More

    ತ್ವರಿತ, ಪಾರದರ್ಶಕತೆಗೆ ಇ-ಆಡಳಿತ ಅವಶ್ಯ – ವಿಎಸ್‌ಕೆ ವಿವಿ ಕುಲಪತಿ ಪ್ರೊ.ಸಿದ್ದು ಅಲಗೂರು ಹೇಳಿಕೆ

    ಬಳ್ಳಾರಿ: ಕಂಪ್ಯೂಟರ್ ತಂತ್ರಾಂಶ ಬಳಸಿ ವಿವಿಧ ಪ್ರಮಾಣ ಪತ್ರ ತ್ವರಿತವಾಗಿ ವಿದ್ಯಾರ್ಥಿಗಳಿಗೆ ಸಿಗುವಂತೆ ಮಾಡಲು ಇ-ಆಡಳಿತ ಅವಶ್ಯಕ ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಸಿದ್ದು ಪಿ.ಅಲಗೂರು ಹೇಳಿದರು. ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಬುಧವಾರ ಆಯೋಜಿಸಿದ್ದ ಸೇವಾಸಿಂಧು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಇ-ಆಡಳಿತ ವ್ಯವಸ್ಥೆ ಪಾರದರ್ಶಕತೆಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿವಿಧ ಪ್ರಮಾಣಪತ್ರ ನಿಗದಿತ ಸಮಯದಲ್ಲಿ ಪಡೆಯಲು ಸೇವಾಸಿಂಧು ಸಹಕಾರಿಯಾಗಲಿದೆ ಎಂದರು.

    ಸೇವಾಸಿಂಧು ಯೋಜನೆಯ ಜಿಲ್ಲಾ ಮ್ಯಾನೇಜರ್ ಮಹಮ್ಮದ್ ಇಸ್ಮಾಯಿಲ್ ಮಾತನಾಡಿ, ವಿವಿ ವ್ಯಾಪ್ತಿಗೆ ಬರುವ ಪದವಿ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಬೇಕಾದ ಪ್ರಮಾಣಪತ್ರಗಳನ್ನು ಕಾಲೇಜು ಆಡಳಿತದಿಂದ ವಿವಿಗೆ ಇ-ವರ್ಗಾವಣೆ ಮಾಡಿದಲ್ಲಿ ಸಂಬಂಧಪಟ್ಟ ವಿಭಾಗದ ಸಹಾಯಕರು ಪರಿಶೀಲಿಸಿ ಮರಳಿ ಸೇವಾಸಿಂಧು ಪೋರ್ಟಲ್‌ನಲ್ಲಿಯೇ ಕಳುಹಿಸಿ ಕೊಡುತ್ತಾರೆ. ಇದರಿಂದ ಕಾಲೇಜು ಆಡಳಿತಕ್ಕೆ, ವಿದ್ಯಾರ್ಥಿಗಳಿಗೆ ಅಲೆದಾಟ ತಪ್ಪಲಿದೆ ಎಂದರು.

    ವಿವಿ ಕುಲಸಚಿವೆ ಪ್ರೊ.ಬಿ.ಕೆ.ತುಳಸಿಮಾಲಾ ಮಾತನಾಡಿ, ಸೇವಾಸಿಂಧು ವ್ಯವಸ್ಥೆಯಿಂದ ಆಡಳಿತ ಸುಧಾರಣೆ ಮತ್ತು ಪರಸ್ಪರ ಸಹಕಾರ ನೀತಿ ಉತ್ತಮಗೊಳ್ಳುವುದರಲ್ಲಿ ಸಂಶಯವಿಲ್ಲ. ನೇರವಾಗಿ ವಿದ್ಯಾರ್ಥಿಗಳ ಕೈಗೆ ಪದವಿ ಪ್ರಮಾಣ ಪತ್ರ, ತಾತ್ಕಾಲಿಕ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ ಸೇರಿ ಇನ್ನಿತರೆ ದಾಖಲೆಗಳು ಸಿಗಲಿವೆ ಎಂದರು.

    ಕೊಪ್ಪಳ, ಹೊಸಪೇಟೆ ಸೇರಿ ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳ 80ಕ್ಕೂ ಹೆಚ್ಚು ಪ್ರಾಂಶುಪಾಲರಿಗೆ ಸೇವಾಸಿಂಧು ತರಬೇತಿ ನೀಡಲಾಯಿತು. ಸಂಧ್ಯಾಶ್ರೀ, ಗೀತಾ ಪ್ರಾರ್ಥಿಸಿದರು. ವಿವಿಯ ನೋಡಲ್ ಅಧಿಕಾರಿ ಡಾ.ಉದಯಕುಮಾರ್ ಖಡ್ಕೆ ಸ್ವಾಗತಿಸಿದರು. ಡಾ. ಅರುಣಕುಮಾರ ಲಗಶೆಟ್ಟಿ ನಿರೂಪಿಸಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts