More

    ನಿಯಮ ಪಾಲಿಸದಿದ್ದರೆ ಶಿಸ್ತುಕ್ರಮ; ಸಚಿವ ಆನಂದ್‌ಸಿಂಗ್ ಎಚ್ಚರಿಕೆ; ಘನತ್ಯಾಜ್ಯ ಸಂಸ್ಕರಣಾ ಘಟಕ ಪರಿಶೀಲನೆ

    ದಾಬಸ್‌ಪೇಟೆ: ಸೋಂಪುರ ಹೋಬಳಿಯಲ್ಲಿನ ಘನತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿ ಘಟಕದ ನಿರ್ವಹಣೆ ಸಮರ್ಪಕವಾಗಿಲ್ಲ ಎಂಬುದು ಗಮನಕ್ಕೆ ಬಂದಿದೆ. ಸರ್ಕಾರದ ನಿಯಮಗಳ ಅನ್ವಯ ಘಟಕ ಕಾರ್ಯನಿರ್ವಹಿಸಲಿದ್ದರೆ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಅರಣ್ಯ ಹಾಗೂ ಪರಿಸರ ಸಚಿವ ಆನಂದ್ ಸಿಂಗ್ ಎಚ್ಚರಿಕೆ ನೀಡಿದರು.

    ಸೋಂಪುರ ಹೋಬಳಿಯ ಪೆಮ್ಮನಹಳ್ಳಿ – ತಿಮ್ಮನಾಯ್ಕನಹಳ್ಳಿ ಬಳಿಯ ಘನತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿ ಘಟಕಕ್ಕೆ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು. ಈ ಸಂಸ್ಕರಣಾ ಘಟಕದಲ್ಲಿ ತ್ಯಾಜ್ಯ ವಿಲೇವಾರಿ ಹಾಗೂ ತ್ಯಾಜ್ಯ ಸಂಸ್ಕರಣೆ ನಿರ್ವಹಣೆ ಸಮರ್ಪಕವಾಗಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಖುದ್ದು ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.

    ಸ್ಥಳೀಯರ ಸಹಕಾರದೊಂದಿಗೆ ಸರ್ಕಾರ ನಿಯಮಗಳನ್ನು ಪಾಲಿಸಬೇಕು. ಮತ್ತೊಮ್ಮ ಇಲ್ಲಿಗೆ ಭೇಟಿ ನೀಡಿದಾಗ ಇಂಥದ್ದೆ ಪರಿಸ್ಥಿತಿ ಕಂಡುಬಂದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದರು. ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣಾ ಘಟಕದ ಬಗ್ಗೆ ಹಲವು ವರ್ಷದಿಂದ ನಿರಂತರ ದೂರು ಬರುತ್ತಿದೆ. ಇದೇ ಕೊನೆಯ ಎಚ್ಚರಿಕೆ. ಮುಂದಿನ ದಿನಗಳಲ್ಲಿ ಇಂಥ ದೂರುಗಳು ಬರದಂತೆ ಜಾಗ್ರತೆ ವಹಿಸಬೇಕು ಎಂದರು.

    ಸ್ಥಳೀಯರ ಒತ್ತಾಯ: ಘಟಕದಲ್ಲಿ ನಿರಂತರ ತ್ಯಾಜ್ಯ ಸಂಸ್ಕರಣೆ ನಡೆಯುತ್ತಿದೆ. ಇದರಿಂದ ಹರಡುವ ವಾಸನೆ ಪ್ರಮಾಣವೂ ಹೆಚ್ಚಾಗಿದೆ. ಇದನ್ನು ತಡೆಯಲು ಈ ಪ್ರದೇಶದಲ್ಲಿ 200 ಮೀಟರ್ ಬಫರ್ ಜೋನ್ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

    ದುರ್ವಾಸನೆ ಬರದಂತೆ ಕ್ರಮ: ಈ ಕಾರ್ಖಾನೆಯ ಸುತ್ತಮುತ್ತ ಸಾಕಷ್ಟು ಗ್ರಾಮಗಳಿವೆ.ಜತೆಗೆ ದಾಬಸ್‌ಪೇಟೆ ಪಟ್ಟಣಕ್ಕೆ ತುಂಬಾ ಹತ್ತಿರದಲಿದೆ. ಈ ಘಟಕದಿಂದ ದುರ್ವಾಸನೆ ಬಾರದಂತೆ ಕ್ರಮ ವಹಿಸಬೇಕೆಂದು ಸೂಚನೆ ನೀಡಲಾಗಿದೆ ಎಂದು ಸಚಿವರು ಭರವಸೆ ನೀಡಿದರು.

    ಕರೊನಾ ನಿಯಂತ್ರಣದಲ್ಲಿ ಸಾಧನೆ: ಕರೊನಾ ಮಹಾಮಾರಿ ವಿಶ್ವವನ್ನೇ ತಲ್ಲಣಗೊಳಿಸಿದೆ. ರಾಜ್ಯದಲ್ಲಿ ಕರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಲವಾಗಿದೆ. ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರು ಸೇರಿ ಕೇಂದ್ರ ಸರ್ಕಾರದ ಪೂರಕ ನೆರವಿನೊಂದಿಗೆ ಕರೊನಾ ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸಲಾಗುತ್ತಿದೆ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದರು.

    ಸಮಸ್ಯೆ ತೋಡಿಕೊಂಡ ಮುಖಂಡರು: ಘಟಕ ಆರಂಭದಿಂದಲೂ ಸಾಕಷ್ಟು ಸಮಸ್ಯೆ ಎದುರಾಗಿದೆ. ಸಂಜೆ ವೇಳೆ ಸಾರ್ವಜನಿಕರ ಓಡಾಟಕ್ಕೂ ತೊಂದರೆಯಾಗಿದೆ. ತ್ಯಾಜ್ಯ ಘಟಕದ ವಿಷಕಾರಿ ಲಿಚೆಟ್ ಅಂತರ್ಜಲ ಸೇರಿ ಕೊಳವೆಬಾವಿಗಳಲ್ಲಿ ನೀರು ಕಲುಷಿತಗೊಂಡಿವೆ. ಘಟಕದಿಂದ ಬರುವ ನೀರನ್ನು ಕುಡಿದು ಜಾನುವಾರುಗಳು ಮೃತಪಟ್ಟಿವೆ. ಸುತ್ತಮತ್ತಲ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಇಲ್ಲಿನ ಗಬ್ಬುವಾಸನೆಗೆ ಸಾರ್ವಜನಿಕರು ಮೂಗುಮುಚ್ಚಿಕೊಂಡೇ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಪಂ.ಮಾಜಿ ಅಧ್ಯಕ್ಷ ಉಮಾಶಂಕರ್, ಜಿಪಂ ಸದಸ್ಯ ನಂಜುಂಡಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎಂ.ಉಮಾಶಂಕರ್, ಮುಖಂಡ ನಂಜುಂಡಯ್ಯ ಸಚಿವರ ಎದುರು ಸಮಸ್ಯೆ ತೋಡಿಕೊಂಡರು. ರಾಮಕಿ ಕಂಪನಿ ವ್ಯವಸ್ಥಾಪಕ ಅಮಿತ್ ಚೌಧರಿ ಘಟಕ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts