More

    ಶ್ರೀ ದುರ್ಗಾಂಬ ದೇವಿ ದೇಗುಲದಲ್ಲಿ ಸ್ಪಚ್ಛತಾ ಕಾರ್ಯ

    ಕಡೂರು:ತಾಲೂಕಿನ ಅಂತರಘಟ್ಟೆ ಗ್ರಾಮದ ಶ್ರೀದುರ್ಗಾಂಬ ದೇವಿ ಜಾತ್ರಾ ಮಹೋತ್ಸವ ಸಂಪನ್ನಗೊಂಡ ಬಳಿಕ ಸೋಮವಾರ ದೇವಾಲಯಕ್ಕೆ ತರೀಕೆರೆ ಎಸಿ ಕಾಂತರಾಜ್ ಭೇಟಿ ನೀಡಿ ದೇಗುಲದ ಆವರಣವನ್ನು ಶುಚಿಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
    ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ ದೇವಾಲಯದಲ್ಲಿ ಒಂದು ವಾರದಿಂದ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ದೇವಾಲಯದ ಸುತ್ತಾ ಭಕ್ತರು ದೇವರಿಗೆ ಅರ್ಪಿಸಿದ್ದ ಹೂವು, ಪೂಜಾ ಸಾಮಾಗ್ರಿಗಳು, ಪ್ಲಾಸ್ಟಿಕ್ ಮತ್ತು ಕುರಿ, ಕೋಳಿಗಳ ತಾಜ್ಯದ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ಇದರಿಂದ ಆಕ್ರೋಶಗೊಂಡ ಎಸಿ ಕಾಂತರಾಜು, ದೇವಾಲಯದ ಪರಿಸರದ ಶುಚಿತ್ವ ಕಾಪಾಡಲು ನಿರ್ಲಕ್ಷ್ಯ ವಹಿಸಿದ್ದ ಕಂದಾಯ ವಿಭಾಗದ ಅಧಿಕಾರಿಗಳು ಮತ್ತು ಪಂಚಾಯಿತಿ ಸಿಬ್ಬಂದಿಗಳಿಗೆ ಕೂಡಲೇ ಆವರಣದಲ್ಲಿರುವ ತ್ಯಾಜ್ಯ ಸ್ವಚ್ಚಗೊಳಿಸುವಂತೆ ನಿರ್ದೇಶಿಸಿ ಸ್ವತಃ ಸಿಬ್ಬಂದಿ ಜತೆ ಎರಡು ತಾಸಿಗೂ ಹೆಚ್ಚು ಕಾಲ ಸ್ವಚ್ಚತೆಯಲ್ಲಿ ಕೈಜೋಡಿಸಿದರು.
    ನಂತರ ಮಾತನಾಡಿದ ಅವರು, ಸ್ವಚ್ಚತೆ ಎಂಬುದು ಒಂದು ದಿನಕ್ಕೆ ಸೀಮಿತಗೊಳಿಸದೆ ಪ್ರತಿ ನಿತ್ಯ ದೇವಾಲಯದ ಆವರಣವನ್ನು ಶುಚಿಯಾಗಿಟ್ಟುಕೊಳ್ಳಬೇಕು. ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆಯ ಪ್ರಮಾಣ ಹೆಚ್ಚಾಗುತ್ತಿದ್ದು. ಭಕ್ತರಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಲೋಪವಾಗದಂತೆ ಅಧಿಕಾರಿಗಳು ಮುಂದಾಗುವಂತೆ ಸೂಚನೆ ನೀಡಲಾಗಿದೆ ಎಂದರು.
    ಅಂತರಘಟ್ಟೆ ಗ್ರಾಪಂ ಉಪಾಧ್ಯಕ್ಷೆ ಸವಿತಾ ಪಾಟೀಲ್ ಮಾತನಾಡಿ, ಅಸಂಖ್ಯಾತ ಭಕ್ತರನ್ನು ಹೊಂದಿರುವ ದೇವಾಲಯದಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸ್ವಚ್ಚತೆ ಇಲ್ಲದೆ ದೇವಾಲಯ ಸಾಕಷ್ಟು ಮಲೀನಗೊಂಡಿತ್ತು. ಈ ಬಗ್ಗೆ ತರೀಕೆರೆ ಎಸಿ ಅವರಿಗೆ ಮನವರಿಕೆ ಮಾಡಿಕೊಡಲಾಯಿತು. ಗ್ರಾಪಂನಿಂದ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ದೇವಾಲಯದ ಸ್ಚಚ್ಚತೆಗೆ ಭಕ್ತರ ಸಹಕಾರ ಮುಖ್ಯವಾಗಲಿದೆ ಎಂದರು.
    ತರೀಕೆರೆ ತಹಸೀಲ್ದಾರ್ ವಿ.ಎಸ್.ರಾಜೀವ್, ಕಂದಾಯ ನಿರೀಕ್ಷಕ ಗಿರೀಶ್, ಅಂತರಘಟ್ಟೆ ಗ್ರಾಪಂ ಅಧ್ಯಕ್ಷ ಅಂಜನಪ್ಪ ಸೇರಿದಂತೆ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts