More

    ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ

    ಕೊಕಟನೂರ: ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದ್ದು, ಅಗತ್ಯ ಸೌಲಭ್ಯ ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಅಥಣಿ ಶಾಸಕ ಮಹೇಶ ಕುಮಠಳ್ಳಿ ಹೇಳಿದ್ದಾರೆ.

    ಅಥಣಿ ತಾಲೂಕಿನ ಯಕ್ಕಂಚಿ, ಅಡಹಳ್ಳಟ್ಟಿ, ಅಡಹಳ್ಳಿ, ಕೋಹಳ್ಳಿ, ಕೊಟ್ಟಲಗಿ, ಬನ್ನೂರ ಹಾಗೂ ಸುಟ್ಟಟ್ಟಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಭಾನುವಾರ ನಬಾರ್ಡ್ ಯೋಜನೆಯಡಿ 1.89 ಕೋಟಿ ರೂ. ವೆಚ್ಚದಲ್ಲಿ ಶಾಲಾ ಕೊಠಡಿಗಳ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕೋವಿಡ್-19 ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಇಲಾಖೆ ಮಾರ್ಗಸೂಚಿಯಂತೆ ಶೀಘ್ರದಲ್ಲಿ ವರ್ಗಗಳು ಪ್ರಾರಂಭವಾಗಲಿವೆ. ಅಥಣಿ ಕ್ಷೇತ್ರದಲ್ಲಿ ಹಲವು ಬೇಡಿಕೆಗಳು ಇರುವುದರಿಂದ ಅನುಗುಣವಾಗಿ ಜಾರಿ ಮಾಡಲಾಗುವುದು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಂಡು ಶೀಘ್ರ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಸೂಚಿಸಿದರು. ಚಿದಾನಂದ ಸವದಿ ಮಾತನಾಡಿದರು. ಸಿದ್ದಪ್ಪ ಮುದಕಣ್ಣವರ, ಕುಮಾರ ವೀರಗೌಡ, ಬಸವರಾಜ ಬುಟಾಳಿ, ಶಿವು ಗುಡ್ಡಾಪುರ, ಸದಾಶಿವ ಹರಪಾಳೆ, ಶ್ರೀಶೈಲ ತಾಂವಶಿ, ಈರಣಗೌಡ ಪಾಟೀಲ, ಸುನೀಲ ಕೆಂಚಣ್ಣವರ, ನೂರಅಹಮ್ಮದ್ ಡೊಂಗರಗಾಂವ, ತುಕಾರಾಮ ಪಡತಾರೆ, ಎಇಇ ಜಯಾನಂದ ಹಿರೇಮಠ, ಅಭಿಯಂತ ಶೇಖರ ಕರಿಬಸಪ್ಪಗೋಳ, ಜಿ.ಎಂ.ಗೂಳಪ್ಪನವರ, ಎ.ಜಿ.ಮುಲ್ಲಾ, ಜಿ.ಎಸ್.ಗುಡ್ಡಾಪುರ, ಗಿರೀಶ ಸಜ್ಜನ, ಶಿವು ಜಗದೇವ, ಶಿವಾನಂದ ಶಿಂದೂರ, ತುಕಾರಾಮ ಗೊಂದಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts