More

    16 ವರ್ಷದ ಹಿಂದು ಹುಡುಗಿ ಅಪಹರಿಸಿ ಮುಸ್ಲಿಂ ವ್ಯಕ್ತಿಯ ಜತೆ ಬಲವಂತದ ಮದ್ವೆ: ಪಾಕ್​ನಲ್ಲಿ ಹಿಂದುಗಳ ಪ್ರತಿಭಟನೆ

    ಲಾಹೋರ್​: ಪಾಕಿಸ್ತಾನದಲ್ಲಿ ಹಿಂದುಗಳು ಮೇಲಿನ ದೌರ್ಜನ್ಯಕ್ಕೆ ಕೊನೆ ಎಂಬುದಿಲ್ಲವೆ? ಈ ರೀತಿಯ ಆತಂಕದ ವಾತಾವರಣ ಅಲ್ಲಿ ನಿರ್ಮಾಣವಾಗಿದೆ. ಏಕೆಂದರೆ, ಹಿಂದುಗಳ ಮೇಲಿನ ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಲೇ ಇದೆ.

    ತಾಜಾ ಬೆಳವಣಿಗೆ ಒಂದರಲ್ಲಿ 16 ವರ್ಷದ ಹಿಂದು ಹುಡುಗಿಯನ್ನು ಅಪಹರಿಸಿ, ಬಲವಂತವಾಗಿ ಮುಸ್ಲಿಂ ವ್ಯಕ್ತಿಯ ಜತೆ ಮದುವೆ ಮಾಡಿರುವ ಘಟನೆ ಪಾಕಿಸ್ತಾನದ ಸಿಂಧ್​ ಪ್ರಾಂತ್ಯದಿಂದ ವರದಿಯಾಗಿದೆ. ಅಪಹರಣದ ಬಳಿಕ ಹುಡುಗಿಯನ್ನು ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಿರುವ ಆರೋಪ ಕೇಳಿಬಂದಿದೆ.

    ಈ ಘಟನೆ ಬೆನ್ನಲ್ಲೇ ಹಿಂದು ಸಮುದಾಯವು ನವಾಬ್ಷಾದಲ್ಲಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್​ ಅಲಿ ಜರ್ದಾರಿ ಮನೆಯ ಮುಂದೆ ಪ್ರತಿಭಟನೆ ನಡೆಸಿ, ನೆರವು ನೀಡುವಂತೆ ಕೋರಿದ್ದಾರೆ. ಪಾಕ್​ ಪತ್ರಿಕೆ ಡಾನ್​ ವರದಿ ಪ್ರಕಾರ ಒಂದು ವಾರದ ಹಿಂದೆ ಸಿಂಧ್​ ಪ್ರಾಂತ್ಯದ ಖಾಜಿ ಅಹ್ಮೆದ್​ನಿಂದ ಹುಡುಗಿಯನ್ನು ಅಪಹರಿಸಲಾಗಿದೆ ಎಂದು ಹೇಳಲಾಗಿದೆ.

    ಹಿಂದುಗಳ ಮೇಲಿನ ದೌರ್ಜನ್ಯ ಪಾಕ್​ನಲ್ಲಿ ಸರ್ವೆ ಸಾಮಾನ್ಯವಾಗಿದೆ. ಈ ಬಗ್ಗೆ ಈಗಾಗಲೇ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಭಾರತೀಯ ಪ್ರತಿನಿಧಿ ಧ್ವನಿ ಎತ್ತಿದ್ದಾರೆ. ‘ಪಾಕಿಸ್ತಾನದಲ್ಲಿ ಸಾವಿರಾರು ಸಿಖ್ಖರು, ಹಿಂದುಗಳು ಮತ್ತು ಕ್ರೈಸ್ತ ಅಲ್ಪಸಂಖ್ಯಾತ ಮಹಿಳೆಯರು ಹಾಗೂ ಹುಡುಗಿಯರು ಅಪಹರಣಕ್ಕೆ ಒಳಗಾಗುತ್ತಿದ್ದಾರೆ. ಅವರನ್ನು ಮತಾಂತರ ಮಾಡಿ ಬಲವಂತದ ಮದುವೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಕರಾಳ ಮುಖವನ್ನು ಬಯಲು ಮಾಡಿದ್ದಾರೆ. (ಏಜೆನ್ಸೀಸ್​)

    ಬಿಗ್​ಬಾಸ್ ಫೀವರ್ ಶುರು​: 9ನೇ ಸೀಸನ್​ನಲ್ಲಿ ಯಾರೆಲ್ಲ ಡೊಡ್ಮನೆ ಪ್ರವೇಶಿಸಲಿದ್ದಾರೆ? ಇಲ್ಲಿದೆ ಸಂಭವನೀಯ ಪಟ್ಟಿ​…

    ಕಿಕ್​ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಯುವಕ ಸಾವು: ಆಟ ಆಡುತ್ತಿರುವಾಗಲೇ ಜೀವ ಕಸಿದ ದುರ್ವಿಧಿ

    ಬ್ರಿಟನ್​ ಪ್ರಧಾನಿ ರೇಸ್​ನಲ್ಲಿ ರಿಷಿ ಸುನಕ್ ಮುನ್ನಡೆ: ಮೊದಲ ಸುತ್ತಿನಲ್ಲಿ ಹೆಚ್ಚು ಮತ ಪಡೆದ ಇನ್ಫಿ ಮೂರ್ತಿ ಅಳಿಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts