More

  ಗುಣಮಟ್ಟದ ರಸ್ತೆ ನಿರ್ಮಿಸಿ

  ರಾಯಬಾಗ: ಮತ ಕ್ಷೇತ್ರದಲ್ಲಿ ರಸ್ತೆ, ನೀರಾವರಿ ಯೋಜನೆ, ನೆಲಹಾಸು ಅಳವಡಿಕೆ, ಸಿಸಿ ರಸ್ತೆ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕು ಎಂದು ಶಾಸಕ ಡಿ.ಎಂ. ಐಹೊಳೆ ಹೇಳಿದರು.

  ಶುಕ್ರವಾರ ತಾಲೂಕಿನ ಕಂಕಣವಾಡಿ ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆ ಎಸ್‌ಸಿಪಿ ಯೋಜನೆಯಡಿ ಮಂಜೂರಾದ ಒಂದು ಕೋಟಿ ರೂ. ವೆಚ್ಚದಲ್ಲಿ ಕಮಾಲ ತೋಟದಲ್ಲಿ ನೆಲಹಾಸು ಅಳವಡಿಕೆ ಮತ್ತು ಸಿಸಿ ರಸ್ತೆ ನಿರ್ಮಾಣ ಹಾಗೂ ನಿಪ್ಪಾಣಿ- ಮುಧೋಳ ರಾಜ್ಯ ಹೆದ್ದಾರಿಯ ಕೆನಾಲ್ ರಸ್ತೆಯಿಂದ ಸವಸುದ್ದಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಇನ್ನುಳಿದ ಕಾಮಗಾರಿಗಳನ್ನು ಹಂತ ಹಂತವಾಗಿ ಮಾಡಲಾಗುವುದು ಎಂದರು.

  ಜಿಪಂ ಸದಸ್ಯ ನಿಂಗಪ್ಪ ಪಕಾಂಡಿ, ರಾಜಶೇಖರ ಖನದಾಳೆ, ಅಪ್ಪಾಸಾಬ ಬ್ಯಾಕೂಡೆ, ಸದಾಶಿವ ಘೋರ್ಪಡೆ, ಅಣ್ಣಾಸಾಬ ಖೆಮಲಾಪುರೆ, ಮಹಾಲಿಂಗ ಮುದ್ದಾಪುರೆ, ರಮೇಶ ಪೂಜಾರಿ, ಹಾಲಪ್ಪ ಪೀರಗಿಪಾಟೀಲ, ರೇವಣಸಿದ್ದ ಗಡ್ಕರಿ, ಬಸು ಗಿಡ್ಡವ್ವಗೋಳ, ಮಹಾದೇವ ನಾಯಿಕವಾಡಿ, ಭೀಮಪ್ಪ ನಾಯಿಕವಾಡಿ, ವೈ.ಜಿ. ವಡ್ಡರ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ಆರ್.ಕೆ. ನಿಂಗನೂರೆ, ಅನ್ವರ ಮಿರ್ದೆ ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts