ ಘಟನೆ ನಡೆದಿದ್ದು, ಸೇತುವೆಯ ಬಳಿಯಿದ್ದ ಪ್ರವಾಸಿಗರ ವಾಹನಗಳ ಮೇಲೆ ಬಂಡೆ ಉರುಳಿ ಬಿದ್ದಿದ್ದರಿಂದ 9 ಪ್ರವಾಸಿಗರು ಸಾವಿಗೀಡಾಗಿದ್ದಾರೆ. (ಏಜೆನ್ಸೀಸ್​)

    ಪ್ರಕೃತಿ ಮಾತೆ ಇಲ್ಲದ ಜೀವನ ಏನೂ ಅಲ್ಲ…ಹೀಗಂದ ಮರುಕ್ಷಣವೇ ಪ್ರಕೃತಿ ವಿಕೋಪಕ್ಕೆ ಯುವ ವೈದ್ಯೆ ಬಲಿ!

    ಕ್ಷಮೆಯಾಚಿಸಿದ ‘ಟೋಕಿಯೋ ಒಲಿಂಪಿಕ್ಸ್​’ ಸಂಘಟಕರು… ಕಾರಣವೇನು ಗೊತ್ತಾ..?

    2020ರಲ್ಲಿ ಎರಡೆರೆಡು ಬಾರಿ ಜನಿಸಿದ ನಟ ಮಿಲಿಂದ್ ಸೋಮನ್?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts