More

    ಪುಟಾಣಿ ಪುನರ್ವಗೆ ದಾಖಲೆಯ ಗೌರವ ; ಸಾಮಾನ್ಯಜ್ಞಾನ ವಿಭಾಗದಲ್ಲಿ ಕರ್ನಾಟಕ ಅಚೀವರ್ ಬುಕ್‌ನಲ್ಲಿ ಸ್ಥಾನ

    ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ಮೂರು ವರ್ಷದ ಪುಟಾಣಿ ಎಂ. ಪುನರ್ವಗೆ ಕರ್ನಾಟಕ ಅಚೀವರ್ ಬುಕ್ ಆಫ್ ರೆಕಾರ್ಡ್ಸ್ ಗೌರವ ದೊರೆತಿದೆ. ಸಾಮಾನ್ಯಜ್ಞಾನ ವಿಭಾಗದಲ್ಲಿ ಮಗುವಿಗೆ ಈ ಗೌರವ ಸಂದಾಯವಾಗಿದೆ.

    ದೊಡ್ಡ ಬಳ್ಳಾಪುರದ ಬಸವೇಶ್ವರ ನಗರದ ನಿವಾಸಿ ಮಂಜುನಾಥ್ ಮತ್ತು ಸ್ವಾತಿ ದಂಪತಿ ಪುತ್ರಿ ಪುನರ್ವ ವಯಸ್ಕರು, ಯುವಕ/ ಯುವತಿಯರು ನಾಚುವಂತೆ ಎಲ್ಲ ಸಾಮಾನ್ಯಜ್ಞಾನ ಪ್ರಶ್ನೆಗಳಿಗೆ ಥಟ್ ಅಂಥ ಉತ್ತರ ಕೊಟ್ಟು ಗಮನಸೆಳೆಯುತ್ತಿದ್ದಾಳೆ. ಭಾರತದ ಮೂವತ್ತು ರಾಜ್ಯಗಳು, ರಾಜಧಾನಿಗಳ ಹೆಸರು, 150 ಜನ ಮಹಾನ್ ಸಾಧಕರ ಹೆಸರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರು, ಕರ್ನಾಟಕದ 30 ಜಿಲ್ಲೆಗಳು, ಪ್ರಪಂಚದ ವಿವಿಧ ದೇಶಗಳ ಹೆಸರು, 90 ಪ್ಲಾಷ್‌ಕಾರ್ಡ್ಸ್ ಹೆಸರುಗಳು ಸೇರಿ ಸಾಮಾನ್ಯಜ್ಞಾನದ 80 ಪ್ರಶ್ನೆಗಳಿಗೆ ಥಟ್ ಎಂದು ಉತ್ತರ ನೀಡಿದ್ದಾಳೆ.

    ಇನ್ನು ವಿವಿಧ ಹಣ್ಣು, ತರಕಾರಿ, ಬಣ್ಣ, ವಾಹನಗಳ ಹೆಸರು ಹಾಗೂ ಮಾನವ ದೇಹದ ಅಂಗಾಂಗಗಳು, ಕನ್ನಡ ವರ್ಣಮಾಲೆ, 12 ತಿಂಗಳು, ಇಂಗ್ಲಿಷ್ ಅಕ್ಷರಮಾಲೆ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ವಿಶ್ವದ 197 ರಾಷ್ಟ್ರಧ್ವಜಗಳನ್ನು ಗುರುತಿಸಿ, ಆಯಾ ದೇಶದ ಹೆಸರನ್ನು ಪಟಪಟನೆ ಹೇಳುವ ಆಕೆ, ಕರ್ನಾಟಕ ಅಚೀವರ್ ಬುಕ್ ಆ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದು ದಾಖಲೆ ನಿರ್ಮಿಸಿದ್ದಾಳೆ. ಪುಟಾಣಿಯ ಅಪ್ರತಿಮ ಸಾಧನೆಗೆ ಎಸ್‌ಪಿ ರವಿ ಡಿ. ಚನ್ನಣ್ಣನವರ್ ಅಚ್ಚರಿ ವ್ಯಕ್ತಪಡಿಸಿದ್ದು, ಆಕೆಯನ್ನು ಪಾಲಕರೊಂದಿಗೆ ತಮ್ಮ ಕಚೇರಿಗೆ ಕರೆಯಿಸಿಕೊಂಡು ಸನ್ಮಾನಿಸಿದ್ದಾರೆ.

    ಮಗಳ ಗ್ರಹಿಕೆಯ ಶಕ್ತಿ ಹಾಗೂ ಚಾಕಚಕ್ಯತೆ ಯಿಂದ ಅಚ್ಚರಿಯಾಗಿತ್ತು. ಪ್ರತಿದಿನ ಹೇಳಿಕೊಟ್ಟಿದ್ದನ್ನು ನೆನಪಿನಲ್ಲಿ ಇರಿಸಿ ಕೊಳ್ಳುತ್ತಿದ್ದಳು. ಮುಂದೆ ಐಎಎಸ್ ಅಧಿಕಾರಿ ಮಾಡುವ ಆಸೆ ಇದೆ. ಕರ್ನಾಟಕ ಅಚೀವರ್ ಬುಕ್ ಆಫ್ ರೆಕಾರ್ಡ್ಸ್‌ಗೆ ಈಕೆಯ ಹೆಸರು ಸೇರಿದ್ದು ಸಂತಸ ತಂದಿದೆ.
    ಸ್ವಾತಿ ಪುನರ್ವ ತಾಯಿ

    ಮೂರು ವರ್ಷದ ಪುಟಾಣಿ ಈ ಪರಿಯ ಗ್ರಹಿಕೆಯ ಶಕ್ತಿ ಇರುವುದು ಅದ್ಭುತವೇ ಸರಿ. ಮುಂದಿನ ದಿನಗಳಲ್ಲಿ ರಾಜ್ಯ, ದೇಶ ಹೆಮ್ಮೆ ಪಡುವ ಸಾಧನೆ ಮಾಡಲಿ.
    ರವಿ ಡಿ. ಚನ್ನಣ್ಣನವರ್ ಬೆಂಗಳೂರು ಗ್ರಾಮಾಂತರ ಎಸ್‌ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts