More

    ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಅಟ್ಟಹಾಸ: ಗುಂಡಿನ ದಾಳಿಗೆ ಬಿಹಾರದ ಕಾರ್ಮಿಕರಿಬ್ಬರು ಬಲಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ಬಿಹಾರದ ಇಬ್ಬರ ಕಾರ್ಮಿಕರನ್ನು ಉಗ್ರರು ಹತ್ಯೆ ಮಾಡಿದ್ದು, ಈ ತಿಂಗಳಲ್ಲಿ ಉಗ್ರರ ದಾಳಿಗೆ ಬಲಿಯಾದ ನಾಗರಿಕರ ಸಂಖ್ಯೆ 11ಕ್ಕೇರಿದೆ.

    ಇಂದು ರಾತ್ರಿ ಕುಲ್ಗಾಂ ಜಿಲ್ಲೆಯ ವ್ಯಾನ್ಫೋದಲ್ಲಿ ಗುಂಡಿನ ದಾಳಿ ನಡೆಸಿದ ಉಗ್ರರು ಬಿಹಾರದ ಮೂಲದ ಇಬ್ಬರು ಕಾರ್ಮಿಕರನ್ನು ಬಲಿ ಪಡೆದುಕೊಂಡಿದ್ದಾರೆ. ಫೈರಿಂಗ್​ನಲ್ಲಿ ಸ್ಥಳೀಯ ಕಾರ್ಮಿಕನೊಬ್ಬನಿಗೆ ಗಂಭೀರ ಗಾಯವಾಗಿದೆ.

    ಕುಲ್ಗಾಂನ ಲಾರಾನ್ ಗಂಗಿಪೋರ ವನ್ಪೋಹ್ ನಲ್ಲಿ ಕಾರ್ಮಿಕರ ಬಾಡಿಗೆ ಮನೆಗೆ ನುಗ್ಗಿದ ಬಂದೂಕುಧಾರಿಗಳು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಮೂಲಗಳ ಪ್ರಕಾರ, ಮೂವರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ. ಅವರಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಕಾಶ್ಮೀರದ ಮಾಜಿ ಶಾಸಕರ ಮನೆಯ ಸಮೀಪವೇ ನಡೆದಿದೆ.

    ಮೃತರನ್ನು ರಾಜಾ ರೇಶಿ ದೇವ್​ ಮತ್ತು ಜೊಗಿಂದರ್​ ರೇಶಿ ದೇವ್​ ಎಂದು ಗುರುತಿಸಲಾಗಿದೆ. ಇಬ್ಬರು ಕೂಡ ಬಿಹಾರ ನಿವಾಸಿಗಳು. ಗಾಯಗೊಂಡ ವ್ಯಕ್ತಿಯನ್ನು ಚುನ್​ ಚುನ್​ ರೇಶಿ ದೇವ್​ ಎಂದು ಗುರುತಿಸಲಾಗಿದೆ.

    ಬಿಹಾರದ ಬೀದಿ ವ್ಯಾಪಾರಿ ಮತ್ತು ಉತ್ತರಪ್ರದೇಶದ ಕಾರ್ಮಿಕರೊಬ್ಬರು ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಸಾವಗೀಡಾದ ಒಂದು ದಿನದ ಬೆನ್ನಲ್ಲೇ ಉಗ್ರರು ಇಂದು ಮತ್ತೆ ದಾಳಿ ನಡೆಸಿದ್ದಾರೆ. ಕಾಶ್ಮೀರದಲ್ಲಿ ನಾಗರಿಕರನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ನಡೆಸುತ್ತಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.

    ಇಲ್ಲಿಯವರೆಗೆ 11 ಮಂದಿ ನಾಗರಿಕರು ಉಗ್ರರ ಗುಂಡೇಟಿಗೆ ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರವೂ ಕೂಡ ಉಗ್ರರ ಹೆಡೆಮುರಿ ಕಟ್ಟಿಹಾಕಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಈಗಾಗಲೇ ಕೆಲ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಸದ್ಯ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. (ಏಜೆನ್ಸೀಸ್​)

    ಫೋಟೋ ವೈರಲ್ ಆದ​ ಬೆನ್ನಲ್ಲೇ ಪ್ರಶಾಂತ್​ ನೀಲ್​ ಹೇಳಿಕೆಗೆ ಶಾಕಿಂಗ್​ ಪ್ರತಿಕ್ರಿಯೆ ನೀಡಿದ ರಾಮ್​ ಚರಣ್​..!

    ವರದಕ್ಷಿಣೆ ಪಡೆದಿಲ್ಲ ಎಂದು ಅಫಿಡೆವಿಟ್​ ಸಲ್ಲಿಸಲು ಸರ್ಕಾರಿ ನೌಕರರಿಗೆ ಯುಪಿ ಸರ್ಕಾರದ ಸೂಚನೆ..!

    ಶ್ರೀಲೀಲಾ ನನ್ನ ಮಗಳಲ್ಲ, ಆಕೆ ಡಿವೋರ್ಸ್​ ಬಳಿಕ ಜನಿಸಿದಳು! ಮೊದಲ ಚಿತ್ರದಲ್ಲೇ ವಿವಾದಕ್ಕೆ ಸಿಲುಕಿದ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts