More

    5 ಮನೆ, ಈಜುಕೊಳ, ಥಿಯೇಟರ್​, ಬಾರ್​, ಲಕ್ಷುರಿ ಕಾರುಗಳು: ಸರ್ಕಾರಿ ನೌಕರನ ಮನೆ ನೋಡಿ ಅಧಿಕಾರಿಗಳೇ ಶಾಕ್​

    ಭೋಪಾಲ್​: ಮಧ್ಯಪ್ರದೇಶದ ಸರ್ಕಾರಿ ಅಧಿಕಾರಿಯ ಮನೆ ಮೇಲೆ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು)ದ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಪತ್ತೆಯಾಗಿದೆ. ಸರ್ಕಾರಿ ಅಧಿಕಾರಿಯ ಮನೆಯನ್ನು ನೋಡಿ ಇಒಡಬ್ಲ್ಯು ಅಧಿಕಾರಿಗಳೇ ಬೆಸ್ತುಬಿದ್ದಿದ್ದಾರೆ. ಏಕೆಂದರೆ, ಯಾವ ಫೈವ್​​ ಸ್ಟಾರ್​ ಹೋಟೆಲ್​ಗೂ ಕಡಿಮೆ ಇಲ್ಲ ಅನ್ನುವಂತಿದೆ ಅಧಿಕಾರಿಯ ಐಷಾರಾಮಿ ನಿವಾಸ.

    ಒಂದು ಈಜುಕೊಳ, ಒಂದು ದೊಡ್ಡ ಸ್ನಾನದ ತೊಟ್ಟಿ, ಮಿನಿ ಬಾರ್​ ಮತ್ತು ಒಂದು ಹೋಮ್​​ ಥಿಯೇಟರ್​ ಸೇರಿದಂತೆ ಲಕ್ಷುರಿ ಹೋಟೆಲ್​ನಲ್ಲಿರುವ ಇರುವ ಎಲ್ಲ ಸೌಲಭ್ಯಗಳನ್ನು ತಮ್ಮ ಮನೆಯಲ್ಲೇ ಅಧಿಕಾರಿ ಮಾಡಿಸಿಕೊಂಡಿದ್ದಾರೆ. ಮಧ್ಯಪ್ರದೇಶದ ಪಟಿಯಾಲದಲ್ಲಿ ಈ ಐಷಾರಾಮಿ ಮನೆ ಇದೆ. ಇದಿಷ್ಟು ಮಧ್ಯಪ್ರದೇಶದ ಆರ್​ಟಿಒ ಅಧಿಕಾರಿ ಸಂತೋಷ್​ ಪೌಲ್​ ಎಂಬುವರಿಗೆ ಸೇರಿದ್ದಾಗಿದೆ.

    ಅಕ್ರಮ ಆಸ್ತಿ ಸಂಪದಾನೆ ಆರೋಪ ಹಿನ್ನೆಲೆಯಲ್ಲಿ ಜಬಲ್ಪುರದಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದಾಗ ಸರ್ಕಾರಿ ಅಧಿಕಾರಿಯ ಕರ್ಮಕಾಂಡ ಬಯಲಾಗಿದೆ. ಮನೆಯಲ್ಲಿರುವ ಐಷಾರಾಮಿ ಸೌಲಭ್ಯಗಳಿಗೆ ಸಾಕ್ಷಿಯಾಗಿ ದಾಳಿಯ ವೇಳೆ ಸೆರೆಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 5 ಮನೆಗಳು ಅಧಿಕಾರಿಗೆ ಸಂಬಂಧಿಸಿದ್ದಾಗಿದೆ.

    ಇಒಡಬ್ಲ್ಯು ಅಧಿಕಾರಿಗಳ ದಾಳಿಯ ವೇಳೆ 15 ಲಕ್ಷ ರೂಪಾಯಿ ನಗದು, ದುಬಾರಿ ಚಿನ್ನಾಭರಣಗಳು, ಲಕ್ಷುರಿ ಕಾರುಗಳು, ಮನೆಗಳು ಮತ್ತು ಫಾರ್ಮ್​ ಹೌಸ್​ಗಳು ಪತ್ತೆಯಾಗಿವೆ. ಅಧಿಕಾರಿ ಸಂತೋಷ್​ ಪೌಲ್​​ ಪತ್ನಿ ರೇಖಾ ಕೂಡ ಸರ್ಕಾರಿ ಉದ್ಯೋಗಿಯಾಗಿದ್ದು, ಗಂಡನ ಕಚೇರಿಯಲ್ಲೇ ಕ್ಲರ್ಕ್​ ಆಗಿ ಕೆಲಸ ಮಾಡುತ್ತಿದ್ದಾಳೆ.

    ಪ್ರಾಥಮಿಕ ತನಿಖೆಯ ಪ್ರಕಾರ, ದಂಪತಿಯ ಆದಾಯದ ಮೂಲಗಳಿಗೆ ಹೋಲಿಸಿದರೆ ಶೇ. 650 ರಷ್ಟು ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ಅತಿರೇಕಕ್ಕೆ ಮೊಟ್ಟೆ ರಾಜಕೀಯ

    ಡಿಕೆಶಿ ಸಿಎಂ ಆಗೋದಾದ್ರೆ ಸಹಕಾರ! ಒಕ್ಕಲಿಗರ ಸಮಾವೇಶದಲ್ಲಿ ಎಚ್​ಡಿಕೆ ಹೇಳಿಕೆ

    8 ಯೂಟ್ಯೂಬ್ ಚಾನಲ್ ಬಂದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts