More

    ಪಂಜಾಬ್​​ನಲ್ಲಿ ಮಾರುಕಟ್ಟೆಗೆ ಬಂತು ಹೊಸ ಇಮ್ಯೂನಿಟಿ ಬೂಸ್ಟರ್​ ಹಾಲು…!

    ಚಂಡಿಗಡ್​: ಕರೊನಾ ಬಂದ ಮೇಲೆ ಪ್ರತಿಯೊಬ್ಬರೂ ಇಮ್ಯೂನಿಟಿ ಹೆಚ್ಚಿಸುವ ಹಣ್ಣು, ತರಕಾರಿ, ಕಷಾಯಗಳ ಮೊರೆ ಹೋಗುತ್ತಿದ್ದಾರೆ.

    ಹಾಗೇ ಪಂಜಾಬ್​ನ ಹಾಲು ಉತ್ಪಾದಕರ ಸಂಘವೂ ಕೂಡ ಈಗ ರೋಗನಿರೋಧಕ ಶಕ್ತಿ ಉತ್ತೇಜಕ ಹಾಲನ್ನು ಪರಿಚಯಿಸಿದ್ದು, ಅದನ್ನು ಮುಖ್ಯಮಂತ್ರಿ ಅಮರಿಂದರ್​ ಸಿಂಗ್​ ಇಂದು ಬಿಡುಗಡೆ ಮಾಡಿದ್ದಾರೆ.

    ಪಂಜಾಬ್​ನ ಹಾಲು ಉತ್ಪಾದಕರ ಸಂಘ ತಯಾರಿಸುವ ವೆರ್ಕಾ ಶಕ್ತಿ ಹಾಲಿನ ಜತೆ ಇದೀಗ ವೆರ್ಕಾ ಹಳದಿ ಅಥವಾ ಅರಿಶಿಣ ಯುಕ್ತ ಹಾಲಿನ ಪೊಟ್ಟಣವೂ ಸೇರಿಕೊಂಡಿದ್ದು, ಜನರು ಇದನ್ನು ಖರೀದಿಸಿ ಉಪಯೋಗಿಸಬಹುದಾಗಿದೆ.
    ಇಂದು ವೆರ್ಕಾ ಹಳದಿಯನ್ನು ಬಿಡುಗಡೆ ಮಾಡಿರುವ ಮುಖ್ಯಮಂತ್ರಿ, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಹಾಲನ್ನು ಕೊಂಡು ಉಪಯೋಗಿಸುತ್ತಾರೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಂದು ಸೋನಿಯಾ ಗಾಂಧಿ ನಡೆಸಿದ ಸಭೆಯಲ್ಲೂ ಮತ್ತದೇ ‘ರಾಗಾ’: ರಾಹುಲ್​ ಗಾಂಧಿ ನಿರ್ಧಾರವೊಂದೇ ಬಾಕಿ

    ಈ ಬಗ್ಗೆ ಮಾತನಾಡಿದ ಸಹಕಾರ ಸಚಿವ ಸುಖ್ಜಿಂದರ್​ ಸಿಂಗ್ ರಾಂಧವ ಅವರು, ಪಟಿಯಾಲಾದಲ್ಲಿರುವ ಪಂಜಾಬ್​ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಅಭಿವೃದ್ಧಿ ಪಡಿಸಲಾದ ಮತ್ತು ಪೇಟೆಂಟ್​ ಪಡೆದ ವಿಶಿಷ್ಟವಾದ ಹಲ್ದಿ (ಅರಿಶಿಣ) ಹಾಲು ಇದು. ಇಲ್ಲಿ ಬಳಸಲಾದ ಅರಿಶಿಣ ಸಾಮಾನ್ಯ ಅರಿಶಿಣಕ್ಕಿಂತ 10 ಪಟ್ಟು ಹೆಚ್ಚು ಪರಿಣಾಮಕಾರಿ ಎಂದು ತಿಳಿಸಿದ್ದಾರೆ.

    ಪಂಜಾಬ್​ನ ಎಲ್ಲ ವೆರ್ಕಾ ಹಾಲಿನ ಬೂತ್​ಗಳು ಹಾಗೂ ಪ್ರಮುಖ ಮಳಿಗೆಗಳಲ್ಲಿ ಈ ಹಲ್ದಿ ಹಾಲು ಸಿಗಲಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

    ಈದ್ಗಾ ಮೈದಾನದಲ್ಲಿ ಬೇಡ…ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ: ತೆಲಂಗಾಣ ವಕ್ಫ್​ ಮಂಡಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts