More

    ಬಿಜೆಪಿ ಸರ್ಕಾರಗಳ ಹಾದಿ ಹಿಡಿದ ‘ಕೈ’ ಸರ್ಕಾರ; ಪಂಜಾಬಿನಲ್ಲೂ ಇಂಧನ ಬೆಲೆ ಕಡಿತ

    ಚಂಡೀಗಡ: ದೀಪಾವಳಿಯ ಸಂದರ್ಭಕ್ಕೆ ಇಂಧನ ಬೆಲೆಗಳನ್ನು ಕಡಿತಗೊಳಿಸಿ ಜನರ ಒಲವು ಪಡೆಯಲು ಯತ್ನಿಸಿದ ಕೇಂದ್ರ ಬಿಜೆಪಿ ಸರ್ಕಾರದೊಂದಿಗೆ 10 ರಾಜ್ಯಗಳಲ್ಲಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳೂ ಹೆಚ್ಚುವರಿ ತೆರಿಗೆ ಕಡಿತಗೊಳಿಸಿದವು. ಇದೀಗ ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ಪಂಜಾಬಿನ ಕಾಂಗ್ರೆಸ್​ ಸರ್ಕಾರವೂ ಅದೇ ಹಾದಿ ತುಳಿಯುತ್ತಿದೆ.

    ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್​ ಬೆಲೆಯನ್ನು 10 ರೂಪಾಯಿಯಷ್ಟು ಮತ್ತು ಡೀಸೆಲ್ ಬೆಲೆಯನ್ನು 5 ರೂಪಾಯಿಯಷ್ಟು ಕಡಿತಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದು ಪಂಜಾಬ್​ ಸಿಎಂ ಚರಣಜೀತ್ ಸಿಂಗ್​ ಚನ್ನಿ ಘೋಷಿಸಿದ್ದಾರೆ.

    ಇದನ್ನೂ ಓದಿ: ಪುನೀತ್ ಸಾವಿನಿಂದ ಖಿನ್ನತೆಗೆ ಒಳಗಾಗಿ ಊಟ-ತಿಂಡಿ ಬಿಟ್ಟಿದ್ದ ಅಭಿಮಾನಿಯ ಸಾವು!

    ಈ ದೊಡ್ಡ ಪ್ರಮಾಣದ ಹೆಚ್ಚುವರಿ ಕಡಿತದಿಂದಾಗಿ ಸುತ್ತಮುತ್ತಲ ಪ್ರದೇಶಗಳಲ್ಲೆಲ್ಲಾ ಪಂಜಾಬ್​ನಲ್ಲೇ ಪೆಟ್ರೋಲ್​ ಅತ್ಯಂತ ಅಗ್ಗವಾಗಿದೆ. ದೆಹಲಿಗೆ ಹೋಲಿಸಿದರೆ, ಪಂಜಾಬಿನಲ್ಲಿ ಈಗ ಪೆಟ್ರೋಲ್​ ದರ 9 ರೂಪಾಯಿ ಕಡಿಮೆ ಆಗಿದೆ. ಈ ರೀತಿ ಕಳೆದ 70 ವರ್ಷಗಳಲ್ಲಿ ನಡೆದಿಲ್ಲ ಎಂದೂ ಸಿಎಂ ಚನ್ನಿ ಹೇಳಿದ್ದಾರೆ.

    ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ಪಂಜಾಬಿನಲ್ಲಿ ಪೆಟ್ರೋಲ್​ ಪ್ರತಿ ಲೀಟರ್​​ಗೆ 96.16 ರೂ. ಬೆಲೆಗೆ ಸಿಗಲಿದೆ ಮತ್ತು ಡೀಸೆಲ್​ 84.80 ರೂ.ಗೆ ಸಿಗಲಿದೆ. ರಾಜಧಾನಿ ಚಂಡೀಗಡದಲ್ಲಿ ಮತ್ತಷ್ಟು ಅಗ್ಗವಾಗಲಿದ್ದು, ಪೆಟ್ರೋಲ್​ ದರ ₹ 94.23 ಮತ್ತು ಡೀಸೆಲ್​ ₹ 80 ಆಗಲಿದೆ. ದೆಹಲಿ, ಉತ್ತರಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ಜಮ್ಮು-ಕಾಶ್ಮೀರದಲ್ಲಿ ಬೆಲೆಗಳು ಇದಕ್ಕಿಂತ ಹೆಚ್ಚಿವೆ ಎನ್ನಲಾಗಿದೆ.

    ಇದನ್ನೂ ಓದಿ: ಹಬ್ಬದಂದೇ ನೈಟ್‌ ಕರ್ಫ್ಯೂ ಹಿಂಪಡೆದ ಸರ್ಕಾರ: ಇಂದು ರಾತ್ರಿ ದೀಪಾವಳಿ ಮತ್ತಷ್ಟು ಜಗಮಗ…

    ದೀಪಾವಳಿಯ ಮುನ್ನಾದಿನದಂದು ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ₹ 5 ಮತ್ತು ₹ 10 ರಷ್ಟು ಕಡಿತಗೊಳಿಸಿತ್ತು. ಬಿಜೆಪಿ ಆಡಳಿತದ ಹತ್ತು ರಾಜ್ಯಗಳು – ಅಸ್ಸಾಂ, ತ್ರಿಪುರಾ, ಮಣಿಪುರ, ಕರ್ನಾಟಕ, ಗೋವಾ, ಉತ್ತರ ಪ್ರದೇಶ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ – ಇದನ್ನು ಅನುಸರಿಸಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚುವರಿ ಕಡಿತವನ್ನು ಘೋಷಿಸಿದ್ದವು. ಈ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. (ಏಜೆನ್ಸೀಸ್)

    VIDEO| ಪುನೀತ್​ರನ್ನು ಗಂಗಾವತಿ ಪೊಲೀಸರು ಈಗಲೂ ನೆನಪಿಸಿಕೊಳ್ಳೋದು ಯಾಕೆ ಗೊತ್ತಾ?

    ಕ್ರೂಸ್​ ಪಾರ್ಟಿಗೆ ಆರ್ಯನ್​ನ ಕರ್ಕೊಂಡು ಹೋಗಿದ್ರು! ಮಹಾ ಸಚಿವನಿಂದ ಮತ್ತಷ್ಟು ಸ್ಫೋಟಕ ಹೇಳಿಕೆ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts