More

    ಕಾನೂನು ಬಾಹಿರ ಕೆಲಸ ಮಾಡಿದರೆ ಶಿಕ್ಷೆ ಖಚಿತ: ಎಚ್.ಎಸ್.ಸುರೇಶ್

    ಸೊರಬ: ಸಾರ್ವಜನಿಕರ ಹಾಗೂ ಜನಪ್ರತಿನಽಗಳ ಒತ್ತಡಕ್ಕೆ ಸಿಲುಕಿ ಕಾನೂನು ಬಾಹಿರವಾಗಿ ಸರ್ಕಾರಿ ಕೆಲಸ ಕಾರ್ಯಗಳನ್ನು ಮಾಡಿಕೊಟ್ಟರೆ ಅಽಕಾರಿಗಳು ಶಿಕ್ಷೆ ಎದರಿಸಬೇಕಾಗುತ್ತದೆ ಎಂದು ಜಿಲ್ಲಾ ಲೋಕಾಯುಕ್ತ ಇನ್ಸ್ಪೆಕ್ಟರ್ ಎಚ್.ಎಸ್ ಸುರೇಶ್ ಎಚ್ಚರಿಕೆ ನೀಡಿದರು.
    ಪಟ್ಟಣದ ತಾಲೂಕು ಕಚೇರಿಯಲ್ಲಿ ಜಿಲ್ಲಾ ಲೋಕಾಯುಕ್ತ ಪೊಲೀಸ್‌ರಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.
    ಸಾರ್ವಜನಿಕರು ಕೆಲವೊಮ್ಮೆ ಅಽಕಾರಗಳ ಮೇಲೆ ಒತ್ತಡ ತರುವುದು ಸಾಮಾನ್ಯ. ಅಽಕಾರಿಗಳು ಸಾರ್ವಜನಿಕರಿಗೆ ತಿಳಿಸಿ ಹೇಳಬೇಕು. ಇಲ್ಲವಾದರೆ ಅರ್ಹರು ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ತಾವೂ ಅಪರಾಽ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ನಿಯಮಾನುಸಾರ ಕೆಲಸ ಮಾಡಿಕೊಡಿ. ಇಲ್ಲವಾದರೆ ಅವರಿಗೆ ಹಿಂಬರ ಬರೆದು ಕೊಡಿ. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಇಲ್ಲವಾದರೆ ಅವರು ಲೋಕಾಯುಕ್ತಕ್ಕೆ ದೂರು ನೀಡುವುದು ಅನಿವಾರ್ಯ ಎಂದರು.
    ತಹಸೀಲ್ದಾರ್ ಹುಸೇನ್ ಸರಕಾವಸ್ ಮಾತನಾಡಿ, ಸರ್ಕಾರಿ ಅಽಕಾರಿಗಳು ಯೋಜನೆಗಳ ಬಗ್ಗೆ ಸಾರ್ವಜನಿಕರ ಗಮನಕ್ಕೆ ತರುವುದರ ಜತೆಗೆ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಪ್ರಚಾರ ಪಡಿಸಬೇಕು. ಸಾರ್ವಜನಿಕರು ಅರ್ಜಿ ಹಿಡಿದು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ ಎಂದು ಹೇಳಿದರು.
    ತಾಲೂಕಿನ ಆಲಹಳ್ಳಿಯ ಈಶ್ವರಪ್ಪ ಎಂಬುವವರು ಭೂ ನ್ಯಾಯ ಮಂಡಳಿಯಿAದ ಜಮೀನು ಮಂಜೂರಾದರು ಖಾತೆ ಮಾಡಿಕೊಟ್ಟಿಲ್ಲ ಎಂದು ದೂರು ನೀಡಿದ ಅರ್ಜಿ ಮಾತ್ರ ಸಲ್ಲಿಕೆಯಾಗಿತ್ತು. ಉಳಿದಂತೆ ಪುರಸಭೆ ಸದಸ್ಯ ಪ್ರಸನ್ನಕುಮಾರ ಮಾತನಾಡಿ, ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಕಟ್ಟಲು ಹೋದಾಗ ಸಿಬ್ಬಂದಿ ಇರಲಿಲ್ಲ. ಮರುದಿನ ಕಟ್ಟಲು ಹೋದರೆ ಅವಽ ಮುಗಿದಿದೆ ಎಂದು ಹೆಚ್ಚಿನ ಬಡ್ಡಿ ಕಟ್ಟಬೇಕು ಎಂದು ಹೇಳುತ್ತಾರೆ ಎಂದು ದೂರ ನೀಡಲು ಮುಂದಾದಾಗ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಲೋಕಾಯುಕ್ತ ಇನ್ಸ್ಪೆಕ್ಟರ್ ಹೇಳಿದರು.
    ಕಳೆದೆರಡು ವರ್ಷಗಳ ಹಿಂದೆ ಕೆರೆಹಳ್ಳಿ ಗ್ರಾಮದಲ್ಲಿ ಮಂಗ ಕಡಿದ ಮಹಿಳೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ನಾಗರಾಜ್ ಎಂಬುವವರು ಸಭೆಯಲ್ಲಿ ದೂರಿದರು. ಇದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಯಿAದಲೂ ಸರಿಯಾದ ಉತ್ತರ ದೊರೆಯುತ್ತಿಲ್ಲ. ಬೆಳೆ ಸುಟ್ಟಿರುವ ಹಾಗೂ ಕಳಪೆ ಬೀಜ ನೀಡಿ ಬೆಳೆ ಬಾರದೆ ರೈತರಿಗೆ ಪರಿಹಾರ ನೀಡುವ ಕುರಿತು ಕೃಷಿ ಹಾಗೂ ತೋಟಗಾರಿಕ ಅಽಕಾರಿಗಳ ಜತೆ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಚರ್ಚಿಸಿದರು.
    ಇಒ ಡಾ. ಪ್ರದೀಪ್ ಕುಮಾರ್, ಕೃಷಿ ಸಹಾಯಕ ನಿರ್ದೇಶಕ ಕೆ.ಜಿ.ಕುಮಾರ, ತೋಟಗಾರಿಕ ಸಹಾಯಕ ನಿರ್ದೇಶಕ ಮಂಜುನಾಥ, ಪುರಸಭೆ ಮುಖ್ಯಾಽಕಾರಿ ಬಾಲಚಂದ್ರ, ಕ್ಷೇತ್ರ ಶಿಕ್ಷಣಾಽಕಾರಿ ಸತ್ಯನಾರಾಯಣ, ಜಿಪಂ ಕುಡಿಯುವ ನೀರು ಸರಬರಾಜು ಇಲಾಖೆಯ ನಾಗರಾಜ ಅಣ್ವೇಕರ್, ಸಂತೋಷ್, ಚಂದ್ರಪ್ಪ, ಲೋಕಯುಕ್ತ ಸಿಬ್ಬಂದಿ ಸುರೇಂದ್ರ, ಅರುಣ್‌ಕುಮಾರ್, ಕೆ.ಸಿ.ಜಯಂತ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts