More

    ಪೊಲೀಸರ ಚುರುಕಿನ ಕಾರ್ಯಾಚರಣೆ, ವಂಚನೆಯಾಗಿದ್ದ 7.91 ಲಕ್ಷ ಖಾತೆಗೆ ವಾಪಾಸ್


    ಕಾರವಾರ: ಆನ್​ಲೈನ್ ವಂಚಕರು ಜಿಲ್ಲೆಯ ಜನರ ಬ್ಯಾಂಕ್ ಖಾತೆಗಳಿಂದ ದೋಚಿದ್ದ 7.91 ಲಕ್ಷ ರೂ.ಗಳು ಸಿಇಎನ್ ಠಾಣೆ ಪೊಲೀಸರ ಚುರುಕಿನ ಕಾರ್ಯಾಚರಣೆಯಿಂದ ಮರಳಿ ಬಂದಿದೆ.
    ಸಿದ್ದಾಪುರದ ಗಜಾನನ ಅವರಿಂದ ಒಟಿಪಿ ಪಡೆದು ದೋಚಿದ್ದ 1.79 ಲಕ್ಷ ರೂ., ಕಾರವಾರ ನೌಕಾನೆಲೆ ಮನೋಜ್ ಅವರ ಖಾತೆಯಿಂದ ದೋಚಿದ್ದ 1.83. ಲಕ್ಷ ರೂ., ಅಂಕೋಲಾದ ಮಂಜುನಾಥ ಅವರ ಬ್ಯಾಂಕ್ ಖಾತೆಯಿಂದ ದೋಚಿದ್ದ 3.77 ಲಕ್ಷ ರೂ. ಹೊನ್ನಾವರದ ಸುಭಾಷ ಅವರ ಖಾತೆಯಿಂದ ದೋಚಿದ್ದ 50 ಸಾವಿರ ರೂ.ಗಳನ್ನು ಪತ್ರ ವ್ಯವಹಾರ ನಡೆಸಿ ಅವರವರ ಖಾತೆಗಳಿಗೆ ಮರಳಿ ಪಡೆಯಲಾಗಿದೆ ಎಂದು ಎಸ್​ಪಿ ಕಚೇರಿ ಪ್ರಕಟಣೆ ತಿಳಿಸಿದೆ.
    ಎಚ್ಚರವಹಿಸಲು ಸೂಚನೆ: ಯಾವುದೇ ಬ್ಯಾಂಕ್, ಮೊಬೈಲ್ ನೆಟ್​ವರ್ಕ್ ಕಂಪನಿ ಅಥವಾ ಇನ್ಯಾವುದೇ ಸಂಸ್ಥೆಯು ತಮ್ಮ ಸೇವೆಗಳ ನವೀಕರಣಕ್ಕಾಗಿ ನಿಮ್ಮ ಕೆವೈಸಿ, ಆಧಾರ್, ಡೆಬಿಟ್, ಕ್ರೆಡಿಟ್ ಕಾರ್ಡ್​ಗಳ ಒಟಿಪಿ ವಿವರಗಳನ್ನು ಕೇಳುವುದಿಲ್ಲ. ಯಾವುದೇ ಅಪ್ಲಿಕೇಷನ್ ಡೌನ್​ಲೋಡ್ ಮಾಡಲು ಹೇಳುವುದಿಲ್ಲ. ಆದ್ದರಿಂದ ಮೋಸದ ಕರೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ್ ತಿಳಿಸಿದ್ದಾರೆ. ಆನ್​ಲೈನ್ ಆಪ್​ಗಳ ಮೂಲಕ ಹಣ ವರ್ಗಾವಣೆ ಮಾಡಿದಾಗ ಸಂಬಂಧಪಟ್ಟವರಿಗೆ ತಲುಪದಿದ್ದರೆ ಗೂಗಲ್ ಮೂಲಕ ಗ್ರಾಹಕರ ಸಹಾಯವಾಣಿ ಸಂಖ್ಯೆ ಹುಡುಕಲಾಗುತ್ತದೆ. ಆ ಸಂಖ್ಯೆಗೆ ಕರೆ ಮಾಡಿದಾಗ ಅವರು ಒಂದು ಲಿಂಕ್, ಸಂದೇಶ ಅಥವಾ ಯುಪಿಐ ಪಿನ್ ಅನ್ನು ಮತ್ತೊಂದು ಮೊಬೈಲ್​ಫೋನ್ ನಂಬರ್​ಗೆ ಕಳುಹಿಸಲು ಹೇಳಿದರೆ ಕಳುಹಿಸಬೇಡಿ. ಅಂತಹ ಸಂಖ್ಯೆಗಳು ವಂಚಕರದ್ದಾಗಿರುತ್ತವೆ ಎಂದು ಮಾಹಿತಿ ನೀಡಿದ್ದಾರೆ. ಯಾರಾದರೂ ವಂಚನೆಗೆ ಒಳಗಾಗಿದ್ದರೆ ಹತ್ತಿರದ ಪೊಲೀಸ್ ಠಾಣೆ ಅಥವಾ ಸಿಇಎನ್ ಅಪರಾಧಗಳ ಪೊಲೀಸ್ ಠಾಣೆಗೆ ದೂರು ನೀಡುವಂತೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts