More

    ರಾಜೀವ ಕುಂಬಿ ಪುರಸಭೆ ಸದಸ್ಯತ್ವ ರದ್ದು

    ಲಕ್ಷೆ್ಮೕಶ್ವರ: ಅಧಿಕಾರ ದುರುಪಯೋಗ ಆರೋಪದಡಿ ಪುರಸಭೆ ಸದಸ್ಯ ರಾಜೀವ ಕುಂಬಿ ಅವರ ಸದಸ್ಯತ್ವವನ್ನು ಜಿಲ್ಲಾಧಿಕಾರಿ ರದ್ದುಗೊಳಿಸಿದ್ದಾರೆ.

    ಪುರಸಭೆಯ ವಾರ್ಡ್ ನಂ. 15ರ ಸದಸ್ಯ ರಾಜೀವ ಗೊಡಚಪ್ಪ ಕುಂಬಿ ರಾಜಕೀಯ ಪ್ರಭಾವ ಬಳಸಿಕೊಂಡು ಅವರ ಸಹೋದರ ವಿಜಯ ಗೊಡಚಪ್ಪ ಕುಂಬಿ (2ನೇ ದರ್ಜೆ ಗುತ್ತಿಗೆದಾರರು) ಅವರಿಗೆ ಕಾನೂನು ಬಾಹಿರವಾಗಿ ಪುರಸಭೆಯ ಕಾಮಗಾರಿಗಳನ್ನು ಗುತ್ತಿಗೆ ಕೊಡಿಸುವಲ್ಲಿ ಸಹಕರಿಸಿದ್ದಾರೆ. ಅವರ ಸದಸ್ಯತ್ವ ಅನರ್ಹಗೊಳಿಸುವಂತೆ ಕರವೇ(ಪ್ರವೀಣ ಶೆಟ್ಟಿ ಬಣ) ತಾಲೂಕಾಧ್ಯಕ್ಷ ಮಹೇಶ ಕಲಘಟಗಿ ದಾಖಲೆಗಳೊಂದಿಗೆ 2022ರ ಫೆ.7ರಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದ್ದು.

    ಈ ದೂರಿನ ಅನ್ವಯ ಜಿಲ್ಲಾ ಉಪವಿಭಾಗಾಧಿಕಾರಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರು ಮತ್ತು ಪುರಸಭೆ ಮುಖ್ಯಾಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ರಾಜೀವ ಕುಂಬಿ ವಿರುದ್ಧದ ಆರೋಪಗಳು ದೃಢಪಟ್ಟಿದ್ದು, ಅವರ ಸದಸ್ಯತ್ವ ರದ್ದುಗೊಳಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ರಾಜೀವ ಕುಂಬಿ 3 ಬಾರಿ ಸದಸ್ಯರಾಗಿ, ನಾಮನಿರ್ದೇಶಿತ ಮತ್ತು ಪುರಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts