More

    ಸಾಂಸ್ಥಿಕ ಕ್ವಾರಂಟೈನ್​ಗಳಲ್ಲಿ ಕಿರಿಕಿರಿ

    ಪಂಕಜ ಕೆ.ಎಂ./ಸತೀಶ್ ಕೆ.ಬಳ್ಳಾರಿ ಬೆಂಗಳೂರು

    ಹೊರದೇಶ, ಹೊರರಾಜ್ಯಗಳಿಂದ ಬರುತ್ತಿರುವವನ್ನು ಸಾಂಸ್ಥಿಕ ಹಾಗೂ ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ, ಈ ಕ್ವಾರಂಟೈನ್ ವ್ಯವಸ್ಥೆ ಸರ್ಕಾರ ಹಾಗೂ ಕ್ವಾರಂಟೈನ್​ಗೆ ಒಳಗಾಗುತ್ತಿರುವವರ ನಡುವೆ ಕಿರಿಕಿರಿಗೆ ಕಾರಣವಾಗುತ್ತಿದೆ. ಕ್ವಾರಂಟೈನ್​ಗೆ ಒಳಗಾಗಲು ವಿರೋಧ ವ್ಯಕ್ತಪಡಿಸುವ ಪ್ರಯಾಣಿಕರ ಮನವೊಲಿಸುವುದು ಅಧಿಕಾರಿಗಳಿಗೆ ಇನ್ನಿಲ್ಲದ ತಾಪತ್ರಯ ಕೊಡುತ್ತಿದ್ದರೆ, ಊಟ- ವಸತಿ ಸೇರಿ ಮೂಲಸೌಕರ್ಯ ಒದಗಿಸದಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಸೋಂಕು ತಡೆಗಟ್ಟುವಲ್ಲಿ ಹಾಗೂ ನಿವಾರಣೆ ಕಾರ್ಯದಲ್ಲಿ ಕರ್ನಾಟಕ ರಾಜ್ಯ ಕೈಗೊಂಡಿರುವ ಕ್ರಮಗಳನ್ನು ಕೇಂದ್ರ ಸರ್ಕಾರ ಶ್ಲಾಘಿಸಿದೆ. ಸೋಂಕಿತರ ಚಿಕಿತ್ಸೆಗೆ ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಸೋಂಕಿತರ ಆರ್ಥಿಕ ಸ್ಥಿತಿಗೆ ಅನುಗುಣವಾಗಿ 5 ಸ್ಟಾರ್ ಹೋಟೆಲ್​ನಿಂದ ಸಾಮಾನ್ಯ ಹೋಟೆಲ್​ವರೆಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಆರ್ಥಿಕ ದುರ್ಬಲರಿಗೆ ಉಚಿತವಾಗಿ ಹಾಸ್ಟೆಲ್, ಸಮುದಾಯ ಭವನಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಮೂಲಸೌಕರ್ಯಗಳ ಕೊರತೆ ಯಿಂದಾಗಿ ಕೆಲವೆಡೆ ವಿರೋಧಗಳು ವ್ಯಕ್ತವಾಗುತ್ತಿವೆ. ಊಟದಲ್ಲಿ ಉಪು್ಪ-ಖಾರ ಇಲ್ಲ. ಹೊಟ್ಟೆಯೇ ತುಂಬುತ್ತಿಲ್ಲ. ಕೊಡುವ ಊಟ ತಿನ್ನಲೂ ಆಗಲ್ಲ, ಹಸಿವಿನಿಂದಾಗಿ ಬಿಡಲೂ ಆಗುವುದಿಲ್ಲ. ಕೊಳಕು ಸ್ನಾನಗೃಹ, ಗಬ್ಬು ನಾರುವ ಶೌಚಗೃಹ, ಸೊಳ್ಳೆ ಕಾಟ, ನಮ್ಮ ಸಮಸ್ಯೆಯನ್ನೂ ಯಾರೂ ಕೇಳೋರೇ ಇಲ್ಲ ಎಂದು ರಾಜ್ಯದ ಕೆಲವೆಡೆ ಕ್ವಾರಂಟೈನ್ ಕೇಂದ್ರಗಳಲ್ಲಿರುವವರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಪ್ರತಿಭಟನಾನಿರತರನ್ನು ಶಾಂತಗೊಳಿಸಲು ಅಧಿಕಾರಿಗಳು ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ.

    ಇದನ್ನೂ ಓದಿ  ಭಾರತ-ಚೀನಾ ಉದ್ವಿಗ್ನತೆ: ರಕ್ಷಣಾ ಮುಖ್ಯಸ್ಥರ ಜತೆ ಪ್ರಧಾನಿ ಸಭೆ

    ಆಹಾರದಲ್ಲಿ ಹುಳು, ಜಿರಳೆ: ನಗರ ಹಾಗೂ ಪಟ್ಟಣ್ಣ ಪ್ರದೇಶಗಳ ಹೋಟೆಲ್​ಗಳಲ್ಲಿ ಕ್ವಾರಂಟೈನ್​ಗೆ ಒಳಗಾದವರು ಹಣ ಪಾವತಿಸಿದರೂ, ಸರ್ಕಾರ ಕಡಿಮೆ ದರ ನಿಗದಿ ಮಾಡಿದೆ ಎಂಬ ಕಾರಣಕ್ಕೆ ಹೋಟೆಲ್​ನವರು ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲ. ಇದರಿಂದ ಊಟದಲ್ಲಿ ಜಿರಳೆ ಹಾಗು ಹುಳುಗಳು ದೊರೆತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ.

    ಹಲವು ಘಟನೆ, ಪ್ರತಿಭಟನೆ

    ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಮುಂಬೈನಿಂದ ಬಂದು ಕ್ವಾರಂಟೈನ್​ಗೆ ಒಳಗಾದವರು ಹಾಸ್ಟೆಲ್​ನಲ್ಲಿ ಆಹಾರವನ್ನು ಚೆಲ್ಲಾಡಿ ವಿರೋಧ ವ್ಯಕ್ತಪಡಿಸಿದ್ದರು. ಹೊರ ರಾಜ್ಯಗಳಿಂದ ಬಂದವರಲ್ಲಿ ಹೆಚ್ಚಿನವರು ಕೂಲಿ ಕಾರ್ವಿುಕರು. ಸದಾ ಗುಂಪಿನಲ್ಲಿಯೇ ಇರುವ ಇವರಿಗೆ ಪ್ರತ್ಯೇಕ ವಾಸ ಕಷ್ಟ. ಇದರಿಂದ ಮಾನಸಿಕ ಕಿರಿಕಿರಿ ಅನುಭವಿಸುತ್ತಿದ್ದಾರೆ. ಬೀದರ್​ನ ಕ್ವಾರಂಟೈನ್ ಕೇಂದ್ರದಲ್ಲಿದ್ದ ನವ ವಿವಾಹಿತನೊಬ್ಬ ಅತ್ಮಹತ್ಯೆಗೆ ಶರಣಾಗಿದ್ದಾನೆ. ಮೇಲ್ನೋಟಕ್ಕೆ ಕೌಟುಂಬಿಕ ಕಲಹ ಎಂದು ಹೇಳಲಾಗುತ್ತಿದೆಯಾದರೂ ಕ್ವಾರಂಟೈನ್ ಕೇಂದ್ರದ ಅವ್ಯವಸ್ಥೆಯೂ ಅದಕ್ಕೆ ಪೂರಕ ಎನ್ನುವಂತಿದೆ. ಬೆಂಗಳೂರಿನ ಕೇಂದ್ರದಲ್ಲಿ ತಪಾಸಣೆಗೆ ಹೋಗಿದ್ದ ವೇಳೆ ವ್ಯಕ್ತಿಯೊಬ್ಬ ಆಶಾ ಕಾರ್ಯಕರ್ತೆಯ ಕೈ ಮುರಿದಿದ್ದಾನೆ. ಬಾಗಲಕೋಟೆಯ ಜಮಖಂಡಿಯಲ್ಲಿ ಕಾರ್ವಿುಕರು ತಟ್ಟಿ ಬಾರಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ ಆಂಧ್ರದಲ್ಲಿ ಕ್ರಿಶ್ಚಿಯನ್ನರಿಂದ ಮತಾಂತರ ಹೆಚ್ಚಳ: ಜಗನ್ ಪಕ್ಷದ ಸಂಸದರಿಂದಲೇ ಬಹಿರಂಗ

    ಆರಂಭದಲ್ಲಿದ್ದ ಕಾಳಜಿ ಈಗಿಲ್ಲ

    ರಾಜ್ಯದಲ್ಲಿ ಸೋಂಕು ಕಾಣಿಸಿ ಕೊಂಡ ಆರಂಭದ ದಿನಗಳಲ್ಲಿ ಸೋಂಕಿತರು ಹಾಗೂ ಶಂಕಿತರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು. ಹೀಗಾಗಿ ಅವರ ಬಗ್ಗೆ ಕಾಳಜಿ ವಹಿಸುವುದು, ಸೌಲಭ್ಯ ನೀಡುವುದು ಅಷ್ಟೇನು ಕಷ್ಟವಾಗಿರಲಿಲ್ಲ. ಆದರೀಗ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಸೋಂಕಿತ ರಾಜ್ಯಗಳಿಂದ ಆಗಮಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದರಿಂದ ಒಬ್ಬೊಬ್ಬರನ್ನೇ ಪ್ರತ್ಯೇಕವಾಗಿ ಕ್ವಾರಂಟೈನ್ ಮಾಡುವುದು ಕಷ್ಟವಾಗಲಿದೆ. ಇನ್ನು ಹೋಂ ಕ್ವಾರಂಟೈನ್​ಗೆ ಸೂಚಿಸಿದರೆ ಜನರು ಪಾಲಿಸುವುದಿಲ್ಲ. ಹೀಗಾಗಿ ಸರ್ಕಾರ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆ ಮಾಡಿದೆ. ಒಂದೇ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕ್ವಾರಂಟೈನ್​ನಲ್ಲಿ ಇರಬೇಕಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಸೌಲಭ್ಯಗಳನ್ನು ಒದಗಿಸುವಾಗ ಕೆಲ ಸಮಸ್ಯೆಗಳು ಸಹಜ. ಅಲ್ಲದೆ ಜನರು ಹೆಚ್ಚಾಗುತ್ತಿರುವುದರಿಂದ ಆರಂಭದಲ್ಲಿ ತೋರಿದಷ್ಟು ಕಾಳಜಿ ಈಗ ತೋರಿಸಲು ಸ್ವಲ್ಪ ಕಷ್ಟವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

    ಜೈಲಿನಂತೆ ಭಾವನೆ!

    ಹೊರ ರಾಜ್ಯಗಳಲ್ಲಿ ನೆಲೆಸಿದ್ದವರು ಕುಟುಂಬದವರನ್ನು ಸೇರಲು ತಂಡೋಪ ತಂಡವಾಗಿ ತವರುನೆಲಕ್ಕೆ ಹಿಂದಿರುಗುತ್ತಿದ್ದಾರೆ. ಹೀಗೆ ಬಂದವರು 7 ದಿನ ಸಾಂಸ್ಥಿಕ ಹಾಗೂ 7 ದಿನ ಹೋಂ ಕ್ವಾರಂಟೈನ್​ಗೆ ಒಳಗಾಗಬೇಕು. ಇದಕ್ಕಾಗಿ ಸರ್ಕಾರ ರಾಜ್ಯಾದ್ಯಂತ ಸಾಂಸ್ಥಿಕ ಕ್ವಾರಂಟೈನ್​ಗೆ ವ್ಯವಸ್ಥೆ ಮಾಡಿದೆ. ಕೆಲವರು ಕ್ವಾರಂಟೈನ್ ಕೇಂದ್ರವನ್ನು ಜೈಲಿನಂತೆ ಭಾವಿಸಿದರೆ, ಹಲವರು ಸೌಲಭ್ಯಗಳ ಕೊರತೆಯಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ. ಮತ್ತೆ ಕೆಲವರು ಮಾನಸಿಕ ಒತ್ತಡಕ್ಕೆ ಒಳಗಾಗಿ ಕರೊನಾ ವಾರಿಯರ್ಸ್​ಗಳ ಮೇಲೆ ಹಲ್ಲೆ ನಡೆಸಿದರೆ, ಕೆಲವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆಗಳೂ ವರದಿಯಾಗಿವೆ.

    ಟ್ಯಾಕ್ಸಿಯಲ್ಲಿ ತಾಯಿ-ಮಗಳು

    ಮಂಗಳವಾರವೂ ವಿಮಾನದಿಂದ ಬಂದ ಹಲವು ಪ್ರಯಾಣಿಕರು ಕ್ವಾರಂಟೈನ್​ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ದೆಹಲಿಯಿಂದ ಬಂದಿದ್ದ ತಾಯಿ, ಮಗಳು ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಟ್ಯಾಕ್ಸಿ ಮೂಲಕ ಪರಾರಿಯಾಗಲು ಯತ್ನಿಸಿದರು. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಟ್ಯಾಕ್ಸಿ ಅಡ್ಡಗಟ್ಟಿ ವಾಪಸ್ ಕರೆತಂದು ಕ್ವಾರಂಟೈನ್​ಗೆ ಕರೆದುಕೊಂಡು ಹೋಗಿದ್ದಾರೆ.

    ತನ್ನ ದೇಶದ ನರಿಬುದ್ಧಿಯ ವಿರುದ್ಧವೇ ತಿರುಗಿಬಿದ್ದ ಚೀನಾ ಜನತೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts