More

    ಪುರಾತನ ದೇಗುಲಕ್ಕೆ ಕನ್ನ ಹಾಕಿದ ಕಳ್ಳರು

    ಕಮಲಾಪುರ: ಮಹಾಗಾಂವ್‌ನಲ್ಲಿರುವ ಸುಮಾರು ೩೦೦ ವರ್ಷದ ಹಳೆಯ ಶ್ರೀ ದುರ್ಗಾಲಕ್ಷ್ಮೀ ದೇವಸ್ಥಾನ ಸೇರಿ ಎರಡು ದೇಗುಲಗಳಲ್ಲಿ ಕಳ್ಳತನ ನಡೆದ ಘಟನೆ ಶುಕ್ರವಾರ ನಸುಕಿನ ಜಾವ ಜರುಗಿದೆ.

    ದುರ್ಗಾಲಕ್ಷ್ಮೀ ದೇಗುಲದಲ್ಲಿ ದೇವಿಯ ಮೇಲಿದ್ದ ಸುಮಾರು ೫ ತೊಲಾ ಬಂಗಾರ ಹಾಗೂ ಒಂದಿಷ್ಟು ಬೆಳ್ಳಿಯ ಆಭರಣ ಕಳ್ಳತನ ಮಾಡಲಾಗಿದೆ. ಇನ್ನು ಲಕ್ಷ್ಮೀ ದೇವಸ್ಥಾನದಲ್ಲಿ ಬಂಗಾರದ ತಾಳಿ ದೋಚಲಾಗಿದೆ.

    ಅರ್ಚಕರು ಎಂದಿನಂತೆ ದೇವಸ್ಥಾನದಲ್ಲಿ ಪೂಜೆ ಕಾರ್ಯ ನೆರವೇರಿಸಿ ರಾತ್ರಿ ಬೀಗ ಹಾಕಿ ಮನೆಗೆ ಬಂದಿದ್ದಾರೆ. ನಸುಕಿನ ಜಾವ ದೇಗುಲಕ್ಕೆ ನುಗ್ಗಿದ ಕಳ್ಳರು, ಕಬ್ಬಿಣದ ರಾಡ್ ಮೂಲಕ ದೇವಿಯ ಮೂರ್ತಿ ಮೇಲಿನ ಆಭರಣವನ್ನು ಕಳುವು ಮಾಡಿದ್ದಾರೆ. ಬಳಿಕ ಕಳ್ಳತನಕ್ಕೆ ಬಳಸಿದ ರಾಡ್ ಅನ್ನು ಹೊರಗಡೆ ಬಿಸಾಡಿ ಹೋಗಿದ್ದಾರೆ. ಬೆಳಗ್ಗೆ ಪೂಜೆಗಾಗಿ ದೇವಸ್ಥಾನಕ್ಕೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ನಂತರ ಆರಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಶ್ವಾನ ದಳ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ದುರ್ಗಾಲಕ್ಷ್ಮೀ ಅತ್ಯಂತ ಹಳೇ ದೇವಸ್ಥಾನವಾಗಿದ್ದು, ಇಲ್ಲಿವರೆಗೂ ಒಮ್ಮೆಯೂ ಕಳ್ಳತನ ನಡೆದಿಲ್ಲ. ಸದಾ ಜನರಿಂದ ತುಂಬಿರುತ್ತದೆ. ಅಲ್ಲದೆ ರಾತ್ರಿ ವೇಳೆ ಗ್ರಾಮಸ್ಥರು ದೇವಸ್ಥಾನದ ಕಟ್ಟೆಯ ಮೇಲೆಯೇ ಮಲಗುತ್ತಾರೆ. ಆದರೆ ಇದೀಗ ಸಾಕಷ್ಟು ಚಳಿ ಇರುವುದರಿಂದ ಜನರು ದೇಗುಲದತ್ತ ಸುಳಿದಿಲ್ಲ. ಇದೇ ಸಮಯಕ್ಕಾಗಿ ಕಾದಿದ್ದ ಕಳ್ಳರು ದೇವಸ್ಥಾನಕ್ಕೆ ನುಗ್ಗಿ ಆಭರಣ ಕದ್ದು ಪರಾರಿಯಾಗಿದ್ದಾರೆ.

    ಪಿಎಸ್‌ಐ ಆಶಾ ರಾಠೋಡ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಹಾಗಾಂವ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಶ್ರೀ ದುರ್ಗಾಲಕ್ಷ್ಮೀ ದೇಗುಲ ತುಂಬಾ ಹಳೆಯದ್ದಾಗಿದ್ದು, ಅಸಂಖ್ಯಾತ ಭಕ್ತರನ್ನು ಹೊಂದಿದೆ. ಗುರುವಾರ ರಾತ್ರಿ ಪೂಜೆ ಮುಗಿಸಿ, ದೇಗುಲಕ್ಕೆ ಬೀಗ ಹಾಕಿ ಮನೆಗೆ ಹೋಗಿದ್ದೇನೆ. ಬೆಳಗ್ಗೆ ಜನರು ಕಳ್ಳತನ ಆಗಿರುವುದು ತಿಳಿಸಿದ್ದಾರೆ. ಶುಕ್ರವಾರದಂದು ದೇವಿಯ ಆಭರಣ ಕದ್ದಿದ್ದು, ಕಳ್ಳರಿಗೆ ದೇವಿಯೇ ತಕ್ಕ ಶಿಕ್ಷೆ ನೀಡುತ್ತಾಳೆ.
    | ನಾಗಪ್ಪ ನಾಟೀಕಾರ, ಅರ್ಚಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts