More

    ತಿಪ್ಪೆ ಗುಂಡಿಯಾದ ನೂತನ ತಂಗುದಾಣ

    ನಾಲತವಾಡ: ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣದಲ್ಲಿ ಸದ್ಯ ಸ್ವಚ್ಚತೆಯ ಕೊರತೆ ಕಂಡು ಬಂದಿದ್ದು, ಎಲ್ಲೆಂದರಲ್ಲಿ ನಿಲ್ದಾಣದೊಳಗೆ ಪ್ರಯಾಣಿಕರಿಗೆ ಕಸಕಡ್ಡಿ ದರ್ಶನ ಸಾಮಾನ್ಯವಾಗಿದೆ.

    ನಿತ್ಯ ಸಾವಿರಾರು ಪ್ರಯಾಣಿಕರು, ನೂರಾರು ಬಸ್‌ಗಳ ಸಂಚಾರ ಹೊಂದಿದ ಸ್ಥಳೀಯ ಬಸ್ ನಿಲ್ದಾಣದಲ್ಲಿ ಸ್ವಚ್ಛತಾಗಾರರಿಲ್ಲದೇ ಕಸಕಡ್ಡಿ ಘನತ್ಯಾಜ್ಯ ವಸ್ತುಗಳ ತಾಣವಾಗಿದೆ.

    ನಿಲ್ದಾಣದೊಳಗೆ ಹಾಗೂ ಬಸ್ ಸಂಚಾರದ ಅಂಕಣಗಳಲ್ಲಿ ಎಲ್ಲೆಂದರಲ್ಲಿ ಗುಟ್ಖಾ ಉಗುಳಿದ ಪರಿಣಾಮ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಬಸ್ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ನಿತ್ಯ ಸ್ವಚ್ಛತೆಗೆ ಮುಂದಾಗದ ಅಧಿಕಾರಿಗಳ ನಡೆ ಸ್ಥಳೀಯರಲ್ಲಿ ಆಕ್ರೋಶ ಹೊತ್ತಿಸಿದೆ.

    ಕಸಕಡ್ಡಿ, ತಿಂಡಿ ತಿನಿಸುಗಳನ್ನು ಪ್ರಯಾಣಿಕರು ಎಲ್ಲೆಂದರಲ್ಲಿ ಎಸೆಯುವುದರಿಂದ ಪ್ರಯಾಣಿಕರಿಗಾಗಿ ಹಾಕಿರುವ ಆಸನಗಳ ಬಳಿಯಲ್ಲಿ ಕುಳಿತುಕೊಳ್ಳಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಏತನ್ಮದ್ಯೆ ಹಂದಿ ನಾಯಿಗಳ ಉಪಟಳಕ್ಕೆ ತತ್ತರಿಸಿದ ಪ್ರಯಾಣಿಕರು ನಿಲ್ದಾಣದೊಳಗೆ ಕೂರಲು ಆಗದೇ ಹೊರ ಭಾಗದಲ್ಲಿ ನಿಂತು ಬಸ್‌ಗಳನ್ನು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಘಟಕ ವ್ಯವಸ್ಥಾಪಕರು ಹಾಗೂ ಸ್ಥಳೀಯ ಸಾರಿಗೆ ನಿಯಂತ್ರಕರು ಗಮನ ಹರಿಸಬೇಕು ಎನ್ನುತ್ತಾರೆ ಸ್ಥಳೀಯರು.

    ನಿತ್ಯ ಗಡಿ ರಾಜ್ಯ, ಜಿಲ್ಲೆಗಳು ಸೇರಿದಂತೆ ಸುತ್ತಲಿನ ಸುಮಾರು 40 ಹಳ್ಳಿಗಳಿಗೆ ಇದೇ ಬಸ್ ನಿಲ್ದಾಣದ ಮೂಲಕ ಬಸ್‌ಗಳು ಸಂಚರಿಸುತ್ತಿದ್ದು, ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದಂತಾಗಿದೆ. ಗೊತ್ತಿಲ್ಲದ ಪ್ರಯಾಣಿಕರಿಗೆ ಧ್ವನಿವರ್ಧಕದ ಮೂಲಕ ಬಸ್ ಗಳು ತೆರಳುವ ಮಾಹಿತಿ ಹೇಳುವ ವ್ಯವಸ್ಥೆಯೂ ಇಲ್ಲಿ ಇಲ್ಲವಾಗಿದೆ. ನಿಲ್ದಾಣದ ಸ್ವಚ್ಛತೆಗೆ ಅಲ್ಲಲ್ಲಿ ಡಸ್ಟ್‌ಬಿನ್‌ಗಳನ್ನು ಅಳವಡಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts