More

    ಸಾಧಕರ ಚರಿತ್ರೆ ಜನರಿಗೆ ತಿಳಿಯಲಿ

    ಬೆಳಗಾವಿ: ಕನ್ನಡ ನಾಡಿನಲ್ಲಿ ಅನೇಕ ಮಹನೀಯರು ಎಲೆಮರೆ ಕಾಯಿಯಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದು, ಈಗಿನ ಪಿಳಿಗೆಗೆ ಇಂತಹ ಮಹಾನ್ ವ್ಯಕ್ತಿಗಳ ಬದುಕಿನ ಚರಿತ್ರೆ ತಿಳಿಸುವಂತಹ ಕಾರ್ಯ ನಡೆಯಬೇಕಿದೆ ಎಂದು ಸಾಹಿತಿ ಸುನಂದಾ ಎಮ್ಮಿ ಹೇಳಿದರು.

    ಇಲ್ಲಿನ ನೆಹರು ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲೆ ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜಿಲ್ಲೆಯ ಶತಮಾನ ಕಂಡ ಸಾಹಿತಿಗಳು ತಿಂಗಳ ಕಾರ್ಯಕ್ರಮದಲ್ಲಿ ಡಾ.ಶಿ.ಚ. ನಂದಿಮಠ ಅವರ ಬದುಕು ಬರಹ ಕುರಿತು ಅವರು ಉಪನ್ಯಾಸ ನೀಡಿದರು.

    ದಿವಂಗತ ಡಾ. ಶಿ.ಚ. ನಂದಿಮಠ ರವರು ಶಿಕ್ಷಣ ತಜ್ಞ, ವಿದ್ವಾಂಸ, ಸಾಹಿತಿಯಾಗಿ ಸುಮಾರು 123 ವರ್ಷಗಳ ಹಿಂದೆ ಕನ್ನಡ ನಾಡಿನಲ್ಲಿ ಅತ್ಯದ್ಬುತ ಸೇವೆ ಸಲ್ಲಿಸಿದ್ದರು. ಸಾಹಿತ್ಯಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರವಾಗಿ ಶ್ರಮಿಸಿದ ಅವರು ವ್ಯಕ್ತಿಯಾಗಿರದೆ ಶಕ್ತಿಯಾಗಿದ್ದರು ಎಂದರು. ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ , ಯರಗಟ್ಟಿ ತಾಲೂಕಾಧ್ಯಕ್ಷ ಟಿ.ಎಂ.ಕಾಮಣ್ಣವರ, ಬೆಳಗಾವಿ ತಾಲೂಕಾಧ್ಯಕ್ಷ ಸುರೇಶ ಹಂಜಿ, ಸಾಹಿತಿ ಸಾ.ರಾ.ಸುಳಕುಡೆ, ಡಾ.ಸೋಮಶೇಖರ ಹಲಸಗಿ, ಜ್ಯೋತಿ ಬಾದಾಮಿ, ಪ್ರತಿಭಾ ಕಳ್ಳಿಮಠ, ಶೈಲಜಾ ಬಿಂಗೆ, ಬಿ.ಡಿ.ಮಠಪತಿ, ಸುರೇಶ ಕರವಿನಕೊಪ್ಪ, ರುದ್ರಮ್ಮ ಯಾಳಗಿ, ರತ್ನಕ್ಕಾ ಜೊಂಡ, ಶಿವಾನಂದ ತಲ್ಲೂರ, ವೀರಭದ್ರ ಅಂಗಡಿ, ಗುರು ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts