More

    ಎರಡು ಭಾಗಗಳಲ್ಲಿ ಪುಷ್ಪ: ‘ಕೆಜಿಎಫ್’ ಮಾರ್ಗದಲ್ಲಿಯೇ ಹೆಜ್ಜೆ

    ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಚಿತ್ರ ಸಹ ‘ಬಾಹುಬಲಿ’ ಮತ್ತು ‘ಕೆಜಿಎಫ್’ ಚಿತ್ರಗಳ ಮಾರ್ಗದಲ್ಲಿಯೇ ಹೆಜ್ಜೆ ಇಟ್ಟಿದೆ. ಮುಂಚೆ ಈ ಎರಡೂ ಚಿತ್ರಗಳು ಪ್ರಾರಂಭವಾದ ಹೊಸದರಲ್ಲಿ, ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಬಹುದು ಎಂದು ಎರಡೂ ಚಿತ್ರತಂಡಗಳು ಊಹಿಸಿರಲಿಲ್ಲ.

    ಎರಡೂ ಚಿತ್ರಗಳು ಚಿತ್ರೀಕರಣ ಹಂತದಲ್ಲಿ ಬೆಳೆಯುತ್ತಾ ಹೋಗಿ, ಕೊನೆಗೆ ಎರಡು ಭಾಗಗಳಲ್ಲಿ ಬಿಡುಗಡೆ ಮಾಡಬೇಕಾಯಿತು. ಇದೀಗ ‘ಪುಷ್ಪ’ ಸಹ ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ.

    ಆರಂಭದಲ್ಲಿ ಒಂದು ಚಿತ್ರ ಮಾಡುವುದಕ್ಕೆ ಹೊರಟಿದ್ದರು ನಿರ್ದೇಶಕ ಸುಕುಮಾರ್. ದಿನೇದಿನೆ ಚಿತ್ರಕಥೆ ಬೆಳೆದು, ಅದನ್ನು ಒಂದು ಭಾಗದಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ ಎಂಬ ತೀರ್ವನಕ್ಕೆ ಬಂದಿರುವ ಅವರು, ಈಗ ಎರಡು ಭಾಗಗಳಲ್ಲಿ ಚಿತ್ರವನ್ನು ತೆರೆಗೆ ತರುವುದಕ್ಕೆ ಮುಂದಾಗಿದ್ದಾರಂತೆ. ಈಗಾಗಲೇ ಒಂದು ಭಾಗದ ಚಿತ್ರೀಕರಣ ಬಹುತೇಕ ಮುಗಿದಿದೆ.

    ಹಾಗಾಗಿ, ಈ ವರ್ಷದ ಕೊನೆಗೆ ಮೊದಲ ಭಾಗವನ್ನು ಬಿಡುಗಡೆ ಮಾಡಿ, ಮುಂದಿನ ವರ್ಷ ಎರಡನೆಯ ಭಾಗದ ಚಿತ್ರೀಕರಣ ಮಾಡಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತೀರ್ವನಿಸಿದೆಯಂತೆ. ‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್​ಗೆ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದು, ಮಿಕ್ಕಂತೆ ಡಾಲಿ ಧನಂಜಯ್, ಫಹಾದ್ ಫಾಸಿಲ್ ಮುಂತಾದವರು ಚಿತ್ರದಲ್ಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts