More

    ಪುಟ್ಟರಾಜ ಕವಿ ಗವಾಯಿಗಳ 13ನೆಯ ಪುಣ್ಯಸ್ಮರಣೆ

    ಕುಕನೂರು: ಅಂದ ಅನಾಥರಿಗೆ ಅಕ್ಷರ, ಅನ್ನ ಹಾಗೂ ಸಂಗೀತ ಗಾಯನ ನೀಡಿದ ಮಹಾನ್ ಪುರುಷ ಪುಟ್ಟರಾಜ ಗವಾಯಿಗಳು ಎಂದು ಯುವ ಕಲಾವಿದ ಮುರಾರಿ ಭಜಂತ್ರಿ ಹೇಳಿದರು.

    ಇದನ್ನೂ ಓದಿ: ಮಾಜಿ ಶಾಸಕ ಬಿ.ನಾರಾಯಣರಾವ ಪುಣ್ಯಸ್ಮರಣೆ

    ಪಟ್ಟಣದ ಶ್ರೀ ಪಂಚಾಕ್ಷರಿ ಸಂಗೀತ ಸಾಹಿತ್ಯ ಕ್ರೀಡೆ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮತ್ತು ಪ್ರತಿಷ್ಠಿತ ಶ್ರೀ ಪಂಚಾಕ್ಷರಿ ಸಂಗೀತ ಮಹಾವಿದ್ಯಾಲಯದಿಂದ ಗಾನಯೋಗಿ ಪುಟ್ಟರಾಜ ಗವಾಯಿಗಳವರ 13ನೇಯ ಪುಣ್ಯ ಸ್ಮರಣೆ ನಿಮಿತ್ತ ಗವಾಯಿಗಳ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

    ಗಾನಯೋಗಿ ಪುಟ್ಟರಾಜ ಗವಾಯಿಗಳು ಅಂದ ಅನಾಥ ಮಕ್ಕಳಿಗೆ ದಾರಿದೀಪವಾದವರು. ಉಭಯ ಗುರುಗಳ ಇಚ್ಛೆಯಂತೆ ಸಂಗೀತಾ ಸಾಹಿತ್ಯ ನಾಟಕ ಜತೆಗೆ ಸಕಲ ವಾದ್ಯ ನುಡಿಸುವುದನ್ನು ಕಲಿತರು. ಬದುಕಿನ ಉದ್ದಕ್ಕೂ ಸೃಜನಾತ್ಮಕ ಹಾಗೂ ಕ್ರಿಯಾಶೀಲತೆಯಿಂದ ಸಂಗೀತ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದವರು ಎಂದರು.

    ಪಟ್ಟಣದ ಕೋಳಿಪೇಟಿಯ ರಾಘವನಂದ ಮಠದಿಂದ ಸಂತೆಬಜಾರ, ಅನ್ನದಾನೇಶ್ವರ ನಗರ, ಶಿರೂರ ವೀರಭದ್ರಪ್ಪ ಸರ್ಕಲ್, ಬಸ್ ನಿಲ್ದಾಣ ರಸ್ತೆ ಮಾರ್ಗವಾಗಿ ಪುಟ್ಟರಾಜು ಗವಾಯಿಗಳ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು..

    ಮುಖಂಡರಾದ ಬಸವರಾಜ ಕಿತ್ತೂರ್, ಅನಿಲ್, ನಾಗರಾಜ ಹೇರೂರು, ನಾಗಪ್ಪ ನರೇಗಲ್, ಅಂಬರೀಶ್ ಬಡಿಗೇರ್, ಭಾಸ್ಕರ್ ಆಚಾರ, ರಮೇಶ್ ಬಳಿಗಾರ, ಸಣ್ಣ ಯಮನೂರಪ್ಪ ಭಜಂತ್ರಿ, ಚಂದ್ರಶೇಖರ್ ಕಿತ್ತೂರ, ನೂರಸಾಬ್ ನದಾಫ್, ಮುಕುಂದ ಭಜಂತ್ರಿ, ಮಾರುತಿ ಭಜಂತ್ರಿ, ರಾಘವೇಂದ್ರ ಮೇಣದಾಳ, ಯಮನೂರಪ್ಪ ಭಜಂತ್ರಿ, ಬಸವರಾಜ, ಸುಮಂತ, ಶ್ರೀಕಾಂತ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts