More

    92 ವಿದೇಶಿಗರನ್ನು ಹೊತ್ತೊಯ್ಯುತ್ತಿದ್ದ ಫಿಲಿಪೈನ್ಸ್​ ಮಿಲಿಟರಿ ವಿಮಾನ ಪತನ: 17 ಮಂದಿ ದುರಂತ ಸಾವು

    ಮನಿಲಾ: 92 ವಿದೇಶಿಗರನ್ನು ಹೊತ್ತೊಯ್ಯುತ್ತಿದ್ದ ಮಿಲಿಟರಿ ವಿಮಾನವೊಂದು ಪತನಗೊಂಡು ಬೆಂಕಿ ಹೊತ್ತಿಕೊಂಡಿರುವ ಘಟನೆ ದಕ್ಷಿಣ ಫಿಲಿಪೈನ್ಸ್​ನಲ್ಲಿ ನಡೆದಿದೆ. ಈವರೆಗೂ 17 ಮಂದಿ ಮೃತಪಟ್ಟಿದ್ದು, ಸುಮಾರು 40 ಮಂದಿಯನ್ನು ರಕ್ಷಣೆ ಮಾಡಿರುವುದಾಗಿ ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯು ಇದೆ.

    ಫಿಲಿಪೈನ್ ವಾಯುಪಡೆಯ ಸಿ-130 ವಿಮಾನವು ಜೊಲೋ ದ್ವೀಪದಲ್ಲಿ ಇಳಿಯುವಾಗ ಅಪಘಾತ ಸಂಭವಿಸಿದೆ ಎಂದು ವಾಯುಪಡೆ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೆ, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

    ಮರಗಳ ನಡುವೆ ವಿಮಾನದ ಭಗ್ನಾವಶೇಷಗಳಿಂದ ಜ್ವಾಲೆ ಮತ್ತು ಹೊಗೆಯು ಹೊರಸೂಸುತ್ತಿರುವುದನ್ನು ಚಿತ್ರಗಳಲ್ಲಿ ಕಾಣಬಹುದಾಗಿದೆ.

    ಪ್ರಾಥಮಿಕ ವರದಿಯ ಪ್ರಕಾರ, ವಿಮಾನವು ಮೂರು ಪೈಲಟ್‌ಗಳು ಮತ್ತು ಇತರ ಐದು ಸಿಬ್ಬಂದಿ ಸೇರಿದಂತೆ 92 ಜನರನ್ನು ಹೊತ್ತೊಯ್ಯುತ್ತಿತ್ತು ಎಂದು ರಕ್ಷಣಾ ಸಚಿವ ಡೆಲ್ಫಿನ್ ಲೊರೆಂಜಾನಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಅಪಘಾತಕ್ಕೀಡಾದ ವಿಮಾನದಿಂದ ಈವರೆಗೂ ಕನಿಷ್ಠ 40 ಜನರನ್ನು ರಕ್ಷಿಸಲಾಗಿದೆ ಮತ್ತು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಸಶಸ್ತ್ರ ಪಡೆಗಳ ಮುಖ್ಯಸ್ಥ ಸಿರಿಲಿಟೊ ಸೊಬೆಜಾನಾ ಸುದ್ದಿಗಾರರಿಗೆ ತಿಳಿಸಿದ್ದಾರೆ. (ಏಜೆನ್ಸೀಸ್​)

    ನಕಲಿ ಐಡಿ, ಪ್ರೀತಿ, ಕೊಲೆ, ಆತ್ಮಹತ್ಯೆ! ಮಗು ಸೇರಿ ಮೂವರ ಪ್ರಾಣ ಕಸಿದ ಫೇಸ್​ಬುಕ್​ ಟೈಮ್​ ಪಾಸ್ ಲವ್​​

    ಅರಣ್ಯದಲ್ಲಿ ಮಗು ಅಳುವ ಶಬ್ದ ಕೇಳಿ ಅಲ್ಲಿಗೆ ತೆರಳಿದವರಿಗೆ ಕಾದಿತ್ತು ಬಿಗ್​ ಶಾಕ್​!

    ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇಮಿಗಳ ನಿರ್ಧಾರ! ಆದ್ರೆ ಆಗಿದ್ದೇ ಬೇರೆ, ಪ್ರೀತಿ ಕೊಂದ ಮಾಯಾಂಗನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts