More

    ಐಕಾನ್​ ಸ್ಟಾರ್​ ಜನ್ಮದಿನಕ್ಕೆ ‘ಪುಷ್ಪ 2’ ಟೀಸರ್​! ಬಹುನಿರೀಕ್ಷಿತ ಚಿತ್ರದ ಬಗ್ಗೆ ಇಲ್ಲಿದೆ ಮಾಹಿತಿ

    ಆಂಧ್ರಪ್ರದೇಶ: ರಾಷ್ಟ್ರಪ್ರಶಸ್ತಿ ವಿಜೇತ, ಟಾಲಿವುಡ್​ನ ಐಕಾನ್​ ಸ್ಟಾರ್​, ನಟ ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಪ್ಯಾನ್​ ಇಂಡಿಯಾ ‘ಪುಷ್ಪ 2’ ಟೀಸರ್ ಬಗ್ಗೆ ಹೊಸ ಅಪ್ಡೇಟ್​ ಹೊರಬಿದ್ದಿದ್ದು, ಸ್ವತಃ ನಟನೇ ಚಿತ್ರದ ಕುರಿತಂತೆ ಹೊಸ ಪೋಸ್ಟ್​ ಹಂಚಿಕೊಂಡಿದ್ದಾರೆ. ಸಿನಿಮಾದ ಟೀಸರ್​ಗಾಗಿ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ.

    ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನ ಐಡಿ ಕಾರ್ಡ್ ದುರುಪಯೋಗ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಗಂಭೀರ ಆರೋಪ

    ಪುಷ್ಪಾ: ದಿ ರೂಲ್‌ನ ಬಹುನಿರೀಕ್ಷಿತ ಟೀಸರ್ ನಾಳೆ (ಏ.08) ಸ್ಟೈಲಿಶ್ ಸ್ಟಾರ್‌ನ 42ನೇ ಹುಟ್ಟುಹಬ್ಬದಂದೇ ಅನಾವರಣಗೊಳಿಸಲು ಚಿತ್ರತಂಡ ಸಜ್ಜಾಗಿದೆ. ಚಿತ್ರದ ಟೀಸರ್​ನ ಬಿಟಿಎಸ್​ನ ಫೋಟೋವೊಂದನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಅಲ್ಲು ಅರ್ಜುನ್​ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದಾರೆ.

    “ಆಲ್​ ಸೆಟ್” ಎಂಬ ಶೀರ್ಷಿಕೆಯೊಂದಿಗೆ ಟೀಸರ್ ಸಾರ್ವಜನಿಕ ವೀಕ್ಷಣೆಗೆ ಸಿದ್ಧವಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ಮೊದಲ ಭಾಗದ ಟೀಸರ್​ ಅನ್ನು 2021ರಲ್ಲಿ ಅಲ್ಲು ಅರ್ಜುನ್ ಅವರ ಜನ್ಮದಿನದಂದು ಅನಾವರಣಗೊಳಿಸಲಾಗಿತ್ತು. ಈ ಬಾರಿಯೂ ಕೂಡ ಅದೇ ರೀತಿ ಟೀಸರ್​ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದಲ್ಲಿ ಫಹದ್ ಫಾಸಿಲ್, ಸುನಿಲ್, ಅನಸೂಯಾ ಭಾರದ್ವಾಜ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದು, ನಿರ್ದೇಶಕ ಸುಕುಮಾರ್ ಚಿತ್ರವನ್ನು ನಿರ್ದೇಶಿಸಿದ್ದಾರೆ,(ಏಜೆನ್ಸೀಸ್). 

    ಆರ್​ಸಿಬಿ ಮ್ಯಾನೆಜ್​ಮೆಂಟ್​ಗೆ ಬುದ್ದಿ ಕಲಿಸಲು ಮುಂದಾದ್ರು ಫ್ಯಾನ್ಸ್​! ಹೀಗೆ ಮಾಡೋದೇ ಸರಿ ಅಂತಿದ್ದಾರೆ…

    ಮುಖದಲ್ಲಿ ಕಪ್ಪು ಕಲೆ ಹೋಗ್ತಿಲ್ವಾ? ಚಿಂತೆ ಬಿಡಿ! ಈ 2 ತರಕಾರಿಯಲ್ಲಿದೆ ಚಮತ್ಕಾರ, ಟ್ರೈ ಮಾಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts