More

    ಖಾಸಗಿ ರೈಲಿಗೆ ಉತ್ತೇಜನಕ್ಕೆ ನೀತಿ ಆಯೋಗ ರೂಪುರೇಷೆ

    ನವದೆಹಲಿ: ರೈಲ್ವೆ ಇಲಾಖೆಯಲ್ಲಿ ಖಾಸಗಿ ಸಹಭಾಗಿತ್ವ ಹೆಚ್ಚಿಸಲು ನೀತಿ ಆಯೋಗ ರೂಪುರೇಷೆ ಸಿದ್ಧಪಡಿಸಿದ್ದು, ಕರಡು ಪ್ರಸ್ತಾಪನೆಯನ್ನು ಮಂಡಿಸಲಾಗಿದೆ. ಸರ್ಕಾರಿ ರೈಲುಗಳು ಸಂಚರಿಸುವ ಮಾರ್ಗದಲ್ಲಿ ಖಾಸಗಿ ರೈಲುಗಳು 15 ನಿಮಿಷ ಮುಂಚಿತವಾಗಿ ಸಾಗಬೇಕು. ಗರಿಷ್ಠ ವೇಗ ಮಿತಿ ಗಂಟೆಗೆ 160 ಕಿಮೀ ಇರಬೇಕು ಹಾಗೂ ತಮ್ಮದೇ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಹೊಂದಿರಬೇಕು ಇತ್ಯಾದಿ ಅಂಶಗಳು ಇದರಲ್ಲಿವೆ.

    ಖಾಸಗೀಕರಣ ಸಂಬಂಧ ಹಲವು ಪ್ರಸ್ತಾಪನೆಗಳನ್ನು ನೀತಿ ಆಯೋಗ ತನ್ನ ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡಿದೆ. ಸಾರ್ವಜನಿಕರ ಚರ್ಚೆಗಾಗಿ ಈ ಕ್ರಮಕೈಗೊಳ್ಳಲಾಗಿದೆ. 100 ಮಾರ್ಗಗಳಲ್ಲಿ 150 ಖಾಸಗಿ ರೈಲುಗಳನ್ನು ಓಡಿಸುವ ಯೋಜನೆಯಿದೆ ಎಂದು ಅದು ತಿಳಿಸಿದೆ.

    ಇದಕ್ಕೆ 22,500 ಕೋಟಿ ರೂಪಾಯಿ ಹೂಡಿಕೆ ಅಗತ್ಯವಿದೆ. ಮಾರುಕಟ್ಟೆ ಆಧರಿತ ಪ್ರಯಾಣ ಶುಲ್ಕ ವಿಧಿಸಲು ಖಾಸಗಿಯವರಿಗೆ ಅವಕಾಶವಿದೆ. ಪ್ರಯಾಣ ದರ್ಜೆಯ ವರ್ಗೀಕರಣ (ಕ್ಲಾಸ್) ಹಾಗೂ ನಿಲುಗಡೆ ವಿಚಾರದಲ್ಲೂ ಅವರು ನಿರ್ಧಾರ ಕೈಗೊಳ್ಳಬಹುದಾಗಿದೆ. ದೇಶೀಯ ಅಥವಾ ವಿದೇಶಿ ಸಂಸ್ಥೆಗಳು ಖಾಸಗಿ ರೈಲು ಸಂಚಾರಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಬಹುದು. ಕಳೆದ ಐದು ವರ್ಷಗಳಲ್ಲಿ ಅವರ ಕನಿಷ್ಠ ತಾಂತ್ರಿಕ ವ್ಯವಹಾರ ಸಾಮರ್ಥ್ಯ ರೂ. 2,700 ಕೋಟಿ ಇರಬೇಕು ಎಂದು ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts