More

    ಪುರ ಪ್ರವೇಶಿಸಿದ ತೊಂಡಿತೇರಪ್ಪ ರಥ

    ಕನಕಗಿರಿ: ಪಟ್ಟಣ ಹೊರ ವಲಯದ ಶ್ರೀ ತೊಂಡಿತೇರಪ್ಪ ಜಾತ್ರೆ ನಿಮಿತ್ತ ಹೊಸದಾಗಿ ನಿರ್ಮಿಸಿರುವ ರಥವು ಶನಿವಾರ ಪುರ ಪ್ರವೇಶ ಮಾಡಿದ್ದು, ರಾಜಬೀದಿಯಲ್ಲಿ ಅದ್ದೂರಿ ಮೆರವಣಿಗೆ ಮಾಡಲಾಯಿತು.

    ಇದನ್ನೂ ಓದಿ:http://ಪುರ ಪ್ರವೇಶಿಸಿದ ತೊಂಡಿತೇರಪ್ಪ ರಥ

    ಪ್ರತಿ ಶ್ರಾವಣ ಮಾಸದ ಕೊನೆಯ ಶನಿವಾರ ನಡೆಯುವ ತೊಂಡಿತೇರಪ್ಪ ಜಾತ್ರೆಯಲ್ಲಿ ಉತ್ಸವ ಮೂರ್ತಿಯನ್ನೊತ್ತ ಉಚ್ಛಾಯ ಜರುಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದಿಂದ ರಥವನ್ನು ಎಳೆಯಬೇಕೆನ್ನುವ ಸಮಿತಿಯ ಇಚ್ಛೆಯಂತೆ,

    ಭಕ್ತರ ಸಹಕಾರದಿಂದ 16.5 ಲಕ್ಷ ರೂ. ವೆಚ್ಚದಲ್ಲಿ ನೂತನ ರಥವನ್ನು ಗಂಗಾವತಿ ಹಾಗೂ ಮುದಗಲ್‌ನಲ್ಲಿ ಸಿದ್ಧಪಡಿಸಲಾಗಿದೆ. ರಥದ ಸಾಮಗ್ರಿಗಳು ಲಾರಿಗಳಲ್ಲಿ ಪಟ್ಟಣಕ್ಕೆ ಬಂದಿದ್ದು, ಮೇಲುಗಡೆ ಅಗಸೆಯಲ್ಲಿನ

    ಆಂಜನೇಯ ದೇವಸ್ಥಾನದ ಬಳಿ ಪೂಜೆ ಸಲ್ಲಿಸಿ, ತೊಂಡಿತೇರಪ್ಪ ದೇವಸ್ಥಾನದವರೆಗೆ 2 ಕಿ.ಮೀ ಅದ್ದೂರಿ ಮೆರವಣಿಗೆ ನಡೆಯಿತ. ತಾಷಾ ರೋಲ್, ಡೊಳ್ಳು, ಮೇಳ, ಕೋಲಾಟ, ಗೊಂಬೆ ವೇಷಧಾರಿಗಳು ಮೆರವಣಿಗೆಗೆ ಶೋಭೆ ತಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts