More

    ಅಮೆರಿಕ ಸ್ಪೀಕರ್ ಭೇಟಿಗೆ ಕೆರಳಿದ ಚೀನಾ: ತೈವಾನ್​ ವಾಯುರಕ್ಷಣಾ ವಲಯಕ್ಕೆ 21 ಯುದ್ಧ ವಿಮಾನ ಎಂಟ್ರಿ

    ಬೀಜಿಂಗ್: ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಏಷ್ಯಾ ಪ್ರವಾಸದ ವೇಳೆ ತೈವಾನ್​ಗೆ ಭೇಟಿ ನೀಡಿದ್ದು, ಇದಕ್ಕೆ ಚೀನಾ ಆಕ್ರೋಶ ಹೊರ ಹಾಕಿದೆ. ಇದಕ್ಕೆ ‘ತಕ್ಕ ಬೆಲೆ ತೆರಬೇಕಾದೀತು’ ಎಂದು ಅಮೆರಿಕಕ್ಕೆ ಚೀನಾ ಮಂಗಳವಾರ ಎಚ್ಚರಿಸಿದೆ. ತೈವಾನ್​ನಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಹತ್ತಿರದಿಂದ ವೀಕ್ಷಿಸುತ್ತಿರುವ ಚೀನಾ, ಈಗಾಗಲೇ ತೈವಾನ್​ನ ವಾಯುರಕ್ಷಣಾ ವಲಯದಲ್ಲಿ ತನ್ನ ಯುದ್ಧ ವಿಮಾನಗಳನ್ನು ನಿಯೋಜಿಸಿದೆ. 20ಕ್ಕೂ ಹೆಚ್ಚು ಫೈಟರ್​ ಜೆಟ್​ಗಳು ವಾಯುರಕ್ಷಣಾ ವಲಯದಲ್ಲಿ ಹಾರಾಡುತ್ತಿವೆ.

    ಫೈಟರ್​ ಜೆಟ್​ಗಳು ಮಾತ್ರವಲ್ಲದೆ, ಚೀನಾ ಹಾಗೂ ತೈವಾನ್​ ನಡುವಿನ ಗಡಿಯಲ್ಲಿ ಚೀನಾ ತನ್ನ ಮಿಲಿಟರಿ ಉಪಕರಣಗಳನ್ನು ನಿಯೋಜಿಸುತ್ತಿದೆ. ಟ್ಯಾಂಕರ್​ಗಳ ಸಾಲು ಗಡಿಯತ್ತ ಧಾವಿಸಿ ಬರುತ್ತಿರುವ ವಿಡಿಯೋವನ್ನು ಚೀನಾದ ನಾಗರಿಕರೊಬ್ಬರು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಅಲ್ಲದೆ, ದಕ್ಷಿಣ ಚೀನಾ ಸಮುದ್ರದ ತೀರದಲ್ಲಿ ಚೀನಾ ಯೋಧರು ಸಮರಾಭ್ಯಸದಲ್ಲಿ ತೊಡಗಿದ್ದಾರೆ ಮತ್ತು ಕರಾವಳಿಯಲ್ಲಿ ಯುದ್ಧ ನೌಕೆಗಳು ಕೂಡ ಸರ್ವ ಸನ್ನದ್ಧ ರೀತಿಯಲ್ಲಿದ್ದು, ಯುದ್ಧದ ಭೀತಿ ಆವರಿಸಿದೆ.

    ನ್ಯಾನ್ಸಿ ಪೆಲೋಸಿ ಭೇಟಿ
    ಪ್ರವಾಸದ ಎರಡನೇ ಹಂತದಲ್ಲಿ ಮಂಗಳವಾರ ಮಲೇಶ್ಯಾಕ್ಕೆ ಭೇಟಿ ಕೊಟ್ಟಿರುವ ಪೆಲೋಸಿ, ತೈವಾನ್ ರಾಜಧಾನಿ ತೈಪೆಗೆ ಮಂಗಳವಾರ ಸಂಜೆ ಭೇಟಿ ನೀಡಿದ್ದಾರೆ. ತೈವಾನ್ ತನ್ನ ಭಾಗ ಎಂದು ಹಕ್ಕು ಸಾಧಿಸುತ್ತಿರುವ ಚೀನಾಗೆ ಇದರಿಂದ ಭಾರಿ ಹಿನ್ನಡೆ ಉಂಟಾಗಿದೆ. ತೈವಾನ್​ಗೆ ಪೆಲೋಸಿ ಭೇಟಿ ದೊಡ್ಡ ಪ್ರಚೋದನೆ ಆಗಲಿದೆ ಎಂಬ ನಿಲುವು ವ್ಯಕ್ತಪಡಿಸಿದೆ. ‘ಅದಕ್ಕೆ ಅಮೆರಿಕವೇ ಹೋಣೆಯಾಗುತ್ತದೆ ಹಾಗೂ ಚೀನಾದ ಭದ್ರತಾ ಸಾರ್ವಭೌಮತ್ವ ಧಿಕ್ಕರಿಸಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನ್​ಯಿುಂಗ್ ಹೇಳಿದ್ದಾರೆ.

    ಪೆಲೋಸಿ ಭೇಟಿ ವಿರುದ್ಧ ಚೀನಾ ಎಚ್ಚರಿಕೆ ನೀಡಿರುವುದರ ನಡುವೆ, ಅಮೆರಿಕ ನಾಲ್ಕು ಸಮರ ನೌಕೆಗಳನ್ನು ತೈವಾನ್​ನ ಪೂರ್ವ ಭಾಗದಲ್ಲಿ ನಿಯೋಜಿಸಿದೆ. ಇದು ತನ್ನ ಮಾಮೂಲಿ ನಿಯೋಜನೆ ಎಂದು ಅಮೆರಿಕ ಹೇಳಿದ್ದರೂ ಸದ್ಯದ ಸನ್ನಿವೇಶದಲ್ಲಿ ಮಹತ್ವ ಪಡೆದಿದೆ. ನಾಲ್ಕು ಹಡಗುಗಳಲ್ಲಿ ಯುಎಸ್​ಎಸ್ ರೊನಾಲ್ಡ್ ರೇಗನ್ ವಿಮಾನವಾಹಕ ನೌಕೆಯೂ ಸೇರಿದೆ. ದಕ್ಷಿಣ ಚೀನಾ ಸಮುದ್ರ ದಾಟಿ ಬಂದಿರುವ ಈ ನೌಕೆ ಈಗ ತೈವಾನ್​ನ ಪೂರ್ವದಲ್ಲಿ ಫಿಲಿಪ್ಪೀನ್ಸ್ ಸಮುದ್ರದಲ್ಲಿ ಲಂಗರು ಹಾಕಿದೆ ಎಂದು ಅಮೆರಿಕ ನೌಕಾ ಪಡೆ ಮಂಗಳವಾರ ದೃಢಪಡಿಸಿದೆ.

    ಈ ನಡುವೆ, ಚೀನಾದ ಚಟುವಟಿಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ತೈವಾನ್, ಶತ್ರುಗಳ ಯಾವುದೇ ಅಪಾಯ ಎದುರಿಸಲು ಸೂಕ್ತವಾಗಿ ಪಡೆಗಳನ್ನು ರವಾನಿಸುವುದಾಗಿ ಹೇಳಿದೆ. ಪೆಲೋಸಿ ತೈವಾನ್​ಗೆ ಆಗಮಿಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಅಲ್ಲಿನ ಅಧ್ಯಕ್ಷರ ಕಚೇರಿಗೆ ಸಂಬಂಧಿಸಿದ ಹಲವು ವೆಬ್​ಸೈಟ್​ಗಳ ಮೇಲೆ ಸೈಬರ್ ದಾಳಿ ಆಗಿದೆ. ಕೆಲ ನಿಮಿಷಗಳಲ್ಲೇ ಇದನ್ನು ಸರಿಪಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    75ನೇ ವಸಂತಕ್ಕೆ ಕಾಲಿಟ್ಟ ಮಾಜಿ ಸಿಎಂ ಸಿದ್ದು: ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ಹುಟ್ಟುಹಬ್ಬ ಆಚರಣೆ​

    ಭಾರೀ ಮಳೆಗೆ ಧರೆಗುರುಳಿ ಕಾರಿನ ಮೇಲೆ ಬಿದ್ದ ಮರ: ಕರೆ ಮಾಡಿ ತಿಳಿಸಿದ್ರು ಕ್ಯಾರೆ ಎನ್ನದ ಬಿಬಿಎಂಪಿ ಸಿಬ್ಬಂದಿ

    ಕಾರಣ ನಾನೊಬ್ಬನೇ!; ಪೆಟ್ರೋಮ್ಯಾಕ್ಸ್ ಸೋಲಿಗೆ ಕ್ಷಮೆ ಕೇಳಿದ ವಿಜಯಪ್ರಸಾದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts