More

    ಪುರಾತನ ಕಲ್ಯಾಣಿ ಮರು ನಿರ್ಮಾಣ

    ಹರಪನಹಳ್ಳಿ: ತಾಲೂಕಿನ ದೇವರ ತಿಮ್ಲಾಪುರ ಸಮೀಪದ ಪುರಾತನ ಪುಷ್ಕರಣಿ ಮಜ್ಜನಬಾವಿಯ ರಕ್ಷಣಾಗೋಡೆ ಮರುನಿರ್ಮಾಣಕ್ಕೆ ತಾಲೂಕು ಪಂಚಾಯಿತಿ ನರೇಗಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಕಳೆದ ವರ್ಷ ಭಾರಿ ಮಳೆಗೆ ಪುಷ್ಕರಣಿಯ ಕಲ್ಲಿನಗೋಡೆ ಕುಸಿದಿದ್ದ ಬಗ್ಗೆ ‘ಐತಿಹಾಸಿಕ ಮಜ್ಜನಬಾವಿ ದುರಸ್ತಿಗೆ ಕಡೆಗಣನೆ’ ಶೀರ್ಷಿಕೆಯಡಿ ವಿಜಯವಾಣಿ ಪತ್ರಿಕೆ ಜು.14ರಂದು ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ತಹಸೀಲ್ದಾರ್ ಶಿವಕುಮಾರ ಬಿರಾದಾರ ಹಾಗೂ ತಾಪಂ ಇಒ ಸೂಚನೆ ಮೇರೆಗೆ ತಾಪಂ ನರೇಗಾ ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ್ ನೇತೃತ್ವದ ತಂಡ, ಐತಿಹಾಸಿಕ ಮಜ್ಜನಬಾವಿಗೆ ಜು.13ರಂದು ಭೇಟಿ ನೀಡಿ ಕಲ್ಲಿನ ಗೋಡೆ ಮರು ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಗೆ ಮುಂದಾಗಿದೆ.

    ಈ ಕುರಿತು ಮಾಹಿತಿ ನೀಡಿರುವ ನರೇಗಾ ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ್, ಐತಿಹಾಸಿಕ ಬಾವಿಯ ಮರು ನಿರ್ಮಾಣಕ್ಕೆ ತಾಂತ್ರಿಕ ಸಿಬ್ಬಂದಿ, ವಿಶೇಷ ಪರಿಣಿತ ಕೂಲಿಕಾರರಿಂದ ಕಾಮಗಾರಿ ನಿರ್ವಹಿಸಲು ಕ್ರಮಕೈಗೊಳ್ಳಲಾಗುವುದು. ಬಾವಿಯಲ್ಲಿ ನೀರು ತುಂಬಿದ್ದು, ತಾತ್ಕಲಿಕವಾಗಿ ಅದನ್ನು ಹೊರ ಹಾಕಿ ಹೂಳು ತೆಗೆದು ಮೂರು ತಿಂಗಳೊಳಗೆ ಕಾಮಗಾರಿ ಮುಗಿಸುವುದಾಗಿ ಹೇಳಿದರು.

    ತಾಂತ್ರಿಕ ಸಂಯೋಜಕ ಆರ್.ನಾಗರಾಜನಾಯ್ಕ, ಐಸಿಸಿ ಸಂಯೋಜಕ ಕೆ.ವಸಿಗೇರಪ್ಪ ಚಾಗನೂರು, ತಾಂತ್ರಿಕ ಸಹಾಯಕ ಯೋಗೀಶ್, ಅಡವಿಹಳ್ಳಿ ಗ್ರಾಪಂ ಸದಸ್ಯ ಮಂಜುನಾಥ, ಪ್ರಸನ್ನ ಪೂಜಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts