More

    ಶಸ್ತ್ರಾಸ್ತ್ರ ಬದಿಗಿಟ್ಟು ಶರಣಾಗಲು ಒಪ್ಪದಿದ್ದಕ್ಕೆ 13 ಯೂಕ್ರೇನ್​ ಯೋಧರನ್ನು ಹತ್ಯೆಗೈದ ರಷ್ಯಾ ಯುದ್ಧನೌಕೆ

    ಕಿಯೆವ್​/ಮಾಸ್ಕೋ: ಯೂಕ್ರೇನ್​ ಮತ್ತು ರಷ್ಯಾ ನಡುವಿನ ಯುದ್ಧ ಎರಡನೇ ದಿನವೂ ಮುಂದುವರಿದಿದೆ. ಯೂಕ್ರೇನ್ ಮೇಲೆ ರಷ್ಯಾ ಪಡೆಗಳ ದಾಳಿ ತೀವ್ರಗೊಂಡಿದ್ದು, ಈಗಾಗಲೇ ಸೈನಿಕರು ಸೇರಿದಂತೆ ನೂರಕ್ಕೂ ಹೆಚ್ಚು ಯೂಕ್ರೇನಿಯನ್ನರು ಮೃತಪಟ್ಟಿದ್ದಾರೆ. ತಾಜಾ ಬೆಳವಣಿಗೆಯಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಲು ನಿರಾಕರಿಸಿದ ಯೂಕ್ರೇನ್​ನ 13 ಯೋಧರನ್ನು ರಷ್ಯಾದ ಯುದ್ಧ ನೌಕೆ ಹತ್ಯೆಗೈದಿದೆ.

    ಯೂಕ್ರೇನಿಯನ್​ ದ್ವೀಪದಲ್ಲಿದ್ದ 13 ಯೋಧರನ್ನು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗುವಂತೆ ರಷ್ಯಾ ಯುದ್ಧನೌಕೆ ಕೇಳಿತು. ಇಲ್ಲವಾದಲ್ಲಿ ಎಲ್ಲರನ್ನು ಹೊಡೆದುರುಳಿಸುವುದಾಗಿ ಎಚ್ಚರಿಸಿತು. ಆದರೆ, ಇದನ್ನು ತಿರಸ್ಕರಿಸಿ ರಷ್ಯಾ ನಡೆಯನ್ನು ಟೀಕಿಸಿ, ನಿಂದಿಸಿದ್ದಕ್ಕೆ ಆ 13 ಯೋಧರನ್ನು ರಷ್ಯಾ ಯುದ್ಧನೌಕೆ ಹತ್ಯೆಗೈದಿದೆ.

    ಇನ್ನು ಯೂಕ್ರೇನ್​ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ರಷ್ಯಾದ ಜನರೇ ವಿರೋಧಿಸಿ ಮಾಸ್ಕೋದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಯುದ್ಧವನ್ನು ನಿಲ್ಲಿಸಿ ಎಂದು ಒತ್ತಾಯ ಮಾಡಿದ್ದು, ಪ್ರತಿಭಟನಾ ನಿರತ 1000ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

    ಯುದ್ಧದ ಬಗ್ಗೆ ಯೂಕ್ರೇನ್‌ ಮಾಹಿತಿ ನೀಡಿದ್ದು, ರಷ್ಯಾವು ಸೇನಾ ನೆಲೆಗಳ ಮೇಲೆ ಮಾತ್ರವಲ್ಲದೇ ಜನರ ಮೇಲೂ ದಾಳಿ ಮಾಡುತ್ತಿದೆ. ಪ್ರಮುಖ ನಗರಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಅಮಾಯಕರ ಬಲಿ ತೆಗೆದುಕೊಳ್ಳುತ್ತಿದೆ. ಈವರೆಗೆ ಸೈನಿಕರು ಸೇರಿದಂತೆ 137 ಜನರು ಹತರಾಗಿದ್ದು, ಇನ್ನೂ ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಯೂಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಜೆಲೆನ್​ಸ್ಕಿ ಹೇಳಿದ್ದಾರೆ.

    ಉಕ್ರೇನ್‌ನ ಕೀವ್, ಬಾರ್ಕೇವಾ, ಒಡೆಸಾ, ಮಾಮ್‌ಪ್ರೀತ್ ಹಾಗೂ ಕ್ರಾಮ್‌ಬೋರೆಸ್ಕೆ ಸೇರಿದಂತೆ 11 ನಗರಗಳನ್ನು ಗುರಿಯಾಗಿರಿಸಿಕೊಂಡು ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ರಷ್ಯಾ 8.5 ಲಕ್ಷ ಸಕ್ರಿಯ ಸೈನಿಕರನ್ನು ಹೊಂದಿದ್ದರೆ, ಉಕ್ರೇನ್ ಕೇವಲ 2 ಲಕ್ಷ ಸಕ್ರಿಯ ಸೈನಿಕರನ್ನು ಹೊಂದಿದೆ.

    ರಷ್ಯಾದ ರಕ್ಷಣಾ ಬಜೆಟ್ ಉಕ್ರೇನ್‌ನ 10 ಪಟ್ಟು ಹೆಚ್ಚು. ಪರಿಸ್ಥಿತಿಗಳಲ್ಲಿ, ಉಕ್ರೇನ್‌ಗೆ ತನ್ನ ರಕ್ಷಣೆಯನ್ನು ಖಾತರಿಪಡಿಸುವ ಮಿಲಿಟರಿ ಸಂಘಟನೆಯ ಅಗತ್ಯವಿದೆ. ಇದೇ ಕಾರಣಕ್ಕೆ ಉಕ್ರೇನ್ ತನ್ನ ಪರ್ಯಾಯ ರಕ್ಷಣಾ ವ್ಯವಸ್ಥೆಯಾಗಿ ನ್ಯಾಟೋವನ್ನು ಆಯ್ಕೆ ಮಾಡಿತ್ತು. ಆದರೆ ಉಕ್ರೇನ್​ನ ಈ ನಿರ್ಧಾರ ರಷ್ಯಾ ಕಣ್ಣು ಕೆಂಪಾಗುವಂತೆ ಮಾಡಿದ್ದು ಅದರ ಮೇಲೆ ಸಮರ ಸಾರಿದೆ. (ಏಜೆನ್ಸೀಸ್​)

    ಒಂಟಿಯಾದ ಯೂಕ್ರೇನ್‌ ಏಕಾಂಗಿ ಹೋರಾಟ: ಸೇನೆಯಷ್ಟೇ ಅಲ್ಲದೇ ಜನರ ಮೇಲೂ ರಷ್ಯಾ ದಾಳಿ! 137 ಮಂದಿ ಬಲಿ

    ರೀಲ್ಸ್​ ಮಾಡಿದ ಎಡವಟ್ಟು: ಆಂಧ್ರದಲ್ಲಿ ವಿವಾದದ ಕಿಡಿಹೊತ್ತಿಸಿದ ಯುವತಿಯರಿಬ್ಬರ ಒಂದೇ ಮನೆಯ ವಾಸ!

    ಮತ್ತೆ ನಿಜವಾಯ್ತಾ ಕೋಡಿಮಠ ಶ್ರೀಗಳ ಭವಿಷ್ಯ? ಅವರು ಹೇಳಿದ ದೇಶವೇ ಯೂಕ್ರೇನಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts