More

    ಹಲವರ ತ್ಯಾಗ, ಬಲಿದಾನದ ಪ್ರತೀಕವೇ ರಾಮಮಂದಿರ

    ಕಮಲಾಪುರ: ನೂರಾರು ವರ್ಷಗಳ ಕನಸು ಇದೀಗ ನನಸಾಗುತ್ತಿದೆ. ಹಲವರ ತ್ಯಾಗ, ಬಲಿದಾನದಿಂದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣಗೊಂಡಿದ್ದು, ಮುಂದಿನ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಶ್ರೀನಿವಾಸ ಸರಡಗಿಯ ಶ್ರೀ ಡಾ.ಅಪ್ಪಾರಾವ ದೇವಿ ಮುತ್ಯಾ ಹೇಳಿದರು.

    ಶ್ರೀ ರೇವಣಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ವಿಶ್ವ ಹಿಂದು ಪರಿಷತ್‌ನಿಂದ ಶನಿವಾರ ಹಮ್ಮಿಕೊಂಡಿದ್ದ ಅಯೋಧ್ಯೆಯ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಡೀ ವಿಶ್ವವೇ ರಾಮನ ಆಗಮನಕ್ಕಾಗಿ ಕಾಯುತ್ತಿದೆ. ಜ.೨೨ರಂದು ಮರ್ಯಾದ ಪುರುಷೋತ್ತಮ ತನ್ನ ಸನ್ನಿಧಾನಕ್ಕೆ ಮರಳುತ್ತಿದ್ದಾನೆ. ಜ.೨೮ರಂದು ರಾಜ್ಯದ ಜನತೆಗೆ ದರ್ಶನಕ್ಕೆ ಅವಕಾಶ ನೀಡಿದ್ದು, ಎಲ್ಲರೂ ರಾಮನೂರಿಗೆ ಹೋಗಿ ದರ್ಶನ ಪಡೆಯೋಣ ಎಂದರು.

    ಕಲಮೂಡದ ಶ್ರೀ ಶರಣಶಂಕರಲಿಂಗ ಮಹಾರಾಜ, ಲಾಡಮುಗಳಿಯ ಶ್ರೀ ಅಭಿನವ ಬಸವಲಿಂಗ ಸ್ವಾಮೀಜಿ, ಕಮಲಾಪುರದ ಶ್ರೀ ಶಾಂತಲಿಂಗ ದೇವರು, ಗೊಬ್ಬುರವಾಡಿಯ ಶ್ರೀ ಬಳಿರಾಮ ಮಹಾರಾಜ, ಮಹಾಗಾಂವ್ ಕಳ್ಳಿಮಠದ ಶ್ರೀ ವಿರೂಪಾಕ್ಷ ದೇವರು, ಶಾಸಕ ಬಸವರಾಜ ಮತ್ತಿಮಡು, ವಿಎಚ್‌ಪಿ ಉತ್ತರ ಕರ್ನಾಟಕ ಪ್ರಾಂತ ಕಾರ್ಯದರ್ಶಿ ಸುರೇಶ ಹೇರೂರ, ಪ್ರಮುಖರಾದ ಶಿವರಾಜ ಸಂಗೋಳಗಿ, ಅವಿನಾಶ ಮಡಿವಾಳ, ಉದಯಕುಮಾರ ರಟಕಲ್, ರಾಜಕುಮಾರ ಕೋಟೆ, ಜಯಶ್ರೀ ಮತ್ತಿಮಡು, ಗೋರಕನಾಥ ಶಖಾಪುರೆ, ಶಿವಕುಮಾರ ದೊಶೆಟ್ಟಿ, ಮಲ್ಲಿಕಾರ್ಜುನ ಮರತೂರಕರ, ಸತೀಶ ಸೊರಡೆ, ಶಿವಕುಮಾರ ಸಂಗೋಳಗಿ, ಕೆ.ಸಿ.ಪಾಟೀಲ್, ಚನ್ನು, ಪ್ರಕಾಶ ರಡ್ಡಿ, ವಿನೋದ ಪಾಟೀಲ್ ಇತರರಿದ್ದರು.

    ಶ್ರೀ ರೇವಣಸಿದ್ಧೇಶ್ವರ ಕಲ್ಯಾಣ ಮಂಟಪದಿಂದ ಪ್ರಮುಖ ಬೀದಿಗಳಲ್ಲಿ ಶ್ರೀ ರಾಮ ಭಾವಚಿತ್ರದೊಂದಿಗೆ ಮಂತ್ರಾಕ್ಷತೆ ಹಾಗೂ ಕಳಶದ ಭವ್ಯ ಮೆರವಣಿಗೆ ನಡೆಯಿತು. ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆಗಳು ಮೊಳಗಿದವು. ರಾಜಕುಮಾರ ಮಂಠಾಳೆ ಸ್ವಾಗತಿಸಿದರು. ಪ್ರವೀಣ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts